Special Children: ಸಾಕಷ್ಟು ಹಠ, ಕೋಪದಿಂದ ರಗಳೆ ಮಾಡುತ್ತಿದೆ ಈ ಮಗು. ಆದರೂ ಇಲ್ಲಿರುವ ಕ್ಷೌರಿಕ (Barber) ಅದರ ಪ್ರತಿಯೊಂದು ಕ್ರಿಯೆಯನ್ನೂ ಬೇಸರಿಸಿಕೊಳ್ಳದೆ ಅದರ ಮೂಡ್ ಬದಲಾಯಿಸಲು ಪ್ರಯತ್ನಿಸುತ್ತಿದ್ದಾನೆ. ಹಾಗೆಂದು ಈ ಕ್ಷೌರಿಕನೇನು ಯುವಕನಲ್ಲ ನಡುವಯಸ್ಸಿನವನಂತೆ ಕಾಣುತ್ತಾನೆ. ಆದರೂ ಇಷ್ಟೊಂದು ತಾಳ್ಮೆಯಿಂದ ನಿಭಾಯಿಸಿದ್ದಾನೆಂದರೆ! ಹೌದು ಇದು ವಿಶೇಷ ಮಕ್ಕಳಿಗಾಗಿಯೇ ಈತ ಶುರು ಮಾಡಿದ ಕ್ಷೌರದಂಗಡಿ (Salon). ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರ ಕಣ್ಣಾಲಿಗಳು ತುಂಬಿಕೊಳ್ಳುತ್ತಿವೆ.
ಭಯದಿಂದಲೋ ಅಥವಾ ತನಗೆ ಮನಸ್ಸಿಲ್ಲವೆಂದೋ ಸರೀ ರಚ್ಚೆ ಹಿಡಿದಿದೆ ಈ ಮಗು. ಆದರೂ ಆ ಪ್ರಕ್ರಿಯೆಯನ್ನು ಕ್ರಮೇಣ ಆಟಕ್ಕೆ ತಿರುಗಿಸುತ್ತ ಹಸನ್ಮುಖಿಯಾಗಿ ಕ್ಷೌರ ಮಾಡುತ್ತಾನೆ ಬಿಲ್ಲಿ ಎಂಬ ಹೆಸರಿನ ಈ ಕ್ಷೌರಿಕ. ವಿಶೇಷ ಮಕ್ಕಳಿಗಷ್ಟೇ ಅಲ್ಲ, ವಿಶೇಷ ಮಹಿಳೆಯಗೆ ಮತ್ತು ಪುರುಷರಿಗೂ ಇವನು ಕ್ಷೌರ ಮಾಡುತ್ತಾನೆ. ಎಲ್ಲರೊಂದಿಗೆ ಸಹಾನುಭೂತಿಯಿಂದ ಒಡನಾಡುತ್ತಾನೆ. ನೆಟ್ಟಿಗರು ಮತ್ತು ಇವನ ಅನೇಕ ಗ್ರಾಹಕರು ಇವನನ್ನು ಪ್ರಶಂಸಿಸುತ್ತಿದ್ಧಾರೆ.
ಇದನ್ನೂ ಓದಿ : Viral Video: ಎಎಸ್ಎಂಆರ್ ಕಲೆ: ಗುಜರಿ ಅಂಗಡಿಗೆ ಹಾಕಿದ ಟೈಪ್ರೈಟರ್ ಹುಡುಕುವ ಆಲೋಚನೆ ಬಂದೀತು!
ಈತನಕ 2 ಮಿಲಿಯನ್ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ಧಾರೆ. 1 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ಮನದುಂಬಿ ಪ್ರತಿಕ್ರಿಯಿಸಿದ್ದಾರೆ. ‘ಇವನು ನಮ್ಮ ಮಗನ ಕ್ಷೌರಿಕ, ಅದ್ಭುತ ವ್ಯಕ್ತಿ. ವಿಶೇಷ ಮಗುವೊಂದು ನಿಮ್ಮ ಕುಟುಂಬದಲ್ಲಿದ್ದರೆ ಅದನ್ನು ಪೋಷಿಸುವ ಕಷ್ಟಗಳ ಬಗ್ಗೆ ನಿಮಗರಿವಿರುತ್ತದೆ. ಈ ಬಿಲ್ಲಿ ಎಂಟು ವರ್ಷಗಳಿಂದ ನನ್ನ ಮಗನ ಕ್ಷೌರ ಮಾಡುತ್ತಿದ್ದಾನೆ. ಈತನಕ ಎಂದೂ ಅವನು ತಾಳ್ಮೆ ಕಳೆದುಕೊಂಡಿಲ್ಲ. ವಿಶೇಷ ಮಕ್ಕಳಿಗೆ ಬೇಕಾದಂಥ ಆಟಿಕೆಗಳು, ಪರಿಸರ ರೂಪಿಸಿದ್ದಾರೆ. ನಿಧಿ ಸಂಗ್ರಹವನ್ನೂ ಮಾಡುತ್ತ ತಮ್ಮದೇ ಆದ ಸಮುದಾಯವನ್ನು ಕಟ್ಟಿಕೊಂಡಿದ್ದಾರೆ. ಎಂದಿದ್ದಾರೆ ವಿಶೇಷ ಮಗುವಿನ ತಾಯಿಯೊಬ್ಬಾಕೆ.
ಇದನ್ನೂ ಓದಿ : Viral Video: 73 ವರ್ಷದ ವೈದ್ಯರಿಗೆ ಮೊದಲ ಸಲ ಹಾಡಲು ವೇದಿಕೆ ಸಿಕ್ಕಾಗ
‘ಓಹ್ ಇವನು ನನ್ನ ಸೋದರಳಿಯನ ಕ್ಷೌರಿಕ. ನಾನಂತೂ ಇವನಿಗೆ ಸದಾ ಕೃತಜ್ಞ. ಇವನಲ್ಲಿರುವ ಸಹನೆ ಮತ್ತು ಶಕ್ತಿ ಮಹಾನ್. ಇಂಥ ವ್ಯಕ್ತಿ ಬಹುಶಃ ಜಗತ್ತಿನಲ್ಲಿಯೇ ಇಲ್ಲ ಎಂದೆನ್ನಿಸುತ್ತದೆ. ಮಕ್ಕಳೊಂದಿಗೆ ಭಾವನಾತ್ಮಕವಾಗಿ ಸ್ಪಂದಿಸುವುದನ್ನು ನೋಡುವುದೇ ಒಂದು ದಿವ್ಯಅನುಭವ ಎಂದಿದ್ಧಾರೆ’ ಮತ್ತೊಬ್ಬರು.
ನಿಮ್ಮೂರಿನಲ್ಲಿಯೂ ಇಂಥ ಒಬ್ಬ ಕ್ಷೌರಿಕನಿರಬೇಕು ಎನ್ನಿಸುತ್ತಿದೆಯೇ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:36 am, Mon, 3 July 23