ಬೆಂಗಳೂರು ಸೂಪರ್​, ತಡರಾತ್ರಿಯವರೆಗೆ ಫುಡ್ ಡೆಲಿವರಿ ಆಗುತ್ತೆ, ಈ ಸೇವೆಯನ್ನು ಮೆಚ್ಚಿದ ಅಮೇರಿಕಾದ ಮಹಿಳೆ

ವಿದೇಶಿಗರು ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಮೆಚ್ಚಿಕೊಳ್ಳುತ್ತಾರೆ. ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾರೆ. ಇದೀಗ ಬೆಂಗಳೂರಿನಲ್ಲಿ ವಾಸವಿರುವ ಅಮೇರಿಕಾದ ಮಹಿಳೆಯೊಬ್ಬರು ತಡರಾತ್ರಿಯಲ್ಲಿ ಬೆಂಗಳೂರಿನಲ್ಲಿರುವ ಆಹಾರ ವಿತರಣಾ ವ್ಯವಸ್ಥೆಯಿದ್ದು, ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಬೆಂಗಳೂರು ಸೂಪರ್​, ತಡರಾತ್ರಿಯವರೆಗೆ ಫುಡ್ ಡೆಲಿವರಿ ಆಗುತ್ತೆ, ಈ ಸೇವೆಯನ್ನು ಮೆಚ್ಚಿದ ಅಮೇರಿಕಾದ ಮಹಿಳೆ
ವೈರಲ್ ವಿಡಿಯೋ
Image Credit source: Instagram

Updated on: May 06, 2025 | 1:00 PM

ಕೈಯಲ್ಲಿ ಸ್ಮಾರ್ಟ್ ಫೋನ್ (smart phone) ಇದೆ, ಕುಳಿತಲ್ಲಿಂದಲೇ ಎಲ್ಲವನ್ನು ಬುಕ್ ಮಾಡಿ ಮನೆ ಬಾಗಿಲಿಗೆ ತರಿಸಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅದರಲ್ಲಿ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುತ್ತಿರುವ ಜನರು ಝೊಮ್ಯಾಟೋ, ಸ್ವಿಗ್ಗಿ ಇತ್ಯಾದಿ ಫುಡ್‌ ಡೆಲಿವರಿಗಳಲ್ಲಿ ಫುಡ್ ಆರ್ಡರ್ (food order) ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇದೀಗ ಅಮೇರಿಕಾದ ಮಹಿಳೆಯಾರೊಬ್ಬರೂ ಬೆಂಗಳೂರಿನಲ್ಲಿ ತಡರಾತ್ರಿಯವರೆಗಿನ ಫುಡ್ ಡೆಲಿವರಿ ಸಿಸ್ಟಮ್ ಗೆ ಮಾರು ಹೋಗಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ವಾಸವಿರುವ ಅಮೇರಿಕಾದ ಮಹಿಳೆ ಡಾನಾ ಮೇರಿ (american lady danameri ) ಯೊಬ್ಬರು, ಇಲ್ಲಿ ತಡರಾತ್ರಿಯವರೆಗೂ ಗ್ರಾಹಕರಿಗೆ ಆಹಾರವನ್ನು ತಲುಪಿಸುವ ಕೆಲಸವನ್ನು ಫುಡ್ ಡೆಲಿವರಿ ಕಂಪೆನಿಗಳು ಮಾಡುತ್ತಿದ್ದು ಇದಕ್ಕೆ ಪ್ರಾಮಾಣಿಕವಾಗಿ ಮೆಚ್ಚುಗೆ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ವಾಸವಿರುವ ಡಾನಾ ಮೇರಿಯವರು ಇನ್ಸ್ಟಾಗ್ರಾಮ್ ನಲ್ಲಿ ಆಕ್ಟಿವ್ ಆಗಿದ್ದು ಆಗಾಗ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಇದೀಗ ಬೆಂಗಳೂರಿನ ತಡರಾತ್ರಿಯವರೆಗಿನ ಆಹಾರ ವಿತರಣಾ ವ್ಯವಸ್ಥೆಯ ಕುರಿತು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. danameriplus3 ಹೆಸರಿನ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದು, ಭಾರತದಲ್ಲಿ ರಾತ್ರಿ 11 ಗಂಟೆ 20 ನಿಮಿಷಕ್ಕೆ ನಿಮ್ಮ ಮನೆಬಾಗಿಲಿಗೆ ಕೇಕನ್ನು ತಲುಪಿಸುತ್ತಾರೆ. ಕೇಕ್ ಮಾತ್ರವಲ್ಲ, ಐಸ್ ಕ್ರೀಮ್, ಕಾಫಿ, ಕೋಕ್, ಸೌತೆಕಾಯಿ ಸೇರಿದಂತೆ, ನೀವು ಮೆಟ್ರೋದಲ್ಲಿ ವಾಸಿಸುತ್ತಿದ್ದರೆ ಎಲ್ಲವನ್ನು ಪಡೆಯಬಹುದು ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬೆಂಗಳೂರಿನಲ್ಲಿರುವ ಅಮೇರಿಕಾದ ಮಹಿಳೆಯೊಬ್ಬರು, ಆನ್ಲೈನ್ ನಲ್ಲಿ ಆರ್ಡರ್ ಮಾಡಿದ ಕೇಕನ್ನು ಸವಿಯುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ
ಮದುವೆಯ ಅರಿಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ ಹೃದಯಾಘಾತದಿಂದ ವಧು ಸಾವು
ಐಸ್ ಕ್ರೀಂ ಮೇಲೆ ಗರಿಗರಿಯಾದ ಆಲೂಗಡ್ಡೆ ಫ್ರೈಸ್
ಡ್ರೀಮ್ 11 ನಲ್ಲಿ 39 ರೂ ಹೂಡಿಕೆ,ಯುವಕನಿಗೆ ಬಂತು ನೋಡಿ ನಾಲ್ಕು ಕೋಟಿ
ಕುದುರೆ ಮೇಲೇರಿ ಮದುವೆ ಮಂಟಪಕ್ಕೆ ಬಂದ ವರನಿಗೆ ಮಳೆಯಿಂದ ಸ್ವಾಗತ

ಇದನ್ನೂ ಓದಿ : ಮೂರು ವರ್ಷದ ಪ್ರೀತಿಗೆ ಇಸ್ಲಾಂ ಧರ್ಮ ತ್ಯಜಿಸಿ ಹಿಂದೂ ಧರ್ಮ ಸೇರಿದ ಯುವಕ

ವೈರಲ್ ವಿಡಿಯೋ ಇಲ್ಲಿದೆ ನೋಡಿ :

ಈ ವಿಡಿಯೋವೊಂದು ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಬಳಕೆದಾರರೊಬ್ಬರು, ‘ನಿಮ್ಮ ಮಾತಿನ ಅರ್ಥವೇನು, ಬೇರೆ ದೇಶದಲ್ಲಿ ಈ ರೀತಿ ವ್ಯವಸ್ಥೆಯಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಭಾರತvu ಇಂತಹ ಸಣ್ಣ ಪುಟ್ಟ ಸರ್ಪ್ರೈಸ್ ಗಳಿಗೆ ಹೆಸರುವಾಸಿಯಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಈ ವಿಡಿಯೋ ನೋಡಿದ ಬಳಿಕ ನಾನು ಮಧ್ಯರಾತ್ರಿ ಎರಡು ಗಂಟೆಗೆ ಸೂಪ್ ಆರ್ಡರ್ ಮಾಡಿದೆ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.

Instagram embedಈ ವಿಡಿಯೋವೊಂದು ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ಬಳಕೆದಾರರೊಬ್ಬರು, ‘ನಿಮ್ಮ ಮಾತಿನ ಅರ್ಥವೇನು, ಬೇರೆ ದೇಶದಲ್ಲಿ ಈ ರೀತಿ ವ್ಯವಸ್ಥೆಯಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಭಾರತvu ಇಂತಹ ಸಣ್ಣ ಪುಟ್ಟ ಸರ್ಪ್ರೈಸ್ ಗಳಿಗೆ ಹೆಸರುವಾಸಿಯಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಈ ವಿಡಿಯೋ ನೋಡಿದ ಬಳಿಕ ನಾನು ಮಧ್ಯರಾತ್ರಿ ಎರಡು ಗಂಟೆಗೆ ಸೂಪ್ ಆರ್ಡರ್ ಮಾಡಿದೆ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ