Viral Video: ದಾರಿಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯ ಮುಖವನ್ನೇ ಕಚ್ಚಿದ ಸೈಕೋ; ಆಘಾತಕಾರಿ ವಿಡಿಯೋ ವೈರಲ್

| Updated By: Rakesh Nayak Manchi

Updated on: Mar 25, 2024 | 8:15 PM

ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋವೊಂದು ಹರಿದಾಡುತ್ತಿದ್ದು, ದಾರಿಯಲ್ಲಿ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದ ಶಾಲಾ ವಿದ್ಯಾರ್ಥಿಯನ್ನು ಹಿಂಬಾಲಿಸಿಕೊಂಡು ಹೋದಂತಹ ಮುಸ್ಲಿಂ ವ್ಯಕ್ತಿಯೊಬ್ಬ ಆಕೆಯನ್ನು ಅಡ್ಡಗಟ್ಟಿ, ನಂತರ ಆಕೆಯ ಮುಖವನ್ನೇ ಕಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಆತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸೈಕೋ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

Viral Video: ದಾರಿಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯ ಮುಖವನ್ನೇ ಕಚ್ಚಿದ ಸೈಕೋ; ಆಘಾತಕಾರಿ ವಿಡಿಯೋ ವೈರಲ್
ದಾರಿಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯ ಮುಖವನ್ನೇ ಕಚ್ಚಿದ ಸೈಕೋ; ಆಘಾತಕಾರಿ ವಿಡಿಯೋ ವೈರಲ್
Follow us on

ಇತ್ತೀಚಿಗೆ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದ್ದು, ಸೈಕೋ ವ್ಯಕ್ತಿಯೊಬ್ಬ ದಾರಿಯಲ್ಲಿ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದಂತಹ ವಿದ್ಯಾರ್ಥಿನಿಗೆ ಕಿರುಕುಳ ನೀಡಿ, ಆಕೆಯ ಮುಖವನ್ನೇ ಕಚ್ಚಿ ಓಡಿ ಹೋಗಿದ್ದಾರೆ. ಈ ಘಟನೆ ಬಾಂಗ್ಲಾದೇಶದ (Bangladesh) ದಿನಾಜ್ ಪುರದಲ್ಲಿ ನಡೆದಿದ್ದು, ಸೈಕೋ ವ್ಯಕ್ತಿಯೊಬ್ಬ ಶಾಲಾ ಬಾಲಕಿಗೆ ಕಿರುಕುಳ ನೀಡಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೂಲಗಳ ಪ್ರಕಾರ ಈ ಘಟನೆ ಮಾರ್ಚ್ 17 ಭಾನುವಾರ ಬೆಳಗ್ಗೆ 8.41 ರ ಸುಮಾರಿಗೆ ನಡೆದಿದ್ದು, ಈ ಭಯಾನಕ ದೃಶ್ಯ ಅಲ್ಲೇ ಪಕ್ಕದಲ್ಲಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಕೋಲಾಹಲವೇ ಸೃಷ್ಟಿಯಾಗಿತ್ತು. ಆತನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಹಲವರು ಆ ಸೈಕೋ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಹಾಳಾದ ಹಾಲಿನ ಹಣ ವಾಪಸ್ ಪಡೆಯಲು ಹೋಗಿ 77 ಸಾವಿರ ರೂ. ಕಳೆದುಕೊಂಡ ಬೆಂಗಳೂರಿನ ಮಹಿಳೆ 

ಈ ವೈರಲ್ ವಿಡಿಯೋವನ್ನು ಮಹೇಂದ್ರಾ ವರ್ಮ (@Mahendravar1) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಶಾಲಾ ಬಾಲಕಿಯೊಬ್ಬಳು ದಾರಿಯಲ್ಲಿ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಸೈಕೋ ವ್ಯಕ್ತಿಯೊಬ್ಬ ಅವಳನ್ನೇ ಮೆಲ್ಲಗೆ ಹಿಂಬಾಲಿಸುತ್ತಾ ಬರುತ್ತಾನೆ. ಇದರ ಅರಿವೇ ಇರದ ಆ ಪುಟ್ಟ ಬಾಲಕಿ ತನ್ನ ಪಾಡಿಗೆ ಮುಂದೆ ಸಾಗುತ್ತಾಳೆ. ನಂತರ ಇದ್ದಕ್ಕಿದ್ದಂತೆ ಆ ಬಾಲಕಿಯನ್ನು ಅಡ್ಡಗಟ್ಟಿ, ಆಕೆಯ ಮುಖಕ್ಕೆ ಜೋರಾಗಿ ಕಚ್ಚುತ್ತಾನೆ, ಹುಡುಗಿ ಭಯದಿಂದ ಜೋರಾಗಿ ಕಿರುಚಿದಾಗ ಆ ಸೈಕೋ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಘಟನೆಯ ಬಳಿಕ ಸಾರ್ವಜನಿಕರಿಂದ ಆತನಿಗೆ ಸರಿಯಾಗಿ ಗೂಸಾ ಬಿದ್ದಿದ್ದು, ಇದೀಗ ಪೊಲೀಸರ ಅಥಿತಿಯಾಗಿದ್ದಾನೆ.

ಬಾಲಕಿಗೆ ಕಿರುಕುಳ ನೀಡಿದ ವಿಡಿಯೋ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ದೃಶ್ಯಾವಳಿ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದ್ದು, ಇಂತಹ ಸೈಕೋಗಳಿಗೆ ತಕ್ಕ ಶಾಸ್ತಿ ಮಾಡಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Mon, 25 March 24