ಪ್ರತಿನಿತ್ಯ ಸಂಗೀತವನ್ನು ಕೇಳುವುದು ಮಾನಸಿಕ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ. ಸಂಗೀತ ಸ್ಟ್ರೆಸ್ ಬಸ್ಟರ್ ಆಗಿದ್ದು, ಇದು ನಮ್ಮ ಒತ್ತಡವನ್ನು ನಿವಾರಿಸುವುದರ ಜೊತೆಗೆ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ಇದು ನಿಜನೇ ಅಲ್ವಾ. ನಾವು ಬೇಜಾರಾದಾಗ ಅಥವಾ ಯಾವುದೋ ಟೆನ್ಶನ್ ಅಲ್ಲಿ ಇದ್ದಾಗ, ಸಂಗೀತವನ್ನು ಆಲಿಸಿದ್ರೆ, ಮನದಲ್ಲಿರುವ ನೋವು, ಒತ್ತಡಗಳೆಲ್ಲಾ ಮಾಯವಾಗಿ, ಹಾಡನ್ನು ಕೇಳುತ್ತಾ, ಸಂತೋಷವಾಗಿರುತ್ತೇವೆ. ಇದಕ್ಕೆ ಸೂಕ್ತ ಉದಾಹರಣೆಯೆಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಟ್ರಾಫಿಕ್ ಮಧ್ಯೆ ಸಿಳುಕಿಕೊಂಡಂತಹ ಆಟೋ ಚಾಲಕರೊಬ್ಬರು, ಈ ಟ್ರಾಫಿಕ್ ಯಾವಾಗಲೂ ಇದ್ದಿದ್ದೆ, ಈ ಚಿಂತೆಯನ್ನೆಲ್ಲಾ ಬದಿಗಿಟ್ಟು, ಹಾಡನ್ನು ಕೇಳುತ್ತಾ ಟೈ ಪಾಸ್ ಮಾಡಿದ್ರೆ ಆಯ್ತಪ್ಪಾ ಎನ್ನುತ್ತಾ ಅಮೇರಿಕಾದ ಸುಪ್ರಸಿದ್ಧ ಗಾಯಕಿ ಕ್ರಿಸ್ಟಿನಾ ಪೆರ್ರಿ ಹಾಡಿರುವ ʼಐ ಹಾವ್ ಡೈ ಎವ್ರಿ ಡೇ, ವೈಟಿಂಗ್ ಫಾರ್ ಯುʼ ಎಂಬ ಹಾಡನ್ನು ಕೇಳುತ್ತಾ, ಆ ಕ್ಷಣವನ್ನು ಆನಂದಿಸಿದ್ದಾರೆ, ಈ ಸೊಗಸಾದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಈ ವಿಡಿಯೋವನ್ನು ನೀರ್ಜಾ ಶಾ (@Neerjargon) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ಪ್ರತಿಯೊಬ್ಬರೂ @christinaperri ಅವರ ಹಾಡನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಪುರಾವೆಯಿದು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಟ್ರಾಫಿಕ್ ಅಲ್ಲಿ ಸಿಳುಕಿಕೊಂಡಂತಹ ಆಟೋ ಚಾಲಕ ಕ್ರಿಸ್ಟಿನಾ ಪೆರ್ರಿ ಹಾಡಿರುವು ಸುಪ್ರಸಿದ್ಧ ಹಾಡೊಂದನ್ನು ಕೇಳುತ್ತಾ ಎಂಜಾಯ್ ಮಾಡುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು.
Proof that everyone loves @christinaperri! What an absolute joy to watch ❤️ pic.twitter.com/8HEDIou0Kh
— Neerja Shah (@Neerjargon) December 25, 2023
ವೈರಲ್ ವಿಡಿಯೋದಲ್ಲಿ ರಾತ್ರಿಯ ವೇಳೆ ಬೆಂಗಳೂರಿನ ಟ್ರಾಫಿಕ್ ಅಲ್ಲಿ ಸಿಳುಕಿಹಾಕಿಕೊಂಡಿದ್ದ ಆಟೋ ಚಾಲಕರೊಬ್ಬರು ಅಮೇರಿಕಾದ ಗಾಯಕಿ ಕ್ರಿಸ್ಟಿನಾ ಪೆರ್ರಿ ಅವರು ಹಾಡಿರುವ ʼಐ ಹಾವ್ ಡೈ ಎವ್ರಿ ಡೇ ವೈಟಿಂಗ್ ಫಾರ್ ಯುʼ ಎಂಬ ಸುಪ್ರಸಿದ್ಧ ಹಾಡನ್ನು ಕೇಳುತ್ತಾ, ಚಿಂತೆಗಳನ್ನೆಲ್ಲಾ ಬದಿಗಿಟ್ಟು ಆ ಕ್ಷಣವನ್ನು ಆನಂದಿಸುತ್ತಿರುವ ಸುಂದರ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಎಲ್ಲಿದೆ ನೈರ್ಮಲ್ಯ? ಈ ವೈರಲ್ ವಿಡಿಯೋವನ್ನು ನೋಡಿದ್ರೆ ಪಾನಿಪುರಿ ತಿನ್ನೋದೇ ಬೇಡಾ ಅಂತಿರಾ
ಡಿಸೆಂಬರ್ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ 80 ಸಾವಿರಕ್ಕಿಂತಲೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ನನ್ನ ಆಲ್ ಟೈಮ್ ಫೆವರೆಟ್ ಸಾಂಗ್ʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕರು ʼಸಂಗೀತವು ಸಂತೋಷದ ಸಾರ್ವತ್ರಿಕ ಭಾಷೆಯಾಗಿದೆʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: