Viral: ಬೆಂಗಳೂರಿನಲ್ಲಿ ವಿದೇಶಿ ಉದ್ಯಮಿ ಮೇಲೆ ನಾಯಿ ದಾಳಿ, ಬೆಡ್ ಮೇಲೆ ಮಲಗಿ ಶ್ವಾನಗಳನ್ನು ಪ್ರೀತಿಸುವೆ ಎಂದು ವ್ಯಂಗ್ಯ ಪೋಸ್ಟ್

ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಸಿಕ್ಕಸಿಕ್ಕವರ ಮೇಲೆ ಬೀದಿ ನಾಯಿಗಳು ದಾಳಿ ಮಾಡುತ್ತಿವೆ. ಈ ಘಟನೆಗಳ ಆಗಾಗ್ಗೆ ವರದಿಯಾಗುತ್ತಲೇ ಇದೆ. ಆದರೆ ಇದೀಗ ಬೆಂಗಳೂರಿಗೆ ಬಂದಿದ್ದ ವಿದೇಶಿ ಪ್ರಜೆಗೆ ಬೀದಿನಾಯಿಯೊಂದು ಕಚ್ಚಿದೆ. ಈ ಬಗ್ಗೆ ಸ್ವತಃ ಅವರೇ ಪೋಸ್ಟ್‌ ಮಾಡಿ ಹೇಳಿಕೊಂಡಿದ್ದು, ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Viral: ಬೆಂಗಳೂರಿನಲ್ಲಿ ವಿದೇಶಿ ಉದ್ಯಮಿ ಮೇಲೆ ನಾಯಿ ದಾಳಿ, ಬೆಡ್ ಮೇಲೆ ಮಲಗಿ ಶ್ವಾನಗಳನ್ನು ಪ್ರೀತಿಸುವೆ ಎಂದು ವ್ಯಂಗ್ಯ ಪೋಸ್ಟ್
ವಿದೇಶಿ ಉದ್ಯಮಿ ಮೇಲೆ ಬೀದಿನಾಯಿ ದಾಳಿ
Image Credit source: Pinterest/ Twitter

Updated on: Oct 21, 2025 | 2:56 PM

ಬೆಂಗಳೂರು, ಅಕ್ಟೋಬರ್ 21: ಬೆಂಗಳೂರಿನ (Bengaluru) ರಸ್ತೆ ಗುಂಡಿಗಳು, ಕಸದ ಸಮಸ್ಯೆಗಳ ಬಗ್ಗೆ ವಿದೇಶಿ ಪ್ರಜೆಗಳು ಸೇರಿದಂತೆ ಉದ್ಯಮಿಗಳು ಧ್ವನಿ ಎತ್ತುತ್ತಲೇ ಇದ್ದಾರೆ. ಆದರೆ ಇದೀಗ ಬೀದಿನಾಯಿಗಳ ಹಾವಳಿಯ ವಿಚಾರವು ಮತ್ತೆ ಮುನ್ನಲೆಗೆ ಬಂದಿದೆ. ಹೌದು ಬೆಂಗಳೂರಿನಲ್ಲಿ ಜಾಗಿಂಗ್ ಮಾಡುತ್ತಿದ್ದ ವೇಳೆ ವಿದೇಶಿ ಉದ್ಯಮಿಯೊಬ್ಬರ ಮೇಲೆ ಬೀದಿನಾಯಿಯೊಂದು ದಾಳಿ ಮಾಡಿದೆ. ಯುನೈಟೆಡ್ ಕಿಂಗ್ಡಮ್ ಮೂಲದ ಉದ್ಯಮಿ, ಗೇಮ್ ಡಿಸೈನರ್ ಒಲಿವರ್ ಜಾನ್ಸ್ (Game Designer Oliver Jones) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ವಿಚಾರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿದೇಶಿ ಪ್ರಜೆಯ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ವಿದೇಶಿ ಪ್ರಜೆ ಮೇಲೆ ಬೀದಿನಾಯಿ ದಾಳಿ

ಒಲಿವರ್ ಜಾನ್ಸ್ (Oliver Jones) ಹೆಸರಿನ ಎಕ್ಸ್ ಖಾತೆ ಯಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋ ಹಂಚಿಕೊಂಡು ನಾನು ಬೀದಿನಾಯಿಗಳನ್ನು ಪ್ರೀತಿಸುತ್ತೇನೆ. ವಿಶೇಷವಾಗಿ ಬೆಂಗಳೂರಿನಲ್ಲಿ ಓಡುವಾಗ ಎಂದು ಬರೆದುಕೊಂಡಿದ್ದಾರೆ. ನಾನು ಸಾಮಾನ್ಯವಾಗಿ ಹಳೇ ಏರ್‌ಪೋರ್ಟ್ ಟರ್ಮಿನಲ್ ಪ್ರವೇಶ ದ್ವಾರದ ಬಳಿ ಓಡುತ್ತೇನೆ. ಈ ವೇಳೆ ಆಕ್ರಮಣಕಾರಿ ವರ್ತನೆಯ ನಾಯಿಗಳ ಗುಂಪಿನಿಂದ ಬಂದ ನಾಯಿಯೊಂದು ನನಗೆ ಕಚ್ಚಿದೆ. ಕೂಡಲೇ ಸ್ಥಳೀಯರು ನನ್ನನ್ನು ಗಮನಿಸಿ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದರು. ನಾಯಿ ಕಡಿತಕ್ಕೆ ಸಂಬಂಧಿಸಿದ ಇಂಜೆಕ್ಷನ್ ಪಡೆದಿದ್ದೇನೆ. ನಾಯಿಗಳ ಗುಂಪು ನನ್ನ ಪತ್ನಿ ಮೇಲೆಯೂ ಸ್ವಲ್ಪದರಲ್ಲೇ ದಾಳಿ ಮಾಡುತ್ತಿದ್ದವು ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ
ದೀಪಾವಳಿಯಿಂದ ಬೆಂಗಳೂರು ಖಾಲಿ ಖಾಲಿ ಎಂದ ಟೆಕ್ಕಿ
ಪತ್ನಿಯನ್ನು ಟೆಸ್ಟ್‌ಗೆ ಕರ್ಕೊಂಡು ಹೋಗಿ ಟ್ರಾಫಿಕ್‌ನಲ್ಲಿ ಸಿಲುಕಿದ ವ್ಯಕ್ತಿ
ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಸೃಷ್ಟಿಸಿದ ರಾಜನ್ ಆನಂದನ್ ಟ್ವೀಟ್
ಬೆಂಗಳೂರಿನ ಈ ಭಾಗದಲ್ಲೇ ಟ್ರಾಫಿಕ್​​ ಹೆಚ್ಚು

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ಅಕ್ಟೋಬರ್ 20 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಹುಷಾರಾಗಿರಿ ಬೇಗ ಗುಣಮುಖರಾಗಿ ಎಂದಿದ್ದಾರೆ. ಇನ್ನೊಬ್ಬರು ಶ್ವಾನವು ನಿಮ್ಮನ್ನೇ ಗುರಿಯಾಗಿಸಿಕೊಂಡಿರುವುದು ವಿಷಾದಕರ. ಮೊದಲನೆಯದಾಗಿ, ನಾಯಿ ಕಡಿತಕ್ಕೆ ಕ್ಷಮೆಯಿರಲಿ. ನಮ್ಮ ರಾಜಕಾರಣಿಗಳು ನಿಷ್ಪ್ರಯೋಜಕರು, ದ್ವೇಷಪೂರಿತ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುವ ನಮ್ಮ ಜನರು ಇನ್ನೂ ಕೆಟ್ಟವರು. ನಾಯಿ ಕಡಿತಕ್ಕೆ ನೀವು ಸರಿಯಾದ ಚಿಕಿತ್ಸೆ ತೆಗೆದುಕೊಂಡು ಬೇಗ ಗುಣಮುಖರಾಗಿರಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ನಿಮ್ಮ ದೇಶಕ್ಕೆ ಮರಳಬಾರದೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:20 ನಿಮಿಷಗಳಲ್ಲಿ 14 ಕಿ.ಮೀ ತಲುಪಿದೆ, ದೀಪಾವಳಿಯಿಂದ ಬೆಂಗಳೂರು ಖಾಲಿ ಖಾಲಿ ಎಂದ ಟೆಕ್ಕಿ

ಜಾನ್ಸ್ ಇದಕ್ಕೆ ಪ್ರತಿಕ್ರಿಯಿಸಿದ್ದು, ನಾನು ಭಾರತ ಬಿಡುವುದಿಲ್ಲ. ಏಕೆಂದರೆ ಏನಾದರೂ ಮಾಡಬೇಕು ಎಂದು ನಂಬಿಕೊಂಡಿದ್ದೇನೆ. ಆ ಮಾರ್ಗದಲ್ಲೇ ನಡೆಯಲು ಬಯಸುತ್ತೇನೆ. ಅದರಲ್ಲಿ ನಾಯಿ ಕಡಿತವೂ ಸೇರಿರಬಹುದು. 300 ಡಾಲರ್ ಇಟ್ಟುಕೊಂಡು ಈ ಹೊಸ ದೇಶಕ್ಕೆ ಬಂದು ಪಾರಿವಾಳಗಳ ಗೂಡಿನೊಂದಿಗೆ ವಾಸವಿದ್ದು ಇಂದು 100 ಮಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯವಿರುವ ಎರಡು ಸ್ಟಾರ್ಟಪ್‌ಗಳನ್ನು ಸ್ಥಾಪಿಸಿದ್ದೇನೆ. ನಾನು ಈ ರೀತಿ ಬೆಳೆಯುವುದನ್ನು ದೂರದಿಂದ ನನ್ನ ಪಾಲಕರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:36 pm, Tue, 21 October 25