Viral: ಬೆಂಗಳೂರಿಗನ ಹೊಸ ಪ್ರಯತ್ನ; ಮನೆಯಲ್ಲಿ ಗರಿಗರಿ ದೋಸೆ ಮಾಡೋದಕ್ಕೂ ಬಂತು ರೋಬೋಟ್

ನಾವಿಂದು ತಂತ್ರಜ್ಞಾನದೊಂದಿಗೆ ಬೆಸೆದುಕೊಂಡಿದ್ದೇವೆ. ಹೀಗಾಗಿ ಪ್ರತಿಯೊಂದು ಕೆಲಸದಲ್ಲೂ ಮೆಷಿನ್‌ಗಳದ್ದೇ ಕಾರುಬಾರು. ಇದೀಗ ಬೆಂಗಳೂರಿನ ಇಂಜಿನಿಯರ್ ಒಬ್ಬರು ದೋಸೆ ಮಾಡುವ ರೋಬೋಟನ್ನು ಅಭಿವೃದ್ಧಿ ಪಡಿಸಿದ್ದಾರೆ. ಥಿಂಡಿ ಎಂಬ ಹೆಸರಿನ ದೋಸೆ ತಯಾರಿಸುವ ಈ ರೋಬೋಟ್ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಸಮಯ ಉಳಿತಾಯದೊಂದಿಗೆ ಗರಿಗರಿ ದೋಸೆ ಮಾಡುವ ಈ ಮೆಷಿನ್‌ ಕಂಡು ಎಲ್ಲರೂ ಅಚ್ಚರಿಪಟ್ಟಿದ್ದಾರೆ.

Viral: ಬೆಂಗಳೂರಿಗನ ಹೊಸ ಪ್ರಯತ್ನ; ಮನೆಯಲ್ಲಿ ಗರಿಗರಿ ದೋಸೆ ಮಾಡೋದಕ್ಕೂ ಬಂತು ರೋಬೋಟ್
ದೋಸೆ ಮಾಡುವ ರೋಬೋಟ್
Image Credit source: Reddit

Updated on: Aug 15, 2025 | 12:15 PM

ಬೆಂಗಳೂರು, ಆಗಸ್ಟ್ 15: ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮನೆಕೆಲಸ ಹಾಗೂ ಆಫೀಸಿನ ಕೆಲಸ ನಿಭಾಯಿಸಿಕೊಂಡು ಹೋಗುವುದು ಕಷ್ಟ. ಹೀಗಾಗಿ. ಮಹಿಳೆಯರ ಅರ್ಧಕರ್ಧ ಕೆಲಸವನ್ನು ರೋಬೋಟ್‌ಗಳು ಮಾಡುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಿನವರು ಮನೆಕೆಲಸಕ್ಕಾಗಿ ರೋಬೋಟ್‌ಗಳನ್ನು ಖರೀದಿಸುತ್ತಿರುವುದನ್ನು ನೋಡಿರಬಹುದು. ಇದೀಗ ದೋಸೆ ಮಾಡುವ ಸಮಯವನ್ನು ಉಳಿಸಲು ರೋಬೋಟ್ ಬಂದಿದೆ. ಬೆಂಗಳೂರಿನ ಇಂಜಿನಿಯರ್ (Bengaluru Engineer) ಒಬ್ಬರು ದೋಸೆ ಮಾಡುವ ರೋಬೋಟನ್ನು ಅಭಿವೃದ್ಧಿ ಪಡಿಸುವ ಮೂಲಕ ಸುದ್ದಿಯಾಗಿದ್ದಾರೆ. ಥಿಂಡಿ ಎಂಬ ಹೆಸರಿನ ಈ ರೋಬೋಟ್ (Robot), ಸ್ವಯಂಚಾಲಿತವಾಗಿ ದೋಸೆಗಳನ್ನು ತಯಾರಿಸಿ, ಕೆಲಸವನ್ನು ಸುಲಭವಾಗಿಸಲಿದೆ.

r/ Bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿನ ಇಂಜಿನಿಯರ್ ಒಬ್ಬರು ಈ ಬಗ್ಗೆ ಬರೆದುಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನಲ್ಲಿ ಒಂದು ವೈಯಕ್ತಿಕ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಥಿಂಡಿ ಎಂಬ ರೋಬೋಟ್ ಸ್ವಯಂಚಾಲಿತವಾಗಿ ದೋಸೆಗಳನ್ನು ತಯಾರಿಸಬಲ್ಲದು. ಇದು ಹಿಟ್ಟನ್ನು ಇದು ಹಿಟ್ಟನ್ನು ಸುರಿದು ಪ್ಯಾನ್ ಮೇಲೆ ಹರಡುತ್ತದೆ. ನನ್ನ ಕುಟುಂಬದ ಸದಸ್ಯರು ಅಡುಗೆ ಮಾಡುವುದನ್ನು ನೋಡಿದ ಬಳಿಕ ನಾನು ಈ ಬಗ್ಗೆ ಯೋಚಿಸಿದೆ. ಆ ಸಮಯದಲ್ಲಿ ನನಗೆ ಈ ಐಡಿಯಾ ಬಂದಿತು ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ
ರಸ್ತೆ ಕಾಮಗಾರಿ ವಿಳಂಬ, ಶಾಲೆಗೆ ಹೋಗಲು ಬೆಂಗಳೂರಿನ ಶಾಲಾ ಮಕ್ಕಳ ಪರದಾಟ
ಮೂಲ ಸೌಕರ್ಯಕ್ಕಾಗಿ ಬೆಂಗಳೂರಿನ ನಾಗರಿಕರ ವಿಶಿಷ್ಟ ಪ್ರತಿಭಟನೆ
ಕನ್ನಡದಲ್ಲಿ ಮಾತ್ರ ಮಾತನಾಡು, ಹಿಂದಿ, ಇಂಗ್ಲೀಷ್​ ಬೇಡ ಎಂದ ಗುಜರಾತಿ ತಾಯಿ
ಬೆಂಗಳೂರಿನ ಸೀರೆ ಮಳಿಗೆಯಲ್ಲಿ ಗಮನ ಸೆಳೆದ ಚಾಟ್ ಜಿಪಿಟಿ ಪ್ರೇರಿತ ಜಾಹೀರಾತು

ನಿಮ್ಮ ಅಭಿಪ್ರಾಯಗಳನ್ನು ಕೇಳಲು ನನಗೆ ತುಂಬಾ ಇಷ್ಟ – ಅಡುಗೆ ರೋಬೋಟ್‌ನಲ್ಲಿ ನೀವು ಯಾವ ವೈಶಿಷ್ಟ್ಯಗಳನ್ನು ಬಯಸುತ್ತೀರಿ?. ಇದರಲ್ಲಿ ಗರಿಗರಿಯಾದ ದೋಸೆಗಳನ್ನು ಮಾಡಬಹುದು. (ಇದು ಕಮರ್ಷಿಯಲ್ ಪೋಸ್ಟ್ ಅಲ್ಲ, ನನ್ನ ಹೊಸ ಆವಿಷ್ಕಾರ ಹಾಗೂ ನನ್ನ ಕಥೆಯನ್ನು ಸಹ ಬೆಂಗಳೂರಿನವರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ!) ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ಮಾಡಿಕೊಂಡು ರೋಬೋಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ನೋಡಬಹುದು. ಈ ರೋಬೋಟ್ ಪ್ಯಾನ್ ಮೇಲೆ ದೋಸೆ ಇಟ್ಟನ್ನು ಸುರಿದು, ದುಂಡಗೆ ಹರಡುತ್ತದೆ ಹಾಗೂ ಸಂಪೂರ್ಣವಾಗಿ ಕಂದು ಬಣ್ಣ ಬರುವವರೆಗೆ ಬೇಯಿಸುವುದನ್ನು ಕಾಣಬಹುದು.

ಇದನ್ನೂ ಓದಿ: Viral: ರಸ್ತೆ ಕಾಮಗಾರಿ ವಿಳಂಬ, ಟ್ರಾಫಿಕ್ ಜಾಮ್ ಹೆಚ್ಚಳ, ಶಾಲೆಗೆ ಹೋಗಲು ಬೆಂಗಳೂರಿನ ಶಾಲಾ ಮಕ್ಕಳ ಪರದಾಟ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನ ಇಂಜಿನಿಯರ್ ನ ಹೊಸ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರೊಬ್ಬರು ಈ ದೋಸೆ ನೋಡಲು ಇಂಗ್ಲೆಂಡ್ ನ ಕ್ರಿಕೆಟ್ ಮೈದಾನದಂತಿದೆ, ಆದರೂ ನೋಡಲು ಖುಷಿಯೆನಿಸುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಈ ರೋಬೋಟ್ ನಿರ್ಮಾಣಕ್ಕೆ ನೀವು ಬಹಳಷ್ಟು ಕೆಲಸ ಮಾಡಬೇಕಾಗುತ್ತದೆ ಎಂದು ನನಗೆ ತಿಳಿದಿದೆ. ಆದರೆ ಇದು ಇನ್ನೂ ವಿಫಲ ಯೋಜನೆಯಾಗಿದೆ. ನೀವು ಅದರ ಮೇಲೆ ಹೆಚ್ಚು ಕೆಲಸ ಮಾಡಬೇಕು ಶುಭವಾಗಲಿ ಎಂದು ಹೇಳಿದ್ದಾರೆ. ಇದು ನಿಜಕ್ಕೂ ಅದ್ಭುತವಾಗಿದೆ, ಈ ಯೋಜನೆಯಲ್ಲಿ ನೀವು ಪಟ್ಟ ಶ್ರಮ ನನಗೆ ಅರ್ಥವಾಗುತ್ತದೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:13 pm, Fri, 15 August 25