Viral: ಅತುಲ್‌ ಪತ್ನಿ ನಾಪತ್ತೆ; ಬೆಂಗಳೂರಿನಲ್ಲಿ ಗಮನ ಸೆಳೆಯುತ್ತಿದೆ ವಿಚಿತ್ರ ಜಾಹೀರಾತು

ಕಂಪನಿಗಳು ತಮ್ಮ ಬ್ರಾಂಡ್‌ಗಳು ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ಕ್ರಿಯೇಟಿವ್‌ ಜಾಹೀರಾತುಗಳನ್ನು ಟಿವಿ ಮತ್ತು ಸೋಷಿಯಲ್‌ ಮೀಡಿಯಾದಲ್ಲಿ ನೀಡುತ್ತಿರುತ್ತಾರೆ. ಆದರೆ ಇದೀಗ ಬೆಂಗಳೂರಿನಲ್ಲಿ ಅಲ್ಲಲ್ಲಿ ವಿಚಿತ್ರ ಜಾಹೀರಾತುಗಳು ಕಂಡು ಬಂದಿದ್ದು, ಇದರ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅತುಲ್‌, ನಿತಿನ್‌, ರವಿ, ವರುಣ್‌ ಇವರ ಪತ್ನಿಯರು ನಾಪತ್ತೆಯಾಗಿದ್ದಾರಂತೆ. ಈ ಕುರಿತಾದ ವಿಚಿತ್ರ ಜಾಹೀರಾತಿನ ಬಗೆಗಿನ ಮಾಹಿತಿ ಇಲ್ಲಿದೆ.

Viral: ಅತುಲ್‌ ಪತ್ನಿ ನಾಪತ್ತೆ; ಬೆಂಗಳೂರಿನಲ್ಲಿ ಗಮನ ಸೆಳೆಯುತ್ತಿದೆ ವಿಚಿತ್ರ ಜಾಹೀರಾತು
ಬೆಂಗಳೂರಿನಲ್ಲಿ ಗಮನ ಸೆಳೆದ ವಿಚಿತ್ರ ಜಾಹೀರಾತು
Image Credit source: Twitter

Updated on: Sep 04, 2025 | 10:37 AM

ಬೆಂಗಳೂರು, ಸೆಪ್ಟೆಂಬರ್ 04: ಕಂಪನಿ ತಮ್ಮ ಉತ್ಪನ್ನಗಳು ಹಾಗೂ ಕಂಪನಿಯ ಬಗ್ಗೆ ಪ್ರಚಾರ ಮಾಡಲು, ಗ್ರಾಹಕರನ್ನು ಆಕರ್ಷಿಸಲು ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಜಾಹೀರಾತನ್ನು (Advertisement) ನೀಡುತ್ತವೆ. ಆದರೆ ಈ ಜಾಹೀರಾತು ನೋಡಿಯೇ ಎಷ್ಟೋ ಜನರು ಪ್ರಾಡಕ್ಟ್‌ಗಳನ್ನು ಖರೀದಿಸುತ್ತಾರೆ. ಆದರೆ ಇದೀಗ ಬೆಂಗಳೂರಿನ (Bengaluru) ರಸ್ತೆ ಬದಿ ಹಾಗೂ ಬಸ್ ಸ್ಟ್ಯಾಂಡ್‌ಗಳಲ್ಲಿ ಪತ್ನಿ ಕಾಣೆಯಾಗಿದ್ದಾಳೆ ಎನ್ನುವ ವಿಶಿಷ್ಟ ಹಾಗೂ ವಿಚಿತ್ರ ಜಾಹೀರಾತೊಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ಜಾಹೀರಾತಿನಲ್ಲಿ ಗಂಡಂಡಿರ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಜಾಹೀರಾತಿನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಗಮನ ಸೆಳೆಯುತ್ತಿದೆ ವಿಚಿತ್ರ ಜಾಹೀರಾತು

ಇದನ್ನೂ ಓದಿ
ಈಜುಕೊಳದಂತಾದ ಬೆಂಗಳೂರು ಡಬಲ್ ಡೆಕ್ಕರ್ ಫ್ಲೈಓವರ್: ವಿಡಿಯೋ ವೈರಲ್
ಬೆಂಗಳೂರಿನಲ್ಲಿ 2BHK ಮನೆಯ ತಿಂಗಳ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಾ
ಬೆಂಗಳೂರಿನ ಸ್ಕೂಲ್‌ನಲ್ಲಿ ಒಂದನೇ ತರಗತಿ ಫೀಸ್ ಬರೋಬ್ಬರಿ 7.35 ಲಕ್ಷ ರೂ
14 ವರ್ಷ ಬ್ಯಾಂಕಿಂಗ್ ಅನುಭವ, ಇಂದು ಫುಟ್‌ಪಾತ್‌ನಲ್ಲೇ ಜೀವನ

@e4mtweet ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಬೆಂಗಳೂರಿನ ನಗರದಾದಂತ್ಯ ವಿಚಿತ್ರವೆನಿಸುವ ಜಾಹೀರಾತು ವೈರಲ್ ಆಗ್ತಿದೆ. ಈ ಜಾಹೀರಾತಿನಲ್ಲಿ ಅತುಲ್‌ ಪತ್ನಿ ಕಾಣೆಯಾಗಿದ್ದಾಳೆ, ನಿತಿನ್‌ ಪತ್ನಿ ಕಾಣೆಯಾಗಿದ್ದಾಳೆ, ರವಿ ಪತ್ನಿ ಕಾಣೆಯಾಗಿದ್ದಾಳೆ ಈ ರೀತಿಯ ವಿಚಿತ್ರ ಜಾಹೀರಾತುಗಳು ಬಸ್ ಸ್ಟ್ಯಾಂಡ್, ಫ್ಲೆಕ್ಸ್ ಹಾಗೂ ರಸ್ತೆಬದಿಯ ಬಿಲ್‌ ಬೋರ್ಡ್‌ನಲ್ಲಿ ಕಾಣಬಹುದು.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ: ಈಜುಕೊಳದಂತಾದ ಬೆಂಗಳೂರು ಡಬಲ್ ಡೆಕ್ಕರ್ ಫ್ಲೈಓವರ್: ವಿಡಿಯೋ ವೈರಲ್, ಎಂಜಿನಿಯರಿಂಗ್ ಅದ್ಭುತ ಎಂದ ನೆಟ್ಟಿಗರು

ಆಗಸ್ಟ್ 29 ರಂದು ಶೇರ್ ಮಾಡಲಾದ ವಿಚಿತ್ರ ಜಾಹೀರಾತಿನ ಫೋಟೋವು ನೆಟ್ಟಿಗರ ತಲೆಯಲ್ಲಿ ಹುಳ ಬಿಟ್ಟಂತಾಗಿದೆ. ಈ ಜಾಹೀರಾತಿನ ಒಳ ಅರ್ಥ ಏನಿರಬಹುದು ನೀವೇ ಗೆಸ್‌ ಮಾಡಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್ ಗೆ ಬಳಕೆದಾರರು, ಈ ಜಾಹೀರಾತು ನೋಡಲು ಕುತೂಹಲಕರವಾಗಿದೆ, ಆದರೆ ಈ ರೀತಿ ಜಾಹೀರಾತು ನೀಡಿರುವುದು ಯಾಕಾಗಿ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಮೂವರ ಪತ್ನಿಯರು ಒಂದೇ ಸಲ ನಾಪತ್ತೆಯಾಗಲು ಹೇಗೆ ಸಾಧ್ಯ. ಈ ಜಾಹೀರಾತಿನಲ್ಲಿ ಏನೋ ಇರಬೇಕು ಎಂದಿದ್ದಾರೆ. ಮತ್ತೊಬ್ಬರು, ಕೆಲವು ಜಾಹೀರಾತು ನೋಡಿದಾಗ ಕುತೂಹಲದೊಂದಿಗೆ ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ