Video: ಮೂಕ ಪ್ರಾಣಿಗಳನ್ನು ಸಹ ಬಿಡಲಿಲ್ಲ… ಮೃಗಾಲಯದ ಮೇಲೂ ದಾಳಿ ಮಾಡಿದ ಬಾಂಗ್ಲಾದೇಶದ ಪ್ರತಿಭಟನಾಕಾರರು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 08, 2024 | 6:03 PM

ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾಗಿರುವ ನೆರೆಯ ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ಹಲವು ದೇವಸ್ಥಾನಗಳು, ಹಿಂದೂಗಳ ಮನೆಗಳನ್ನು ದ್ವಂಸ ಮಾಡಿದ್ದಾರೆ. ಅಲ್ಲದೆ ಮಹಿಳೆಯರ ಮೇಲೂ ದೌರ್ಜನ್ಯ ನಡೆಯುತ್ತಿದೆ. ದಿನದಿಂದ ದಿನಕ್ಕೆ ಈ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗುತ್ತಿದ್ದು, ಪ್ರತಿಭಟನಾಕಾರರು ಮೃಗಾಲಯದ ಮೇಲೂ ಮುತ್ತಿಗೆ ಹಾಕಿ, ಪ್ರಾಣಿಗಳನ್ನು ಅಪಹರಿಸುವ ನೆಪದಲ್ಲಿ ಅಲ್ಲಿದ್ದ ಮೂಕ ಪ್ರಾಣಿಗಳಿಗೂ ಹಿಂಸೆ ನೀಡಿದ್ದಾರೆ. ಈ ಕುರಿತ ಆಘಾತಕಾರಿ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

Video: ಮೂಕ ಪ್ರಾಣಿಗಳನ್ನು ಸಹ ಬಿಡಲಿಲ್ಲ... ಮೃಗಾಲಯದ ಮೇಲೂ ದಾಳಿ ಮಾಡಿದ ಬಾಂಗ್ಲಾದೇಶದ ಪ್ರತಿಭಟನಾಕಾರರು
ವೈರಲ್​​ ವಿಡಿಯೋ
Follow us on

ಮೀಸಲಾತಿ ಕುರಿತಂತೆ ನಮ್ಮ ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ಹೆಚ್ಚಾಗಿದ್ದು, ಈ ಪ್ರತಿಭಟನೆ ಇದೀಗ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಪ್ರತಿಭಟನೆಗೆ ದೇಶವೇ ಅಲ್ಲೋಲ ಕಲ್ಲೋಲವಾಗಿದ್ದು, ಈ ಹಿಂಸಾಚಾರಕ್ಕೆ ಹಲವು ಜೀವಗಳು ಬಲಿಯಾಗಿವೆ, ಹಲವರ ಮನೆಗಳು ಹೊತ್ತಿ ಉರಿದಿದೆ. ಅಲ್ಲದೆ ಮಹಿಳೆಯರ ಮೇಲೂ ದೌರ್ಜನ್ಯ ನಡೆಯುತ್ತಿದೆ. ದಿನದಿಂದ ದಿನಕ್ಕೆ ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗುತ್ತಿದ್ದು, ಮೊನ್ನೆಯಷ್ಟೇ ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ನುಗ್ಗಿ ಶೇಕ್‌ ಹಸೀನಾ ಅವರ ಸೀರೆ, ರವಿಕೆ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದರು. ಇದೀಗ ಪ್ರತಿಭಟನಾಕಾರರು ಮೃಗಾಲಯದ ಮೇಲೆ ಮುತ್ತಿಗೆ ಹಾಕಿ ಅಲ್ಲಿದ್ದ ಪ್ರಾಣಿಗಳನ್ನು ಅಪಹರಿಸುವ ನೆಪದಲ್ಲಿ ಮೂಕ ಪ್ರಾಣಿಗಳಿಗೆ ಹಿಂಸೆ ನೀಡಿದ್ದಾರೆ. ಈ ಕುರಿತ ಆಘಾತಕಾರಿ ವಿಡಿಯೋವೊಂದು ಇದೀಗ ಭಾರೀ ವೈರಲ್‌ ಆಗುತ್ತಿದೆ.

oliLondonTV ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದ್ದು, “ಬಾಂಗ್ಲಾದೇಶ ಅರಾಜಕತೆಯತ್ತ ಸಾಗುತ್ತಿದ್ದಂತೆ ನೂರಾರು ಪ್ರತಿಭಟನಾಕಾರರು ರಾಷ್ಟ್ರೀಯ ಮೃಗಾಲಯಕ್ಕೆ ನುಗ್ಗಿ ಪ್ರಾಣಿಗಳ ಮೇಲೆ ದಾಳಿ ನಡೆಸಿದ್ದಾರೆ ಮತ್ತು ಅವುಗಳನ್ನು ಅಪಹರಿಸಲು ಪ್ರಯತ್ನಿಸಿದ್ದಾರೆ” ಎಂಬ ಶಿರ್ಷಿಕೆಯನ್ನು ಬರೆಯಲಾಗಿದೆ.

ವೈರಲ್​​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗಿರುವ ವಿಡಿಯೋದಲ್ಲಿ ಬಾಂಗ್ಲಾದೇಶದ ಢಾಕಾ ಮೃಗಾಲಯಕ್ಕೆ ನುಗ್ಗಿದ ಪ್ರತಿಭಟನಾಕಾರರು ಗದ್ದಲವನ್ನು ಸೃಷ್ಟಿಸಿ ಅಲ್ಲಿದ್ದ ಪ್ರಾಣಿಗಳನ್ನು ಅಪಹರಿಸಲು ಯತ್ನಿಸುತ್ತಿರುವ ದೃಶ್ಯವನ್ನು ಕಾಣಬಹುದು. ಇವರುಗಳ ಗದ್ದಲಕ್ಕೆ ಭಯಭೀತವಾದ ಜಿಂಕೆಯೊಂದು ಪ್ರಾಣ ಉಳಿದರೆ ಸಾಕಪ್ಪಾ ದೇವ್ರೇ ಎಂದು ಪ್ರತಿಭಟನಾಕಾರರ ಕೈಯಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದೆ.

ಇದನ್ನೂ ಓದಿ: ಭರತನಾಟ್ಯದ ಮೂಲಕ ನಾಟ್ಯ ಗುರುಗಳಿಗೆ ಅಂತಿಮ ನಮನ ಸಲ್ಲಿಸಿದ ಶಿಷ್ಯೆಯರು

ಆಗಸ್ಟ್‌ 06 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜವಾಗ್ಲೂ ಈ ದೃಶ್ಯ ತುಂಬಾನೇ ಭಯಾನಕವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದೆಂಥಾ ಅಮಾನವೀಯ ಕೃತ್ಯʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮೃಗಾಲಯದ ಪ್ರಾಣಿಗಳಿಗೆ ಹಿಂಸೆ ಕೊಟ್ಟವರ ಮೇಲೆ ಗರಂ ಆಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ