
ಬೆಂಗಳೂರು, ಜನವರಿ 08: ಈಗೇನಿದ್ದರೂ ಕೈಯಲ್ಲಿ ದುಡ್ಡಿದರೆ (money) ಮಾತ್ರ ಜೀವನ ನಡೆಸಲು ಸಾಧ್ಯ. ಬೆಂಗಳೂರು (Bengaluru) ಅಂದ್ರೆ ಎಷ್ಟು ದುಡಿದ್ರು ಸಾಕಲ್ಲ ಅನ್ನೋದು ಅನೇಕರ ಅಭಿಪ್ರಾಯ. ಆದರೆ, ಬೆಂಗಳೂರಿನಲ್ಲಿ ವಾಸಿಸುವ 24 ವರ್ಷದ ಕೇರಳಿಗನೊಬ್ಬ ತನ್ನ ಮಾಸಿಕ ಖರ್ಚು ವೆಚ್ಚದ ಬಗ್ಗೆ ಹಂಚಿಕೊಂಡಿದ್ದಾನೆ. ತಿಂಗಳಿಗೆ 27,300 ರೂ ಖರ್ಚು ಆಗುತ್ತಿದ್ದು, ಈ ನಗರವು ತುಂಬಾ ದುಬಾರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ. ಈ ರೆಡ್ಡಿಟ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ.
ಪರ್ಸನಲ್ ಫೈನಾನ್ಸ್ ಇಂಡಿಯಾ (Personalfinanceindia) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಯುವಕನೊಬ್ಬ ತಿಂಗಳ ಖರ್ಚು ವೆಚ್ಚಗಳ ಬಗ್ಗೆ ವಿವರಿಸಿರುವುದನ್ನು ಕಾಣಬಹುದು. ಒಂಟಿಯಾಗಿ 1 ವರ್ಷ ಇಲ್ಲಿ ವಾಸಿಸಿದ ನಂತರ ನನ್ನ ಖರ್ಚುಗಳು ಇಲ್ಲಿವೆ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.
1 Year of living alone and here are my expenses
byu/adarshhehe inpersonalfinanceindia
ನಾನು ರೂಮ್‌ಮೇಟ್‌ನೊಂದಿಗೆ 1BHK ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇನೆ. ಒಟ್ಟು ಬಾಡಿಗೆ 13,000 ರೂ, ಆದರೆ ರೂಮ್‌ಮೇಟ್ ಇರುವುದರಿಂದ ನಾನು 7000 ರೂ ನೀಡಬೇಕಾಗುತ್ತದೆ. ಹೀಗಾಗಿ ನನ್ನ ಒಟ್ಟು ಮಾಸಿಕ ಬಾಡಿಗೆ 7,000 ರೂ, ಆಹಾರ ವೆಚ್ಚ 10,800 ರೂ, ಪ್ರಯಾಣದ ವೆಚ್ಚ 1,000 ರೂ, ಊರ ಪ್ರಯಾಣದ ವೆಚ್ಚ 4,000 ರೂ, ವೈ-ಫೈ 500 ರೂ, ನೀರು (ಬಿಲ್ + ಕುಡಿಯುವ ಶುಲ್ಕ) 450 ರೂ, ಜಿಮ್ 570 ರೂ ಹಾಗೂ ಇತರೆ ಖರ್ಚು 3,000 ರೂ ತಿಂಗಳ ಒಟ್ಟು ಖರ್ಚು 27,300 ರೂ ಆಗುತ್ತದೆ ಎಂದು ವಿವರಿಸಿದ್ದಾನೆ.
ಕೇವಲ 3 ಕಿಲೋಮೀಟರ್ ದೂರದಲ್ಲಿ ವಾಸಿಸುವ ನನ್ನ ಕೆಲ ಸ್ನೇಹಿತರು ತಿಂಗಳಿಗೆ 45,000 ರೂ ಖರ್ಚು ಮಾಡುತ್ತಾರೆ. ನನ್ನ ಸ್ನೇಹಿತರ 1BHK ಮನೆ ಬಾಡಿಗೆ 26,000 ರೂ ಆಗಿದೆ. ನಿಮ್ಮ ಜೀವನಶೈಲಿ ನಿಮ್ಮ ನಿಯಂತ್ರಣದಲ್ಲಿದ್ದರೆ ಬೆಂಗಳೂರು ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅಷ್ಟು ದುಬಾರಿಯಲ್ಲ ಎಂದು ಹೇಳಿದ್ದಾನೆ.
ಇದನ್ನೂ ಓದಿ:2025ರಲ್ಲಿ 47 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ದಂಪತಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರ ನೀವು ತುಂಬಾ ಬುದ್ಧಿವಂತರು ಮತ್ತು ಬಜೆಟ್‌ನಲ್ಲಿ ಮನೆಯನ್ನು ಹೇಗೆ ನಡೆಸಬೇಕೆಂದು ತಿಳಿದಿದ್ದೀರಿ.. ನಿಮ್ಮನ್ನು ಅತ್ಯುತ್ತಮ ರೀತಿಯಲ್ಲಿ ಬೆಳೆಸಿದ ನಿಮ್ಮ ಪೋಷಕರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಇನ್ನೊಬ್ಬರು ಖರ್ಚು ವೆಚ್ಚಗಳು ನಿಯಂತ್ರಣದಲ್ಲಿದ್ದರೆ ಬೆಂಗಳೂರು ಜೀವನ ಆರಾಮದಾಯಕ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ