
ಆನೆಗಳ (elephant) ಆಟ ತುಂಟಾಟಗಳನ್ನು ನೋಡುವುದೇ ಚಂದ. ತನ್ನ ಮೇಲೆ ಕಾಳಜಿ ವಹಿಸುವ ಮಾಲೀಕರೊಂದಿಗೆ ಮಗು ಆಗುತ್ತದೆ. ನಡೆ ನುಡಿಯಿಂದಲೇ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ಈ ವಿಡಿಯೋ ನಿಷ್ಕಲ್ಮಶ ಪ್ರೀತಿಗೆ ಸಾಕ್ಷಿಯಾಗಿದೆ. ಶಾಲೆಗೆ ಹೊರಟು ನಿಂತ ಪುಟ್ಟ ಹುಡುಗಿಯ ಹಿಂದೆಯೇ ನಡೆದುಕೊಂಡು ಹೋಗುತ್ತಿರುವ ಆನೆಯ ಮುದ್ದಾದ ವಿಡಿಯೋ ವೈರಲ್ ಆಗಿದೆ. ಪುಟ್ಟ ಹುಡುಗಿಯನ್ನು ಕಾಳಜಿ ವಹಿಸುತ ಶಾಲೆಗೆ ಬಿಟ್ಟು ಬರಲು ಹೊರಟ ಮರಿಯಾನೆಯ ಪರಿಶುದ್ಧ ಪ್ರೀತಿಗೆ ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ.
friendly_gaints_conversation ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಟ್ಟ ಹುಡುಗಿಯು ಶಾಲೆಗೆ ಹೋಗಲು ರೆಡಿಯಾಗಿದ್ದು ಆಕೆಯ ಹಿಂದೆಯೇ ಆನೆಯೊಂದು ಹೋಗುತ್ತಿರುವುದನ್ನು ಕಾಣಬಹುದು. ಈ ದೃಶ್ಯವು ಆನೆಯು ಈ ಪುಟ್ಟ ಹುಡುಗಿಯನ್ನು ಜೋಪಾನವಾಗಿ ಶಾಲೆಗೆ ಬಿಟ್ಟು ಬರಲು ಹೊರಟಂತಿದೆ. ಈ ಪುಟಾಣಿಯೂ ಆನೆಯ ಜತೆಗೆ ಹೋಗುತ್ತಾ ಎಂಜಾಯ್ ಮಾಡುತ್ತಿರುವುದನ್ನು ನೀವು ನೋಡಬಹುದು.
ಇದನ್ನೂ ಓದಿ:ಓಡ್ಬೇಡ ಕಂದಮ್ಮ, ಬಿದ್ದೋಗ್ತೀಯಾ; ಪುಟ್ಟ ಪುಟ್ಟ ಹೆಜ್ಜೆ ಓಡುತ್ತಿರುವ ಕಂದನನ್ನು ಬೀಳದಂತೆ ತಡೆದ ತಾಯಾನೆ
ಈ ವಿಡಿಯೋ ಇದುವರೆಗೆ ಅರವತ್ತೊಂದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುಗ್ಧ ಪ್ರಾಣಿಗಳ ಜತೆಗಿನ ಸ್ನೇಹವೇ ಸುಂದರ ಎಂದಿದ್ದಾರೆ. ಮುದ್ದಾಗಿದೆ, ದಯವಿಟ್ಟು ಅದಕ್ಕೆ ಆಹಾರ ನೀಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನನಗೂ ಕೂಡ ಈ ಆನೆಯೊಂದಿಗೆ ಸ್ನೇಹ ಬೆಳೆಸಬೇಕೆನಿಸುತ್ತಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ