Video : ದುಡ್ಡೆಲ್ಲಾ ಯಾರ್ ಕೊಡ್ತಾರೆ, ತಳ್ಳುಗಾಡಿಯಲ್ಲಿದ್ದ ಹಣ್ಣನ್ನು ಕದ್ದು ತಿಂದ ಮರಿ ಆನೆ

ಆನೆಗಳು ಬುದ್ಧಿವಂತ ಪ್ರಾಣಿಗಳು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲಿಯೂ ಮರಿ ಆನೆಗಳು ತುಂಟಾಟ ಮಾಡುವುದರಲ್ಲಿ ಎತ್ತಿದ ಕೈ. ಮರಿಯಾನೆಗಳ ಆಟ, ತುಂಟಾಟ, ಕಸರತ್ತುಗಳ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇಲ್ಲೊಂದು ಕಿಲಾಡಿ ಮರಿ ಆನೆಯೊಂದು ತಳ್ಳುಗಾಡಿಯಲ್ಲಿದ್ದ ಹಣ್ಣನ್ನು ಕದ್ದು ತಿನ್ನುತ್ತಿರುವ ವಿಡಿಯೋವೊಂದು ನೆಟ್ಟಿಗರ ಹೃದಯವನ್ನು ಗೆದ್ದು ಕೊಂಡಿದೆ.

ಆನೆಗಳು (elephants) ಸಾಧು ಪ್ರಾಣಿಗಳು, ಸುಖಾಸುಮ್ಮನೆ ಯಾರ ತಂಟೆಗೂ ಹೋಗುವುದಿಲ್ಲ. ಅದರಲ್ಲೂ ಈ ಮರಿ ಆನೆಗಳು ಮಾಡುವ ತುಂಟಾಟವನ್ನು ಕಣ್ತುಂಬಿಸಿಕೊಳ್ಳುವ ಖುಷಿಯೇ ಬೇರೆ. ಅವುಗಳ ಆಟ, ತುಂಟಾಟಗಳನ್ನು ನೋಡಿದ್ರೆ ಒಮ್ಮೆ ಮುದ್ದಾಡಬೇಕೆನಿಸುತ್ತದೆ. ಆನೆಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ (social media) ಆಗಾಗ ವೈರಲ್ ಆಗುತ್ತಿರುತ್ತದೆ. ಇಲ್ಲೊಂದು ಮರಿಯಾನೆ ಮಾಡಿದ ಕೆಲಸ ನೋಡಿದ್ರೆ ಎಷ್ಟು ಕಿಲಾಡಿ ಈ ಆನೆ ಎಂದೆನಿಸದೇ ಇರದು. ರಸ್ತೆಯಲ್ಲಿ ತನ್ನ ಪರಿವಾರದೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹೊಟ್ಟೆ ಹಸಿವು ತಾಳಲಾರದೇ ಮರಿ ಆನೆಯೊಂದು ತಳ್ಳುಗಾಡಿಯಲ್ಲಿದ್ದ ಹಣ್ಣನ್ನು ಕದ್ದು ತಿಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಮುದ್ದಾದ ವಿಡಿಯೋ ಕಂಡ ಬಳಕೆದಾರರು ಈ ಕಿಲಾಡಿ ಮರಿಯಾನೆ ಕೆಲಸ ಕಂಡು ಶಾಕ್ ಆಗಿದ್ದಾರೆ.

ನಿವೃತ್ತ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಅವರು @susantananda3 ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತನ್ನ ಪರಿವಾರದೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮರಿಯಾನೆಯೊಂದು ತನ್ನ ಕಳ್ಳ ಬುದ್ಧಿಯನ್ನು ತೋರಿಸಿದೆ. ರಸ್ತೆ ಬದಿಯಲ್ಲಿದ್ದ ತಳ್ಳುಗಾಡಿಯಲ್ಲಿದ್ದ ಹಣ್ಣನ್ನು ಸೊಂಡಿಲಿನಿಂದ ಮೆಲ್ಲನೆ ಎತ್ತಿಕೊಂಡು ತಿನ್ನಲು ಮುಂದಾಗಿದೆ. ಪ್ರಾರಂಭದಲ್ಲಿ ಈ ಮರಿ ಆನೆ ತನ್ನ ಸೊಂಡಿಲನ್ನು ಮುಂದೆ ಚಾಚುತ್ತಿದ್ದಂತೆ ತಳ್ಳುಗಾಡಿ ಹತ್ತಿರ ನಿಂತಿದ್ದ ವ್ಯಕ್ತಿಗೆ ಭಯವಾಗುತ್ತದೆ. ಆದರೆ, ಹಣ್ಣು ಖರೀದಿಸಲು ಬಂದಿದ್ದ ಮಹಿಳೆಯೊಬ್ಬಳು ಕಬ್ಬಿನ ತುಂಡನ್ನು ಮರಿ ಆನೆಗೆ ನೀಡಿದ್ದಾಳೆ. ಈ ಕಿಲಾಡಿ ಆನೆ ಮರಿ ಕಬ್ಬಿನ ತುಂಡನ್ನು ಕಸಿದುಕೊಂಡು ತನ್ನ ತಾಯಿಯ ಹಿಂದೆ ಓಡಿ ಹೋಗುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ
ವಿಮಾನಯಾನದ ಇತಿಹಾಸದಲ್ಲಿ ಇದೇ ಮೊದಲು, ಬರುತ್ತಿದೆ ವಿದ್ಯುತ್ ವಿಮಾನ
ಈ ಬುಡಕಟ್ಟು ಜನಾಂಗದಲ್ಲಿ ಮಹಿಳೆಯರ ಸ್ನಾನಕ್ಕಿದೆ ನಿಷೇಧ
ಅಪ್ಪ-ಅಮ್ಮನ ಕನಸಿನ ಹಾರಾಟ, ಮಗಳಿಗೆ ಹೆಮ್ಮೆಯ ಕ್ಷಣ ಹೇಗಿತ್ತು ನೋಡಿ?
ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ

ಇದನ್ನೂ ಓದಿ : Video: ದೈತ್ಯ ಮೊಸಳೆಯ ಬಾಲ ಹಿಡಿದು ವ್ಯಕ್ತಿಯ ಹುಚ್ಚಾಟ; ಸಾವಿನೊಂದಿಗೆ ಸರಸ ಅಂದ್ರೆ ಇದೇ ಇರ್ಬೇಕು ನೋಡಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಜೂನ್ 23 ರಂದು ಶೇರ್ ಮಾಡಲಾದ ಈ ವಿಡಿಯೋವೊಂದು ಮೂವತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಎಷ್ಟು ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಚೋಟು ತುಂಬಾನೇ ಮುದ್ದಾಗಿದ್ದಾನೆ ಎಂದಿದ್ದಾರೆ. ಮತ್ತೊಬ್ಬರು, ಪ್ರಾಣಿಗಳನ್ನು ಪ್ರೀತಿಸುವವರು, ಮಾನವೀಯತೆಯನ್ನು ಪ್ರೀತಿಸ್ತಾರೆ ಎಂಬುದು ನನ್ನ ಅಭಿಪ್ರಾಯ ಎಂದು ಕಾಮೆಂಟ್‌ನಲ್ಲಿ ಬರೆದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ