AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baba Vanga’s predictions : 2025ಕ್ಕೆ ಯುದ್ಧ, 5079ರಲ್ಲಿ ಪ್ರಪಂಚ ಅಂತ್ಯ, ಭೂಮಿ ನಾಶ, ಆಘಾತಕಾರಿ ಭವಿಷ್ಯ ನುಡಿದ ಬಾಬಾ ವಂಗಾ

2025ರಲ್ಲಿ ಯುರೋಪ್‌ನಲ್ಲಿ ಪ್ರಮುಖ ಸಂಘರ್ಷದಿಂದ ಜನಸಂಖ್ಯೆಯಲ್ಲಿ ಭಾರೀ ಕುಸಿತ ಕಾಣಲಿದೆ. 5079ರ ವೇಳೆ ಪ್ರಪಂಚವೇ ಅಂತ್ಯವಾಗಲಿದೆ ಎಂದು ಬಲ್ಗೇರಿಯಾದ ಅಂಧ ಆಧ್ಯಾತ್ಮವಾದಿ ಬಾಬಾ ವಂಗಾ ಭಯಾನಕ ಭವಿಷ್ಯ ನುಡಿದಿದ್ದಾರೆ.

Baba Vanga's predictions : 2025ಕ್ಕೆ ಯುದ್ಧ, 5079ರಲ್ಲಿ ಪ್ರಪಂಚ ಅಂತ್ಯ, ಭೂಮಿ ನಾಶ, ಆಘಾತಕಾರಿ ಭವಿಷ್ಯ ನುಡಿದ ಬಾಬಾ ವಂಗಾ
ಬಾಬಾ ವಂಗಾ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on:Jul 06, 2024 | 6:09 PM

Share

ಬಾಬಾ ವಂಗಾರವರು ಮುಂಬರುವ ವರ್ಷಗಳಲ್ಲಿ ಏನೇನು ಘಟನೆಗಳು ಘಟಿಸುತ್ತವೆ ಎಂದು ಭವಿಷ್ಯ ನುಡಿಯುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಹೌದು, ಬಲ್ಗೇರಿಯಾದಲ್ಲಿ ವಾಸಿಸುತ್ತಿದ್ದ ಪ್ರಸಿದ್ಧ ವಿಶ್ವ ಪ್ರವಾದಿಯಾಗಿದ್ದ ಬಾಬಾ ವಂಗಾರವರು 85ನೇ ವಯಸ್ಸಿನಲ್ಲಿ ಅಂದರೆ 1996ರಲ್ಲಿ ನಿಧನರಾದರು. ಆದರೆ ಮುಂಬರುವ ವರ್ಷಗಳ ಬಗ್ಗೆ ಅವರು ನುಡಿದಿದ್ದ ಭವಿಷ್ಯವು ಇದೀಗ ಮತ್ತೆ ಮುನ್ನಲೆಗೆ ಬಂದಿದೆ.

ಮುಂಬರುವ ದಶಕಗಳಲ್ಲಿ ಬಾಬಾ ವಂಗಾ ನುಡಿದ ಭವಿಷ್ಯವಾಣಿಗಳು

  1. ಬಾಬಾ ವಂಗಾ ಪ್ರಕಾರ 2025ರಲ್ಲಿ ಯುರೋಪ್‌ನಲ್ಲಿ ಪ್ರಮುಖ ಸಂಘರ್ಷದಿಂದ ಜನಸಂಖ್ಯೆಯೂ ಭಾರಿ ಕುಸಿತವಾಗಲಿದೆ.
  2. 2028ರಲ್ಲಿ ಶುಕ್ರ ಗ್ರಹ ತಲುಪುವ ಮನುಷ್ಯರು ಹೊಸ ಇಂಧನ ಶಕ್ತಿಯ ಆವಿಷ್ಕಾರವನ್ನು ಮಾಡಲಿದ್ದಾರೆ.
  3. 2033ರಲ್ಲಿ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ಮಂಜುಗಡ್ಡೆಗಳ ಕರಗುವಿಕೆಯಿಂದ ಸಮುದ್ರಮಟ್ಟವು ಗಮರ್ನಾಹವಾಗಿ ಏರಿಕೆಯಾಗಲಿದೆ. ಹೀಗಾಗಿ ಈ ಕೆಲವು ನಗರಗಳು ಮುಳುಗಡೆಯಾಗಲಿದೆ.
  4. 2076ರಲ್ಲಿ ಜಾಗತಿಕ ಮಟ್ಟದಲ್ಲಿ ಕಮ್ಯುನಿಸಂ ಆಡಳಿತವು ಬರುತ್ತದೆ..
  5. 2130ರಲ್ಲಿ ಜಗತ್ತು ಅನ್ಯಗ್ರಹ ಜೀವಿಗಳ ಸಂಪರ್ಕ ಸಾಧಿಸಲಿದೆ.
  6. 2170ರಲ್ಲಿ ಜಾಗತಿಕ ಮಟ್ಟದಲ್ಲಿ ಭೀಕರ ಬರಗಾಲವು ಆರಂಭವಾಗಲಿದೆ.
  7. 3005 ರಲ್ಲಿ ಮಂಗಳಗ್ರಹದ ಮೇಲೆ ಭೀಕರವಾದ ಯುದ್ಧವೊಂದು ನಡೆಯಲಿದೆ.
  8. 3797ರಲ್ಲಿ ಸೌರವ್ಯೂಹದೊಳಗಿನ ಮತ್ತೊಂದು ಗ್ರಹಕ್ಕೆ ಮಾನವರು ತೆರಳಿದ್ದಾರೆ.
  9. 5079ರ ವೇಳೆಗೆ ಪ್ರಪಂಚ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:42 pm, Sat, 6 July 24