ತನ್ನ ಮನೆಯ ಬಾಲ್ಕನಿಯನ್ನು ಬಾಡಿಗೆಗೆ ನೀಡಿದ ವ್ಯಕ್ತಿ, ಬಾಡಿಗೆ ಕೇಳಿದರೆ ಶಾಕ್ ಆಗುವುದಂತೂ ಖಂಡಿತಾ!
ಬಾಲ್ಕನಿಯಲ್ಲಿ ಒಂದೇ ಒಂದು ಹಾಸಿಗೆಯನ್ನು ಹಾಕಿದ್ದು, ಬಾಲ್ಕನಿಯಲ್ಲಿ ವಾಸ ಮಾಡುವವರ ಸಂಚಾರಕ್ಕೆ ಸ್ಲೈಡಿಂಗ್ ಗ್ಲಾಸ್ ಡೋರ್ ಅಳವಡಿಸಲಾಗಿದ್ದು, ಮಳೆ ಬಂದರೂ ನೀರು ಒಳಗೆ ಬರದಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ ಇದರ ಬಾಡಿಗೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಬಾಡಿಗೆ ಕೊಡಲು ಕಷ್ಟವಾಗುವುದಕ್ಕೆ ವ್ಯಕ್ತಿಯೊಬ್ಬ ತನ್ನ ಮನೆಯ ಬಾಲ್ಕನಿಯನ್ನೇ ಬಾಡಿಗೆಗೆ ನೀಡಿರುವ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ. ತನ್ನ 2BHK ಮನೆಯ ಬಾಲ್ಕನಿಯಲ್ಲಿ ಹಾಸಿಗೆಯನ್ನು ಇರಿಸಿ ಬಾಡಿಗೆಗೆ ನೀಡುವುದಾಗಿ ಜಾಹೀರಾತು ನೀಡಿದ್ದಾನೆ. ಸದ್ಯ ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದಲ್ಲದೇ ಇದರ ಬಾಡಿಗೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈ ಬಾಲ್ಕನಿಯನ್ನು ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್ ಪಟ್ಟಿಯಲ್ಲಿ ಬಾಡಿಗೆಗೆ ನೀಡುವುದಾಗಿ ಬರೆಯಲಾಗಿದೆ. ಕುತೂಹಲಕಾರಿ ವಿಷಯವೆಂದರೆ, ಈ ಬಾಲ್ಕನಿಯನ್ನು ಸೂರ್ಯನ ಬೆಳಕಿನ ಕೋಣೆ ಎಂದು ವಿವರಿಸಲಾಗಿದೆ. ವಾಸ್ತವವಾಗಿ, ಬಾಲ್ಕನಿಯಲ್ಲಿ ಒಂದೇ ಒಂದು ಹಾಸಿಗೆಯನ್ನು ಹಾಕಿದ್ದು, ಇದರ ಬೆಲೆಯನ್ನು ಹಾಕಲಾಗಿದೆ. ಈ ಪುಟ್ಟ ಬಾಲ್ಕನಿಯ ತಿಂಗಳ ಬಾಡಿಗೆ ಬರೋಬ್ಬರಿ 969 ಡಾಲರ್ ಅಂದರೆ ತಿಂಗಳಿಗೆ ಸುಮಾರು 80,889 ರೂ. ಈ ಕೊಠಡಿಯು ಒಬ್ಬ ವ್ಯಕ್ತಿ ವಾಸಿಸುವಷ್ಟು ದೊಡ್ಡದಾಗಿದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಹಾಡು ಹಗಲೇ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರ ಕಿತ್ತು ಪರಾರಿಯಾದ ಖದೀಮರು
ವರದಿಗಳ ಪ್ರಕಾರ, ಬಾಲ್ಕನಿಯನ್ನು ಮುಚ್ಚಿದ ಕೋಣೆಯಂತೆ ಕಾಣುವಂತೆ, ಅದರಲ್ಲಿ ಕನ್ನಡಿ ಮತ್ತು ಪರದೆಯನ್ನು ಸಹ ಅಳವಡಿಸಿದ್ದಾರೆ. ಅಷ್ಟೇ ಅಲ್ಲ ಬಾಲ್ಕನಿಯಲ್ಲಿ ವಾಸ ಮಾಡುವವರ ಸಂಚಾರಕ್ಕೆ ಸ್ಲೈಡಿಂಗ್ ಗ್ಲಾಸ್ ಡೋರ್ ಅಳವಡಿಸಲಾಗಿದ್ದು, ಮಳೆ ಬಂದರೂ ನೀರು ಒಳಗೆ ಬರದಂತೆ ಬಾಲ್ಕನಿ ಸುತ್ತಲೂ ಗಾಜಿನ ಗೋಡೆ ಹಾಕಲಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ