
ಬೆಂಗಳೂರು, ಜನವರಿ 22: ಮಾಯನಗರಿ ಬೆಂಗಳೂರಿಗೆ (Bengaluru) ಕೆಲಸಕ್ಕೆಂದು ಬರುವ ಯುವಕರು ಯುವತಿಯರು ಮೊದಲು ಹುಡುಕುವುದೇ ಬಾಡಿಗೆ ಮನೆಯನ್ನು. ಆದರೆ ಇತ್ತೀಚೆಗಿನ ದಿನಗಳಲ್ಲಿ ಕಡಿಮೆ ಬಾಡಿಗೆಗೆ ಮನೆ ಇರುವ ಸಿಗೋದು ತುಂಬಾನೇ ಕಡಿಮೆ. ಸಾಫ್ಟ್‌ವೇರ್ ಇಂಜಿನಿಯರ್‌ರೊಬ್ಬರು ಬೆಂಗಳೂರಿನ ಕಾಡುಬೀಸನಹಳ್ಳಿಯಲ್ಲಿ ಮನೆ ಹುಡುಕುತ್ತಿದ್ದಾಗ ಬಾಡಿಗೆ ಮನೆ ಇರೋದು ತಿಳಿದಿದೆ. ಈ ಖಾಲಿ ಮನೆಯೊಂದಕ್ಕೆ ತೆರಳಿ ಅಲ್ಲಿನ ಮನೆಯ ಮಾಲೀಕರ ಬಳಿ ಬಾಡಿಗೆ ಬಗ್ಗೆ ವಿಚಾರಿಸಿದ್ದಾರೆ. ಆದರೆ ಮನೆ ಮಾಲೀಕ 70 ಸಾವಿರ ರೂ ಬಾಡಿಗೆ ಹೇಳಿದ್ದನ್ನು ಕೇಳಿ ಶಾಕ್ ಆಗಿದ್ದಾರೆ. ದುಬಾರಿ ಬಾಡಿಗೆ ಮನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ.
ರಾಜ್ವಿ (rajvi) ಹೆಸರಿನ ಎಕ್ಸ್ ಖಾತೆಯಲ್ಲಿ ಬೆಂಗಳೂರಿನ ದುಬಾರಿ ಬಾಡಿಗೆ ಮನೆಯ ಬಗ್ಗೆ ಪೋಸ್ಟ್ ಮಾಡಲಾಗಿದೆ. ಬೆಂಗಳೂರಿನ ಮನೆಗಳ ಬಾಡಿಗೆ ದರಗಳು ಹೆಚ್ಚಾಗಿವೆ. ಈ ದರಗಳು ಮುಂಬೈಗೂ ಸ್ಪರ್ಧೆ ನೀಡುವಂತಿವೆ. 70,000 ರೂಪಾಯಿ ಬಾಡಿಗೆಗೆ ಸೆಮಿ-ಫರ್ನಿಶ್ಡ್ 2BHK ಕೇಳುತ್ತಾರೆ ಅಂದರೆ ಏನು ಅರ್ಥ? ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
Bangalore rent scene is crazy and in immense competition with bombay because what do u mean u want 70k rent for a semi furnished 2bhk??
— Rajvi (@rajvishah30) January 20, 2026
ಇದನ್ನೂ ಓದಿ:ಬೆಂಗಳೂರಿನಲ್ಲಿ 90 ಲಕ್ಷ ರೂ ಉತ್ತಮ ಸಂಬಳವೇ: ಅನಿವಾಸಿ ಭಾರತೀಯ ಹೀಗೆ ಕೇಳಿದ್ದೇಕೆ?
ಜನವರಿ 20 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಮೂವತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪೂರ್ವ ಬೆಂಗಳೂರು ಬಿಟ್ಟು, ಬೇರೆ ಕಡೆ 2ಬಿ ಹೆಚ್ ಕೆಗೆ 25 ರಿಂದ 30 ಸಾವಿರ ರೂಪಾಯಿ ಬಾಡಿಗೆ ಇದೆ. ಬೆಂಗಳೂರಿನ ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯಕ್ಕೆ ಬಾಡಿಗೆ ದರಗಳು ಬದಲಾಗುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬೆಂಗಳೂರಿನ ಮನೆ ಮಾಲೀಕರು ಆಸೆ ಬುರುಕರು ಎಂದಿದ್ದಾರೆ. ಇನ್ನೊಬ್ಬರು, ಬಾಡಿಗೆ ಮನೆಯಲ್ಲಿ ಇರೋ ಬದಲು ಸಾಲ ಮಾಡಿ ಮನೆ ಖರೀದಿ ಮಾಡಿದ್ರೆ ಸ್ವಂತ ಮನೆಯಾದ್ರೂ ಆಗುತ್ತೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Thu, 22 January 26