ಹಿಮಾಚಲ ಪ್ರದೇಶ: ಕಳೆದ ಕೆಲವು ದಿನಗಳಿಂದ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಶನಿವಾರದಿಂದ ಸತತ ಮೂರು ದಿನಗಳ ಕಾಲ ಮಳೆ ಸುರಿದಿದ್ದು, ಹಠಾತ್ ಪ್ರವಾಹ ಮತ್ತು ಭೂಕುಸಿತಗಳು, ಮನೆಗಳಿಗೆ ಹಾನಿ ಮತ್ತು ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಅಹಿತಕರ ಫಟನೆಯಿಂದಾಗಿ ಹಿಮಾಚಲ ಪ್ರದೇಶದ ಕುಟುಂಬವೊಂದು ಮನೆಯಿಂದ ಹೊರಗಡೆ ಬರದೆ, ಮನೆಯೊಳಗೆ ಕುಳಿತು ವಿಡಿಯೋ ಕಾಲ್ ಮೂಲಕ ಮದುವೆ ಕಾರ್ಯ ನೆರವೇರಿಸಿದೆ.
ಶಿಮ್ಲಾದ ಕೊಟ್‌ಗಢ್‌ನಿಂದ ಶಿವಾನಿ ಠಾಕೂರ್ ಅವರನ್ನು ಆಶಿಶ್ ಸಿಂಘಾ ಕುಲುವಿನ ಭುಂಟರ್‌ನಲ್ಲಿ ಮದುವೆಯಾಗಬೇಕಿತ್ತು. ಇದಕ್ಕಾಗಿ ಮದುವೆಯ ದಿನದಂದು ದಿಬ್ಬಣ ಹೊರಡಲು ಸಕಲ ಸಿದ್ದತೆಯನ್ನು ಮಾಡಲಾಗಿತ್ತು. ಆದರೆ ಬಿಟ್ಟು ಬಿಡದೇ ಕಾಡಿದ ಮಳೆಯಿಂದಾಗಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮದುವೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ರೈಲಿನಲ್ಲಿ ಮಹಿಳೆಯರ ಶಕ್ತಿ ಪ್ರದರ್ಶನ; ಪರಸ್ಪರ ಚಪ್ಪಲಿ ಹಿಡಿದು ಹೊಡೆದಾಡಿಕೊಂಡ ಮಹಿಳೆಯರು
ವರ ಆಶಿಶ್ ಸಿಂಘಾ ಸೋಮವಾರ ಮದುವೆ ಮೆರವಣಿಗೆಯೊಂದಿಗೆ ಭುಂತರ್ ತಲುಪಬೇಕಿತ್ತು. ಹವಾಮಾನ ವೈಪರೀತ್ಯದಿಂದ ಎದುರಾಗುವ ಸವಾಲುಗಳ ಜೊತೆಗೆ ಅತಿಥಿಗಳ ಸುರಕ್ಷತೆಯ ಕಾರಣದಿಂದಾಗಿ ವಿವಾಹವನ್ನು ಆನ್‌ಲೈನ್‌ನಲ್ಲಿ ನಡೆಸುವ ನಿರ್ಧಾರಕ್ಕೆ ಬಂದೆವು ಎಂದು ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: