Viral Video: ಬೇವಿನ ಸೊಪ್ಪು ಬಳಸಿ ಪರಾಠಾ ತಯಾರಿಸುತ್ತಿರುವ ವ್ಯಕ್ತಿ; ವಿಡಿಯೋ ವೈರಲ್

ಬೇವಿನ ಸೊಪ್ಪಿನಿಂದ ಮಾಡಿದ ಪರಾಠಾ ಎಂದಾದರೂ ತಿಂದಿದ್ದೀರಾ? ಸದ್ಯ, ವ್ಯಕ್ತಿಯೊಬ್ಬರು ಬೇವಿನ ಸೊಪ್ಪನ್ನು ಬಳಸಿ ಪರಾಠ ತಯಾರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.

Viral Video: ಬೇವಿನ ಸೊಪ್ಪು ಬಳಸಿ ಪರಾಠಾ ತಯಾರಿಸುತ್ತಿರುವ ವ್ಯಕ್ತಿ; ವಿಡಿಯೋ ವೈರಲ್
Follow us
ಅಕ್ಷತಾ ವರ್ಕಾಡಿ
|

Updated on: Jul 07, 2024 | 12:25 PM

ಆಹಾರದಲ್ಲಿ ವಿಚಿತ್ರವಾದ ವಿವಿಧ ಪ್ರಯೋಗಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇತ್ತೀಚಿಗೆ ಇಂತಹದೊಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಒಬ್ಬ ವ್ಯಕ್ತಿ ಬೇವಿನ ಪರಾಠ ತಯಾರಿಸುತ್ತಿರುವುದನ್ನು ಕಾಣಬಹುದು. ಬೇವಿನ ಸೊಪ್ಪು ಬಳಸಿ ತಯಾರಿಸಿದ ಪರಾಠದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಬೇವು ದೇಹಕ್ಕೆ ತುಂಬಾ ಆರೋಗ್ಯಕರವೆಂದುತಿಳಿದಿರುವಂತೆ, ಆಯುರ್ವೇದದ ದೃಷ್ಟಿಯಿಂದ ಬೇವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಬೇವಿನ ರುಚಿ ಕಹಿ ಎನಿಸಿದರೂ ಆರೋಗ್ಯಕ್ಕೆ ಉತ್ತಮವಾದ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಆಯುರ್ವೇದದ ಪ್ರಕಾರ ಬೇವಿನ ಪುಡಿಯನ್ನು ಮುಂಜಾನೆಯೇ ಸೇವಿಸುವುದರಿಂದ ದೇಹದಲ್ಲಿನ ಅರ್ಧದಷ್ಟು ಕಾಯಿಲೆಗಳು ಗುಣವಾಗುತ್ತವೆ. ಆದರೆ ಬೇವಿನ ಸೊಪ್ಪಿನಿಂದ ಮಾಡಿದ ಪರಾಠಾ ತಿಂದಿದ್ದೀರಾ..! ಸದ್ಯ, ವ್ಯಕ್ತಿಯೊಬ್ಬರು ಬೇವಿನ ಸೊಪ್ಪನ್ನು ಬಳಸಿ ಮಾಡಿದ ಪರಾಠದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೇವಿನ ಪರಾಠ ತಯಾರಿಸುವ ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಹಾಡು ಹಗಲೇ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರ ಕಿತ್ತು ಪರಾರಿಯಾದ ಖದೀಮರು

agraeaters ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡ ಈ ಪರಾಠದ ವಿಡಿಯೋ ಎಲ್ಲೆಡೆ ಭಾರೀ ವೈರಲ್​​ ಆಗಿದೆ. ಜೂನ್​​​ 23ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 7ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಜನರು ಕಾಮೆಂಟ್​​​ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ