Barbie : ನಿನ್ನೆಯಷ್ಟೇ ಬರಾಕ್ ಒಬಾಮಾ, ಜೋ ಬೈಡನ್ ಈ ಗುಲಾಬಿ ಜ್ವರಕ್ಕೆ ತುತ್ತಾಗಿದ್ದರು. ಇದೀಗ ಮೋದಿ (Modi), ಸೋನಿಯಾ, ರಾಹುಲ್, ಲಾಲೂ, ಗಡ್ಕರಿ, ಅಮಿತ್ ಷಾ, ಕೇಜ್ರೀವಾಲ್ಗೂ ಕೂಡ ಇದು ಸೋಂಕಿದೆ. ಎಐ ಕಲಾವಿದರು ಹಗಲಿರುಳು ಶ್ರಮಿಸುತ್ತ ಈ ಬಾರ್ಬಿ ಫಿವರ್ ಅಥವಾ ಗುಲಾಬಿ ಜ್ವರ ಹರಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ವಿಶ್ವದಾದ್ಯಂತ ಬಾರ್ಬಿ ಚಲನಚಿತ್ರ ಯಶಸ್ವಿಯಾಗಿ ಓಡುತ್ತಿರುವ ಹಿನ್ನೆಲೆಯಲ್ಲಿ ಅನೇಕ ಬ್ರ್ಯಾಂಡ್ಗಳು ತಮ್ಮ ಉತ್ಪನ್ನಗಳನ್ನು ಈ ಜ್ವರದಲ್ಲಿ ಅದ್ದಿ ತೆಗೆಯುತ್ತಿವೆ. ಜಾಲತಾಣಗಳಲ್ಲಿ ಇದರ ಬಗ್ಗೆ ಮಾತೇ ಬೇಡ!
ಅವರವರ ಅಭಿಮಾನಿಗಳು ಅವರವರನ್ನು ಹೊಗಳುತ್ತಿದ್ದಾರೆ. ಮಮತಾ ಮತ್ತು ಸೋನಿಯಾ ಬಹಳ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಕೆಲವರು. ಮೋದಿ ಎಲ್ಲಿ ಹೋದರೂ ರಂಗೇ ಎಂದು ಕೆಲವರು. ಲಾಲೂ ಕೂಡ ಬಹಳ ಮುದ್ದಾಗಿದ್ದಾರೆ ಎಂದು ಕೆಲವರು. ರಾಹುಲ್ ಅಂತೂ ಬಹಳ ಮುದ್ದು ಎಂದು ಹಲವರು. ಒಟ್ಟಾಗಿ ನೋಡಿದರೆ ಎಲ್ಲರೂ ಭಾರತ್ ರಾಷ್ಟ್ರ ಸಮಿತಿಯನ್ನು ಸೇರಿದಂತೆ ಭಾಸವಾಗುತ್ತಿದೆ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral: ಚಪಾತಿಯಲ್ಲಿ ಜಿರಳೆಮರಿ; ವಂದೇ ಭಾರತ್ನಿಂದ ಪ್ರಯಾಣಿಕರೊಬ್ಬರಿಗೆ ಉಚಿತ ಕೊಡುಗೆ
ರಾಹುಲ್ ಗಾಂಧಿಯನ್ನು ರಾಗಾ ಎಂದು, ಮಮತಾ ಅನ್ನು ದೀದೀ ಎಂದೂ ಕರೆದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ ನೆಟ್ಜನತೆ. ಆದರೆ ಇದರಿಂದ ಏನು ಪ್ರಯೋಜನ? ತಿಂಗಳ ಮೇಲಾಯ್ತು ಎಐ ಕಲಾವಿದರು ಪ್ರಸಿದ್ಧ ವ್ಯಕ್ತಿಗಳನ್ನೆಲ್ಲ ಗುಲಾಬಿಯಲ್ಲಿ ಮುಳುಗೇಳಿಸುತ್ತ ಎಂದು ತಕರಾರು ತೆಗೆದಿದ್ದಾರೆ.
ಇದನ್ನೂ ಓದಿ : Viral Video: ಡಿಜಿಟಲ್ ಭಿಕ್ಷೆ; ಸ್ಲೀಪರ್ ಕೋಚ್ನಲ್ಲಿಯೂ ರೀಲಿಗರ ಹಾವಳಿ; ಕಿಡಿಕಾರಿದ ನೆಟ್ಟಿಗರು
ಎಐ ಕಲಾವಿದರಿಗೆ ಇದರಿಂದ ಏನು ಲಾಭ ಇದೆ ಎಂದ ಪ್ರಶ್ನಿಸಿದ್ದಾರೆ ಕೆಲವರು. ಇದರ ಬದಲಾಗಿ ದೇಶಕ್ಕೆ ತುರ್ತಾಗಿ ಬೇಕಿರುವ ಸಂಗತಿಗಳ ಕಡೆ ಗಮನ ಹರಿಸುವುದು ಒಳ್ಳೆಯದು ಎಂದು ಮತ್ತೊಂದಿಷ್ಟು ಜನ ಹೇಳಿದ್ದಾರೆ. ಕಲೆಯನ್ನು ಕಲೆಯಂತೆ ನೋಡಿ ಆಸ್ವಾದಿಸಬೇಕು ಎಂದು ಒಬ್ಬರು ಹೇಳಿದ್ದಾರೆ. ಎಲ್ಲದರ ಹಿಂದೆಯೂ ವ್ಯಾಪಾರೋದ್ದೇಶಗಳು ಇರುತ್ತವೆ, ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ ಸುಮ್ಮನಿರಿ ಎಂದಿದ್ದಾರೆ ಇನ್ನೊಬ್ಬರು.
ಈ ವಿಷಯವಾಗಿ ನೀವೇನು ಹೇಳುತ್ತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ