Viral Video: ಬಾಟಲಿಯಲ್ಲಿ ಹಾಲು ಕುಡಿಯುತ್ತಾ, ಮಣ್ಣಿನಲ್ಲಿ ಹೊರಳಾಡುತ್ತಿದೆ ಖಡ್ಗಮೃಗ; ಕ್ಯೂಟ್ ವಿಡಿಯೋ ವೈರಲ್

ವಿಡಿಯೋವನ್ನು ಶೆಲ್ಕ್ಡ್ರಿಕ್​​ ವೈಲ್ಡ್ ಲೈಫ್​ ಟ್ರಸ್ಟ್ ಹಂಚಿಕೊಂಡಿದೆ. 2019ರಲ್ಲಿ ಅನಾಥವಾಗಿ ಅಲೆದಾಡುತ್ತಿದ್ದ ಪುಟ್ಟ ಖಡ್ಗಮೃಗವನ್ನು ವೈಲ್ಡ್ ಫಿಲ್ಡ್ ಟ್ರಸ್ಟ್​ ರಕ್ಷಿಸಿತು. ಬಳಿಕ ಟ್ರಸ್ಟ್ ಸಿಬ್ಬಂದಿ ಪ್ರಾಣಿಯನ್ನು ನೋಡಿಕೊಳ್ಳುತ್ತಿದ್ದಾರೆ.

Viral Video: ಬಾಟಲಿಯಲ್ಲಿ ಹಾಲು ಕುಡಿಯುತ್ತಾ, ಮಣ್ಣಿನಲ್ಲಿ ಹೊರಳಾಡುತ್ತಿದೆ ಖಡ್ಗಮೃಗ; ಕ್ಯೂಟ್ ವಿಡಿಯೋ ವೈರಲ್
ಬಾಟಲಿಯಲ್ಲಿ ಹಾಲು ಕುಡಿಯುತ್ತಾ, ಮಣ್ಣಿನಲ್ಲಿ ಹೊರಳಾಡುತ್ತಿದೆ ಖಡ್ಗಮೃಗ
Edited By:

Updated on: Jul 29, 2021 | 2:59 PM

ಅಪೊಲೊ ಎಂಬ ಖಡ್ಗಮೃಗವೊಂದು ಬಾಟಲಿಯಲ್ಲಿ ಹಾಲು ಕುಡಿಯುತ್ತಾ, ಮಣ್ಣಿನಲ್ಲಿ ಹೊರಳಾಡುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಭಾರೀ ಇಷ್ಟಪಟ್ಟಿದ್ದಾರೆ. ಕ್ಯೂಟ್ ವಿಡಿಯೋವಿದು ಎಂದು ಕಾಮೆಂಟ್ ವಿಭಾಗದಲ್ಲಿ ಪ್ರತಿಕ್ರಿಯೆ ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋವನ್ನು ಶೆಲ್ಕ್ಡ್ರಿಕ್​​ ವೈಲ್ಡ್ ಲೈಫ್​ ಟ್ರಸ್ಟ್ ಹಂಚಿಕೊಂಡಿದೆ. 2019ರಲ್ಲಿ ಅನಾಥವಾಗಿ ಅಲೆದಾಡುತ್ತಿದ್ದ ಪುಟ್ಟ ಖಡ್ಗಮೃಗವನ್ನು ವೈಲ್ಡ್ ಲೈಫ್​ ಟ್ರಸ್ಟ್​ ರಕ್ಷಿಸಿತು. ಬಳಿಕ ಟ್ರಸ್ಟ್ ಸಿಬ್ಬಂದಿ ಪ್ರಾಣಿಯನ್ನು ನೋಡಿಕೊಳ್ಳುತ್ತಿದ್ದಾರೆ.

ವಿಡಿಯೋದಲ್ಲಿ ಗಮನಿಸುವಂತೆ ಅಪೊಲೊ, ಬಾಟಲಿ ಮೂಲಕ ಹಾಲು ಕುಡಿಯುತ್ತಿದೆ. ಕೆಸರು ಮಣ್ಣಿನಲ್ಲಿ ಹೊರಳಾಡುತ್ತಾ ಸಂತೋಷಗೊಂಡಿದೆ. ಕೆಸರು ಮಣ್ಣನ್ನು ನೋಡಿದ ಖಡ್ಗಮೃಗ ಖುಷಿಗೊಂಡು ಮಣ್ಣಿನಲ್ಲಿಯೇ ಮುಳುಗಿದೆ. ಕೀಪರ್, ಮೈತಿಕ್ಕುತ್ತಿರುವುದನ್ನೂ ಆನಂದಿಸುತ್ತಿದೆ. ಕ್ಯೂಟ್ ವಿಡಿಯೋ ಇದೀಗ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದಂತೆಯೇ 8,000ಕ್ಕೂ ಹೆಚ್ಚು ವೀಕ್ಷಣೆಗಳು ಹಾಗೂ 1,300ಕ್ಕೂ ಹೆಚ್ಚು ಲೈಕ್ಸ್​ಗಳು ಲಭಿಸಿವೆ. ಕ್ಯೂಟ್ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Viral Video: ಯುವತಿಯೊಂದಿಗೆ ಶಾಸ್ತ್ರೀಯ ಸಂಗೀತಕ್ಕೆ ಸ್ಟೆಪ್​ ಹಾಕಿದ ಶ್ವಾನ! ಕ್ಯೂಟ್​ ವಿಡಿಯೋ ನೀವೂ ನೋಡಿ

Viral Video: ಮೈದುನನ ಮದುವೆಯಲ್ಲಿ ಹಮ್ ಆಪ್ ಕೆ ಹೈ ಕೋನ್​ ಚಿತ್ರದ ಹಾಡಿ​ಗೆ ಅತ್ತಿಗೆಯ ಸಕತ್​ ಸ್ಟೆಪ್​! ವಿಡಿಯೋ ವೈರಲ್

Published On - 2:55 pm, Thu, 29 July 21