Viral Video: ಹುಲಿಗಳನ್ನು ಸಾಕಲಾಗದು; ಈ ಯುವತಿ ಯಾಕೆ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾಳೆ ಎನ್ನುತ್ತಿರುವ ನೆಟ್ಟಿಗರು

Animal Lover: ಈಕೆ ಬಹುಶಃ ಬೆಕ್ಕು ಎಂದುಕೊಂಡಂತಿದೆ, ಈಕೆಗೆ ಯಾರೂ ಹೇಳುವರಿಲ್ಲವೆ? ಎಂದು ನೆಟ್ಟಿಗರು ಚಿಂತಿತರಾಗಿದ್ದಾರೆ ಈ ವಿಡಿಯೋ ನೋಡಿ. ಹುಲಿ ಎಷ್ಟೇ ಆದರೂ ಹುಲಿಯೇ, ಇಂಥ ಅಪಾಯಕ್ಕೆ ಆಕೆ ತನ್ನನ್ನು ತಾನು ಕೆಡವಿಕೊಳ್ಳುತ್ತಿರುವುದು ತಪ್ಪು ಎಂದಿದ್ದಾರೆ. ಆಕೆಯ ಕೈ ಕಾಲು ತೊಡೆಗೆ ಹುಲಿ ಹೇಗೆ ಬಾಯಿ ಹಾಕುತ್ತದೆ ಎನ್ನುವುದನ್ನು ಸ್ವತಃ ನೋಡಿಬಿಡಿ.

Viral Video: ಹುಲಿಗಳನ್ನು ಸಾಕಲಾಗದು; ಈ ಯುವತಿ ಯಾಕೆ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾಳೆ ಎನ್ನುತ್ತಿರುವ ನೆಟ್ಟಿಗರು
ಹುಲಿಯೊಂದಿಗೆ ಆಟವಾಡಿಕೊಂಡಿರುವ ಯುವತಿ

Updated on: Oct 31, 2023 | 10:32 AM

Tiger: ಹುಲಿ ಹುಲಿಯೇ. ಪ್ರತಿಯೊಂದು ನಡೆಯನ್ನು ಇತರರು ಗಮನಿಸುವಂಥ ವೈಶಿಷ್ಟ್ರ ಮತ್ತು ಆಕರ್ಷಣೆ ಅದಕ್ಕಿದೆ. ಆದರೂ ಪಳಗಿಸಿದ ಹುಲಿಯಾದರೂ ಸರಿ, ಅದನ್ನು ಖಂಡಿತ ನಂಬಲಾಗದು! ಇದನ್ನು ಅನುಮೋದಿಸುವಂಥ ವಿಡಿಯೋ ಇದೀಗ ವೈರಲ್ (Viral) ಆಗಿದೆ. ಪ್ರಾಣಿಪ್ರಿಯೆಯೊಬ್ಬಳು ಬೆಕ್ಕಿನಂತೆ ಹುಲಿಯನ್ನು ಮುದ್ದಿಸಲು ಪ್ರಯತ್ನಿಸಿದ್ದಾಳೆ. ಅದರ ಬಾಯಿಗೆ ಕೈ ಕೊಡುತ್ತಾಳೆ. ಅದು ಇಡೀ ಕೈಯನ್ನು ತನ್ನ ಬಾಯಿಯಲ್ಲಿ ಕಚ್ಚಿ ಹಿಡಿಯಲು ನೋಡುತ್ತದೆ. ಹಾಗೇ ಅವಳ ತೊಡೆಯನ್ನು… ಅದರ ಭಯಂಕರ ಸ್ವರೂಪ ಮತ್ತು ನಡೆ ನೋಡುತ್ತಿದ್ದಂತೆ ಮುಂದಿನ ಕ್ಷಣದಲ್ಲಿ ಏನಾಗುವುದೋ ಎಂಬ ಆತಂಕ ಈ ವಿಡಿಯೋ ನೋಡಿದ ಯಾರಿಗೂ ಆಗುತ್ತದೆ.

ಇದನ್ನು ಓದಿ : Viral Video: ಸ್ಪೈಡರ್​ಮ್ಯಾನ್​ ಸಮಾವೇಶ; ವಿಶ್ವದಾಖಲೆಗಾಗಿ ಒಗ್ಗೂಡಿದ್ದ ಸಾವಿರಾರು ಸ್ಪೈಡರ್​ಮ್ಯಾನ್​ಗಳು 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಕ್ಟೋಬರ್ 29 ರಂದು X ನಲ್ಲಿ ಈ ವಿಡಿಯೊ ಪೋಸ್ಟ್ ಮಾಡಲಾಗಿದೆ. ಸುಮಾರು 7 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 130 ಜನರು ಇದನ್ನು ಹಂಚಿಕೊಂಡಿದ್ದಾರೆ. ಸುಮಾರು 160 ಜನರು ಪ್ರತಿಕ್ರಿಯಿಸಿದ್ದಾರೆ. ಈಕೆ ತನ್ನನ್ನು ತಾನು ಯಾಕೆ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾಳೆ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.

ಹುಲಿಯೊಂದಿಗೆ ಆಟವಾಡುತ್ತಿರುವ ಯುವತಿ

ಮರಿಯಿದ್ದಾಗಿನಿಂದಲೇ ಹುಲಿಯನ್ನು ಸಾಕಿ ಬೆಳೆಸಿದರೂ ಅವುಗಳ ಸಹಜ ಪ್ರವೃತ್ತಿ ಎಂದಿಗೂ ಹೋಗುವುದಿಲ್ಲ. ಅವುಗಳಿಗೂ ನಿಮಗೂ ಅರಿವಿಲ್ಲದೆಯೇ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ವನ್ಯಜೀವಿಗಳೊಂದಿಗೆ ಹೀಗೆ ಆಟವಾಡಬಾರದು, ಈಕೆಗೆ ಯಾರೂ ಹೇಳುವವರಿಲ್ಲವೇ? ಎಂದು ಕೇಳಿದ್ದಾರೆ ಒಬ್ಬರು. ಆಕೆ ತನ್ನ ಸ್ವಂತ ಮಗುವಿನಂತೆ ನೋಡಿಕೊಳ್ಳುತ್ತಿದ್ದಾಳೆ ನಿಜ. ಆದರೆ ಹುಲಿ, ಹುಲಿಯೇ ಎಂದು ಎಚ್ಚರಿಸಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral: ಫ್ಲಿಪ್​ಕಾರ್ಟ್​ನಿಂದ ನಕಲಿ ಪಾರ್ಸೆಲ್​​; ರೂ 1 ಲಕ್ಷ ಕೊಟ್ಟು ಆರ್ಡರ್ ಮಾಡಿದ್ದು ಸೋನಿ ಟಿವಿ, ತಲುಪಿದ್ದು ಏನು?

ಇದು ಬೆಕ್ಕಲ್ಲ ಹುಲಿ ಎಂದು ಅನೇಕರು ನೆನಪಿಸಿದ್ದಾರೆ. ಆದರೂ ಅವಳ ಮುಖದ ಮೇಲಿನ ಆತ್ಮವಿಶ್ವಾಸ ಮತ್ತು ಮಂದಹಾಸವನ್ನು ನೋಡಿ ಎಂದಿದ್ದಾರೆ ಕೆಲವರು. ವನ್ಯಪ್ರಾಣಿಗಳಿಂದ ದೂರವಿರಿ, ದೂರದಿಂದಲೇ ಪ್ರೀತಿ ವ್ಯಕ್ತಪಡಿಸಿ, ಎಂದೂ ಹತ್ತಿರ ಹೋಗಬೇಡಿ ಎಂದು ಬುದ್ಧಿವಾದ ಹೇಳಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ