
ಬೆಂಗಳೂರು, ಆಗಸ್ಟ್ 19: ಕೆಲವರು ಎಷ್ಟೇ ಓದಿಕೊಂಡಿರಲಿ, ತಮ್ಮ ಆಸಕ್ತಿಯನ್ನೇ ವೃತ್ತಿಯಾಗಿ ಬದಲಾಯಿಸಿಕೊಳ್ಳುತ್ತಾರೆ. ಹೀಗಾಗಿ ತಮಗೆ ಏನು ಇಷ್ಟವೋ ಆ ಕಾಯಕದಲ್ಲೇ ತೊಡಗಿ ಬದುಕು ಕಟ್ಟಿಕೊಂಡವರನ್ನು ನೀವು ನೋಡಿರಬಹುದು. ಆದರೆ ಈ ಯುವತಿಗೆ ವಾಹನ ಓಡಿಸುವುದೆಂದರೆ ಅದೇನೋ ಕ್ರೇಜ್. ಈ ಆಸಕ್ತಿಯನ್ನೇ ವೃತ್ತಿಯಾಗಿಸಿಕೊಂಡು ಬೆಂಗಳೂರಿನಲ್ಲಿ (Bengaluru) ಆಟೋ ಓಡಿಸುತ್ತಿದ್ದಾಳೆ ಈ ಯುವತಿ. ಈಕೆಯ ಹೆಸರು ಸಫುರಾ. ತಮನ್ನಾ ತನ್ವೀರ್ (Tamanna Tanveer) ಎನ್ನುವವರು ಇನ್ಸ್ಟಾಗ್ರಾಮ್‌ನಲ್ಲಿ ಈ ಯುವತಿಯ ಬಗೆಗಿನ ಸ್ಟೋರಿ ಹಂಚಿಕೊಂಡಿದ್ದು, ಸದ್ಯಕ್ಕೆ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇನ್ಫ್ಲುಯೆನ್ಸರ್ ತಮನ್ನಾ ತನ್ವೀರ್ @tamannapasha official ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಯುವತಿಯ ವಿಡಿಯೋ ಹಂಚಿಕೊಂಡು, ಈಕೆಯ ಆಟೋದಲ್ಲಿ ಪ್ರಯಾಣ ಬೆಳೆಸಿದ್ದು ಇದೇ ಮೊದಲು, ಸಫುರಾ.ಎಂಬ ಯುವತಿಯು ಆಸಕ್ತಿಯನ್ನು ವೃತ್ತಿಯಾಗಿಸಿಕೊಂಡ ಬಗ್ಗೆ ಹೇಳಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಉಬರ್ , ಓಲಾ ಅಥವಾ ರ್ಯಾಪಿಡೊ ಬುಕ್ ಮಾಡಲು ಪ್ರಯತ್ನಿಸುತ್ತಿದ್ದೆ, ಆದರೆ ವಿಫಲನಾದೆ. ಯುವತಿಯೊಬ್ಬಳು ಓಡಿಸುತ್ತಿದ್ದ ಆಟೋದಲ್ಲಿ ನಾನು ಕುಳಿತಿದ್ದು ಇದೇ ಮೊದಲು. ನಾನು ಅವಳಿಗೆ ಕೆಲವು ಪ್ರಶ್ನೆಗಳನ್ನು ಕೇಳಲು ನಿರ್ಧರಿಸಿದೆ ಎಂದು ಹೇಳುವುದನ್ನು ನೀವಿಲ್ಲಿ ನೋಡಬಹುದು.
ತಮನ್ನಾ ಆಟೋ ಚಾಲಕಿಯನ್ನು ಮಾತನಾಡಿಸಿದಾಗ, ಆಕೆಯು ತನಗೆ ಡ್ರೈವಿಂಗ್ ಅಂದ್ರೆ ತುಂಬಾ ಇಷ್ಟ. ಆದರೆ, ಕಾರು ಖರೀದಿಸಲು ತನ್ನ ಬಳಿ ಬಜೆಟ್ ಇರಲಿಲ್ಲ, ನಾನು ಆಟೋವನ್ನು ಖರೀದಿಸಿದೆ. ನನಗೆ ವಾಹನ ಓಡಿಸುವುದು ತುಂಬಾ ಇಷ್ಟ. ಕಾರು, ಆಟೋ, ಬೈಕ್ ಹೀಗೆ ಎಲ್ಲಾ ವಾಹನವನ್ನು ಓಡಿಸುವೆ. ಆದರೆ, ನನ್ನ ಬಜೆಟ್‌ನಲ್ಲಿ ನಾನು ಆಟೋ ಖರೀದಿಸಬಹುದು ಅಷ್ಟೇ ಎಂದು ಹೇಳಿದ್ದಾಳೆ.
ಸ್ವಿಫ್ಟ್ ಕಾರು ಖರೀದಿಸಲು ನನ್ನ ಬಳಿ ಬಜೆಟ್ ಇಲ್ಲ.ಹೀಗಾಗಿ ಆಟೋ ಆಯ್ಕೆ ಮಾಡಿಕೊಂಡೆ. ಮುಂದೆ ಭವಿಷ್ಯದಲ್ಲಿ ನಾನು ಖರೀದಿಸಬಹುದೇ ಅಥವಾ ಇಲ್ಲವೇ ಎಂದು ನೋಡೋಣ. ನಾನು ಏನೇ ಮಾಡಿದರೂ, ವಾರದ ಮೊದಲ ದಿನ ಅಂದುಕೊಂಡೆ ಮಾಡುತ್ತೇನೆ. ನನಗೆ ಬೇರೆ ಕೆಲಸಕ್ಕೆ ಹೋಗಬೇಕು’ ಎಂದು ಅನಿಸುತ್ತಿಲ್ಲ. ನಾನು ಪ್ರತಿ ದಿನವು ಇದನ್ನೂ ಖುಷಿಯಿಂದ ಮಾಡುತ್ತೇನೆ, ನನಗೆ ಇದರಲ್ಲಿ ಖುಷಿಯಿದೆ ಎಂದು ಆಟೋಚಾಲಕಿ ಸಫುರಾ ಹೇಳುವುದನ್ನು ನೋಡಬಹುದು.
ಇದನ್ನೂ ಓದಿ:Video: ಇದು ಕಲಿಯುವ ಹಂಬಲ: ಉದ್ಯಮಿ ರವಿಕಾಂತ್ ಪಾಡ್‌ಕ್ಯಾಸ್ಟ್ ನೋಡಿಕೊಂಡು ಆಟೋ ಓಡಿಸಿದ ಚಾಲಕ
ಈ ವಿಡಿಯೋ 11 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರರು ಆಕೆಯ ನಗುವು ಎಲ್ಲವನ್ನು ಹೇಳುತ್ತಿದೆ. ಆಕೆಯ ಕನಸುಗಳೆಲ್ಲವು ನನಸಾಗಲಿ ಎಂದು ಹೇಳಿದ್ದಾರೆ. ಮತ್ತೊಬ್ಬರು ಆಕೆಯ ಆಟೋದಲ್ಲಿ ನಾನು ಒಂದಲ್ಲ ಒಂದು ದಿನ ಪ್ರಯಾಣಿಸುವೆ ಎನ್ನುವ ಭರವಸೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಟ್ರಾಫಿಕ್ ನಲ್ಲಿ ಕಾಯುವುದನ್ನು ಖುಷಿ ಪಡಿ, ನಿಮ್ಮ ಪ್ರಯಾಣ ಹೀಗೆ ಮುಂದುವರೆಯಲಿ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ