ಇನ್ಸ್ಟಾಗ್ರಾಮ್ ನಲ್ಲಿ ಚಿಗುರಿದ ಪ್ರೀತಿ ಮದುವೆ ಡೇಟ್ ಕೂಡ ಫಿಕ್ಸ್, ಆದರೆ ಮದ್ವೆ ದಿನ ವಧುವೇ ನಾಪತ್ತೆ, ಅಸಲಿ ವಿಚಾರ ಬೇರೇನೇ ಇದೆ

ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ಮೂರು ವರ್ಷಗಳಿಂದ ಲಾಂಗ್‌ ಡಿಸ್ಟೆನ್ಸ್‌ ರಿಲೇಶನ್‌ಶಿಪ್‌ನಲ್ಲಿದ್ದ ಯುವಕನಿಗೆ ಮದುವೆಯ ದಿನವೇ ಯುವತಿ ಮೋಸ ಮಾಡಿರುವುದು ತಿಳಿದು ಶಾಕ್ ಆಗಿದೆ. ಹೌದು, ಮನ್‌ಪ್ರೀತ್ ಕೌರ್ ಎನ್ನುವಾಕೆಯನ್ನು ಮದುವೆಯಾಗಲು ಜಲಂಧರ್ ಮೂಲದ ದೀಪಕ್ ಕುಮಾರ್ ದುಬೈನಿಂದ ಕಳೆದ ತಿಂಗಳು ವಾಪಸಾಗಿದ್ದಾನೆ. ಆದರೆ ಮದುವೆಯ ದಿನ ವಧು ನಾಪತ್ತೆಯಾಗಿದ್ದಾಳೆ. ಅಷ್ಟೇ ಅಲ್ಲದೆ, ಆಕೆ ವಿವಾಹಕ್ಕಾಗಿ ಬುಕ್ ಮಾಡಿದ ಸ್ಥಳವೇ ಇಲ್ಲವೆಂದು ತಿಳಿದು ವರ ಹಾಗೂ ಆತನ ಕುಟುಂಬಸ್ಥರು ಶಾಕ್ ಆಗಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಚಿಗುರಿದ ಪ್ರೀತಿ ಮದುವೆ ಡೇಟ್ ಕೂಡ ಫಿಕ್ಸ್, ಆದರೆ ಮದ್ವೆ ದಿನ ವಧುವೇ ನಾಪತ್ತೆ, ಅಸಲಿ ವಿಚಾರ ಬೇರೇನೇ ಇದೆ
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Dec 08, 2024 | 10:47 AM

ಈಗಿನ ಕಾಲದಲ್ಲಿ ಪ್ರೀತಿ ಪ್ರೇಮಕ್ಕೆ ಅರ್ಥನೇ ಇಲ್ಲ, ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಮೋಸ ಹೋಗುವ ಘಟನೆಗಳ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತೇವೆ. ಇಂತಹದೊಂದು ಘಟನೆಯೂ ಪಂಜಾಬ್ ನಲ್ಲಿ ನಡೆದಿದೆ. ಮೂರು ವರ್ಷದ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಿತಳಾಗಿದ್ದ ಮನ್‌ಪ್ರೀತ್ ಕೌರ್ ಎಂಬಾಕೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಜಲಂಧರ್ ಮೂಲದ ದೀಪಕ್ ಕುಮಾರ್ (24) ದುಬೈನಿಂದ ಕಳೆದ ತಿಂಗಳು ವಾಪಸಾಗಿದ್ದಾನೆ. ಆದರೆ ಮದುವೆಯ ದಿನ ವಧು ನಾಪತ್ತೆಯಾಗಿದ್ದು, ಆತನಿಗೆ ಮತ್ತೊಂದು ಶಾಕ್ ಕಾದಿತ್ತು.

ಹೌದು, ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ಈ ಜೋಡಿ ಒಮ್ಮೆಯೂ ಮುಖತಃ ಭೇಟಿಯಾಗಿರಲಿಲ್ಲ. ಮದುವೆ ಮಾತುಕತೆಯೆಲ್ಲವನ್ನು ಸೋಶಿಯಲ್ ಮೀಡಿಯಾದಲ್ಲಿ ಮುಗಿಸಿಬಿಟ್ಟಿದ್ದರು. ತನ್ನ ಕುಟುಂಬವು ಈ ಮದುವೆಗೆ ಒಪ್ಪಿಕೊಂಡಿದೆ ಎಂದು ಮನ್‌ಪ್ರೀತ್ ಕೌರ್ ದೀಪಕ್ ಗೆ ತಿಳಿಸಿದ್ದಳು. ಹೀಗಾಗಿ ದೀಪಕ್ ಕುಮಾರ್ ಮನೆಯವರಿಗೆ ಈ ವಿಷಯ ತಿಳಿಸಿ ಮದುವೆಗೆ ಎಲ್ಲಾ ಸಿದ್ಧತೆ ನಡೆಸಿದ್ದಾನೆ. ಅದಲ್ಲದೇ, ಮದುವೆಯ ದಿನ ವರನ ಕುಟುಂಬವು ಮೋಗಾ ತಲುಪಿದ ಬಳಿಕ ತಮ್ಮ ಕಡೆಯ ಕೆಲವು ಜನರು ಅಲ್ಲಿಗೆ ಬಂದು, ನಿಮ್ಮನ್ನು ಮದುವೆ ಹಾಲ್‌ಗೆ ಕರೆದುಕೊಂಡು ಬರುತ್ತಾರೆ ಎಂದು ಮದುಮಗಳ ಕುಟುಂಬದವರು ತಿಳಿಸಿದ್ದರು.

ಹೀಗಾಗಿ, ಜಲಂಧರ್‌ನ ಮಂಡಿಯಾಲಿ ಗ್ರಾಮದಿಂದ ಮೋಗಾದಲ್ಲಿನ ಮದುಮಗಳು ಹೇಳಿದ ವಿವಾಹ ಸ್ಥಳಕ್ಕೆ ದೀಪಕ್ ಕುಮಾರ್ ತನ್ನ ಕುಟುಂಬದ ಸಮೇತ ಬೆಳಗ್ಗೆ ಬಂದು ತಲುಪಿದ್ದಾರೆ. ಆದರೆ ಸಂಜೆ ಐದು ಗಂಟೆ ಕಳೆದರೂ ಹುಡುಗಿ ಕಡೆಯವರು ಬರಲೇ ಇಲ್ಲ. ಫೋನ್ ಮಾಡಿದರೂ ಸಂಪರ್ಕ ಸಿಗುತ್ತಿರಲಿಲ್ಲ. ಕಾದು ಕಾದು ಸುಸ್ತಾದ ಬಳಿಕ, ‘ರೋಸ್ ಗಾರ್ಡನ್ ಪ್ಯಾಲೇಸ್’ ಎಲ್ಲಿದೆ ಎಂದು ಸ್ಥಳೀಯರನ್ನು ವಿಚಾರಿಸಿದ್ದಾರೆ.

ಆದರೆ ಮೋಗಾದಲ್ಲಿ ಅಂತಹ ಜಾಗವೇ ಇಲ್ಲ ಎಂದು ತಿಳಿದು ಶಾಕ್ ಆಗಿದ್ದಾರೆ. ಆ ವೇಳೆಗೆ ತಾನು ಮೋಸ ಹೋಗಿರುವುದಾಗಿ ವರನಿಗೆ ತಿಳಿದಿದೆ. ಆ ಬಳಿಕ ಮದುಮಗ ಪೊಲೀಸ್ ಠಾಣೆಗೆ ತೆರಳಿ ವಧು ಹಾಗೂ ಆಕೆಯ ಕುಟುಂಬದವರ ವಿರುದ್ಧ ದೂರು ನೀಡಿದ್ದಾನೆ. ಆನ್ಲೈನ್ ನಲ್ಲಿ ಫಿಕ್ಸ್ ಆದ ಮದುವೆ ಪೊಲೀಸ್ ಠಾಣೆ ಮೆಟ್ಟಿಲವರೆಗೆ ತಲುಪಿದೆ.

ಇದನ್ನೂ ಓದಿ: Fact Check: ಬಾಂಗ್ಲಾದೇಶದಲ್ಲಿ 76 ವರ್ಷದ ಮುಸ್ಲಿಂ ವ್ಯಕ್ತಿ 12 ವರ್ಷದ ಹಿಂದೂ ಯುವತಿಯನ್ನು ಮದುವೆಯಾಗಿದ್ದು ನಿಜವೇ?

ದುಬೈನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ದೀಪಕ್, ತಾನು ಇನ್‌ಸ್ಟಾಗ್ರಾಮ್ ಮೂಲಕ ಜೊತೆ ಸಂವಹನ ನಡೆಸಿದ್ದೇನೆ. ಅವಳನ್ನು ವೈಯಕ್ತಿಕವಾಗಿ ಭೇಟಿ ಮಾಡಿಲ್ಲ.ಈ ಕಾರ್ಯಕ್ರಮಕ್ಕೂ ಮುನ್ನ ಅವರಿಗೆ 50,000 ರೂ. ನೀಡಿರುವುದಾಗಿ ತಿಳಿಸಿದ್ದಾನೆ. ಇತ್ತ ದೀಪಕ್ ಅವರ ತಂದೆ ಪ್ರೇಮ್ ಚಂದ್, ತನ್ನ ಮಗನ ಮದುವೆಗೆ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಊಟದ ವ್ಯವಸ್ಥೆ ಸೇರಿದಂತೆ ಸಮಾರಂಭಕ್ಕೆ ವೀಡಿಯೊಗ್ರಾಫರ್ ಅನ್ನು ಬುಕ್ ಮಾಡಿದ್ದಾರೆ.

ಅದಲ್ಲದೇ, ತಾನು ಮೋಗಾದವಳಾಗಿದ್ದು, ಫಿರೋಜ್‌ಪುರದಲ್ಲಿ ಕೆಲಸ ಮಾಡುತ್ತಿರುವುದಾಗಿ ಮನ್‌ಪ್ರೀತ್ ಕೌರ್ ಹೇಳಿದ್ದಳು. ಮದುಮಗಳ ಫೋನ್ ಸ್ವಿಚ್ ಆಫ್ ಆಗಿದ್ದು, ವರನ ಕಡೆಯವರಿಗೆ ಸಂಪರ್ಕಕ್ಕೆ ಸಿಗದಿದ್ದ ಕಾರಣ ದೀಪಕ್ ಕುಮಾರ್ ಕಡೆಯಿಂದ ದೂರು ದಾಖಲಿಸಲಾಗಿದೆ ಎಂಬುದಾಗಿ ಮೋಗಾದ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಹರ್ಜಿಂದರ್ ಸಿಂಗ್ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್