‘ನನ್ನನ್ನು ಅಣ್ಣ, ಅಂಕಲ್ ಎಂದು ಕರೆಯಬೇಡಿ’ ಉಬರ್ ಡ್ರೈವರ್ ವಿನಂತಿ
Uber Driver : ಈ ಪೋಸ್ಟ್ಗೆ ಉಬರ್ ಕಂಪೆನಿ ಪ್ರತಿಕ್ರಿಯಿಸಿದೆ. ಜೊತೆಗೆ, ‘ವ್ಯಕ್ತಿಯ ವೃತ್ತಿ, ಸ್ಥಾನಮಾನದ ಬಗ್ಗೆ ತಾರತಮ್ಯ ಮಾಡದೆ ಪ್ರತಿಯೊಬ್ಬರನ್ನೂ ಸಮಾನವಾಗಿ ಗೌರವಿಸುವುದು ಮಾನವೀಯತೆಯ ಗುರಿಯಾಗಬೇಕು’ ಎಂದಿದ್ದಾರೆ ನೆಟ್ಟಿಗರೊಬ್ಬರು.
Viral : ಸೀಟಿನ ಹೆಡ್ರೆಸ್ಟ್ನ ಮೇಲೆ ಉಬರ್ ಚಾಲಕರೊಬ್ಬರು, ‘ನನ್ನನ್ನು ಅಣ್ಣ, ಅಂಕಲ್ ಎಂದು ಕರೆಯಬೇಡಿ’ ಎಂದು ನೋಟ್ ಬರೆದಿರುವ ಪೋಸ್ಟ್ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಈ ಪೋಸ್ಟ್ ಹಂಚಿಕೊಂಡು ಮಜವಾಗಿರುವ ನೋಟ್ ಅನ್ನು ಓದಿ ಓದಿ ನಗುತ್ತಿದ್ದಾರೆ ಜೊತೆಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಬಿಝಿನೆಸ್ ಜರ್ನಲಿಸ್ಟ್ ಸೋಹಿನಿ ಎಂ. ಸೆ.27ರಂದು ಉಬರ್ ಇಂಡಿಯಾಗೆ ಟ್ಯಾಗ್ ಮಾಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಬರ್ ಕಂಪೆನಿಯೇ ಈ ಪೋಸ್ಟ್ಗೆ ಖುದ್ದಾಗಿ ಪ್ರತಿಕ್ರಿಯಿಸಿದೆ.
? ? ? @Uber_India pic.twitter.com/S8Ianubs4A
— Sohini M. (@Mittermaniac) September 27, 2022
‘ಈ ನೋಟ್ನ ಪ್ರಕಾರ, ಇಂಥ ಸಂದರ್ಭವನ್ನು ತಪ್ಪಿಸಲು ಪರ್ಯಾಯ ಮಾರ್ಗವನ್ನು ಗ್ರಾಹಕರು ಕಂಡುಕೊಳ್ಳಬೇಕು. ಡ್ರೈವರ್ ಹೆಸರಿನ ಬಗ್ಗೆ ಅನುಮಾನ ಉಂಟಾದಲ್ಲಿ, ಉಬರ್ ಆ್ಯಪ್ ಮೂಲಕ ಹೆಸರನ್ನು ಖಚಿತಪಡಿಸಿಕೊಂಡು ಸಂಬೋಧಿಸುವುದು ಒಳ್ಳೆಯದು’ ಎಂದು ಉಬರ್ ಪ್ರತಿಕ್ರಿಯಿಸಿದೆ.
ಈ ಪೋಸ್ಟ್ 3,000 ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 200ಕ್ಕಿಂತಲೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ‘ವ್ಯಕ್ತಿಯ ವೃತ್ತಿ, ಸ್ಥಾನಮಾನದ ಬಗ್ಗೆ ತಾರತಮ್ಯ ಮಾಡದೆ ಪ್ರತಿಯೊಬ್ಬರನ್ನೂ ಸಮಾನವಾಗಿ ಗೌರವಿಸುವುದು ಮಾನವೀಯತೆಯ ಗುರಿಯಾಗಬೇಕು’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
‘ನಾನು ಸಾಮಾನ್ಯವಾಗಿ ಡ್ರೈವರ್ಗಳ ಹೆಸರಿನ ಮುಂದೆ ಜೀ ಸೇರಿಸಿ ಸಂಬೋಧಿಸುತ್ತೇನೆ’ ಎಂದು ಮತ್ತೊಬ್ಬರು ಹೇಳಿದ್ದಾರೆ. ಮಗದೊಬ್ಬರು, ‘ನಾನು ಯಾವಾಗಲೂ ಕಾರ್ ಸಾರ್’ ಎಂದೇ ಕರೆಯುತ್ತೇನೆ ಎಂದಿದ್ದಾರೆ.
ನೀವು ಏನೆಂದು ಕರೆಯುತ್ತೀರಿ? ಪ್ರತಿಯೊಬ್ಬರಿಗೂ ಅವರು ಮಾಡುವ ಕೆಲಸಗಳಿಗೂ ಘನತೆ ಇದೆಯಲ್ಲವೆ? ಪರಸ್ಪರ ಘನತೆಯಿಂದ ಬದುಕುವುದೇ ಮಾನವೀಯತೆಯ ಉದ್ದೇಶ ಅಲ್ಲವೆ?
ಮತ್ತಷ್ಟು ವೈರಲ್ ವಿಡಿಯೋ ಕ್ಲಿಕ್ ಮಾಡಿ
Published On - 2:38 pm, Fri, 30 September 22