ಲಾಲ್‌ಬಾಗ್‌ ಫ್ಲವರ್‌ ಶೋ: ಫಲಪುಷ್ಪ ಪ್ರದರ್ಶನಕ್ಕೆ ಸ್ಟ್ರಾಂಗ್ ಸೆಂಟ್‌ ಹಾಕೊಂಡು ಬಂದ್ರೆ ಜೇನು ದಾಳಿ ಮಾಡಬಹುದು ಜೋಕೆ!

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 17, 2025 | 9:32 AM

ಲಾಲ್‌ಬಾಗ್‌ನಲ್ಲಿ ಇಂದಿನಿಂದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ಈ ಬಾರಿಯ ಪ್ರದರ್ಶನಕ್ಕೆ ಸುಮಾರು 2.75 ಕೋಟಿ ರೂ. ಖರ್ಚು ಮಾಡಲಾಗಿದ್ದು, ಸುಮಾರು 10 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ. ಇನ್ನೂ ಈ ಉದ್ಯಾನವನದಲ್ಲಿರುವ ಮರಗಳಲ್ಲಿ ಅಲ್ಲಲ್ಲಿ ಜೇನುನೊಣಗಳು ಗೂಡು ಕಟ್ಟಿದ್ದು, ಈ ನಿಟ್ಟಿನಲ್ಲಿ ಫ್ಲವರ್‌ ಶೋ ನೋಡಲು ಬರುವವರು ದಯವಿಟ್ಟು ಸ್ಟ್ರಾಂಗ್‌ ಪರ್ಫ್ಯೂಮ್‌ ಹಾಕಿಕೊಂಡು ಬರಬೇಡಿ ಎಂದು ತೋಟಗಾರಿಕೆ ಇಲಾಖೆಯು ತಿಳಿಸಿದೆ.

ಲಾಲ್‌ಬಾಗ್‌ ಫ್ಲವರ್‌ ಶೋ: ಫಲಪುಷ್ಪ ಪ್ರದರ್ಶನಕ್ಕೆ ಸ್ಟ್ರಾಂಗ್ ಸೆಂಟ್‌ ಹಾಕೊಂಡು ಬಂದ್ರೆ ಜೇನು ದಾಳಿ ಮಾಡಬಹುದು ಜೋಕೆ!
ಸಾಂದರ್ಭಿಕ ಚಿತ್ರ
Follow us on

ಲಾಲ್‌ಬಾಗ್‌ನಲ್ಲಿ ಇಂದಿನಿಂದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ಮಹರ್ಷಿ ವಾಲ್ಮೀಕಿ ಹಾಗೂ ರಾಮಾಯಣ ಮಹಾಕಾವ್ಯ ವಿಷಯಾಧಾರಿತ 217 ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ಈ ಬಾರಿಯ ಪ್ರದರ್ಶನಕ್ಕೆ ಸುಮಾರು 2.75 ಕೋಟಿ ರೂ. ಖರ್ಚು ಮಾಡಲಾಗಿದ್ದು, ಸುಮಾರು 10 ಲಕ್ಷ ಮಂದಿ ಆಗಮಿಸುವ ನಿರೀಕ್ಷೆಯಿದೆ. ಇನ್ನೂ ಈ ಉದ್ಯಾನವನದಲ್ಲಿರುವ ಮರಗಳಲ್ಲಿ ಅಲ್ಲಲ್ಲಿ ಜೇನುನೊಣಗಳು ಗೂಡು ಕಟ್ಟಿದ್ದು, ಈ ನಿಟ್ಟಿನಲ್ಲಿ ಫ್ಲವರ್‌ ಶೋ ನೋಡಲು ಬರುವವರು ದಯವಿಟ್ಟು ಸ್ಟ್ರಾಂಗ್‌ ಪರ್ಫ್ಯೂಮ್‌ ಹಾಕಿಕೊಂಡು ಬರಬೇಡಿ ಎಂದು ತೋಟಗಾರಿಕೆ ಇಲಾಖೆಯು ತಿಳಿಸಿದೆ.

ಪರ್ಫ್ಯೂಮ್‌ ವಾಸನೆ ಜೇನುನೊಣಗಳನ್ನು ಪ್ರಚೋದಿಸುವ ಸಾಧ್ಯತೆ ಇರುತ್ತವೆ. ಒಂದು ವೇಳೆ ಹೀಗೆ ಜೇನುನೊಣ ಪ್ರಚೋದನೆಗೆ ಒಳಗಾದರೆ ಅವುಗಳು ನಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಫ್ಲವರ್‌ ಶೋ ನೋಡಲು ಬರುವವರು ದಯವಿಟ್ಟು ಸ್ಟ್ರಾಂಗ್‌ ಪರ್ಫ್ಯೂಮ್‌ ಹಾಕೊಂಡು ಬರಬೇಡಿ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. ಜೊತೆಗೆ ಫಲಪುಷ್ಪ ಪ್ರದರ್ಶನವನ್ನು ನೋಡಲು ಬರುವ ಸಂದರ್ಶಕರು ಸೆಂಟ್‌ ಹಾಕಿದ್ರೆ ಉದ್ಯಾನವನದಲ್ಲಿರುವ ಮರಗಳ ಹತ್ತಿರ ಹೋಗಲೇಬೇಡಿ ಎಂದು ಕೂಡಾ ತಿಳಿಸಿದೆ.

ಇಲಾಖಾ ಸಿಬ್ಬಂದಿಗಳು ಲಾಲ್‌ಬಾಗ್‌ ಉದ್ಯಾನವನದಲ್ಲಿರುವ ಒಂದಷ್ಟು ಜೇನು ಗೂಡುಗಳನ್ನು ತೆರವುಗೊಳಿಸಿದ್ದಾರೆ. ಆದರೆ ಮರದ ಮೇಲಿರುವ ಕೆಲವೊಂದಿಷ್ಟು ಜೇನುಗೂಡುಗಳನ್ನು ಹಾಗೆಯೇ ಬಿಡಲಾಗಿದೆ. ಹೀಗಾಗಿ ಉದ್ಯಾನವನದಲ್ಲಿ ಜೇನುನೊಣಗಳಿಂದ ಆಗಬಹುದಾದ ಸಂಭವನೀಯ ತೊಂದರೆಗಳನ್ನು ನಿರೀಕ್ಷಿಸಿ, ಇಲಾಖೆಯು ಆಂಟಿ-ವೆನಮ್‌ ಇಂಜೆಕ್ಷನ್‌ಗಳ ಜೊತೆಗೆ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳನ್ನು ಒಳಗೊಂಡ ತಾತ್ಕಾಲಿಕ ವೈದ್ಯಕೀಯ ಘಟಕವನ್ನು ಸಹ ಇಲ್ಲಿ ನಿಯೋಜಿಸಿದೆ. ಅಷ್ಟೇ ಅಲ್ಲದೆ ಫ್ಲವರ್‌ ಶೋಗೆ ಬರುವ ಸಂದರ್ಶಕರು ಮರಗಳ ಕೆಳಗೆ ಸಿಗರೇಟ್‌, ಬೀಡಿ ಸೇರಿದತೆ ಧೂಮಪಾನ ಮಾಡಬಾರದು. ಮತ್ತು ಜೇನುಗೂಡುಗಳಿಗೆ ಮೊಬೈಲ್‌ ಇತ್ಯಾದಿ ಟಾರ್ಚ್‌ ಲೈಟ್‌ಗಳನ್ನು ಹಾಕಬಾರದು ಎಂದು ಹೇಳಿದೆ.

ಇದನ್ನೂ ಓದಿ: ಲಾಲ್​ಬಾಗ್ ಫ್ಲವರ್ ಶೋ: ವಾಹನ ಪಾರ್ಕಿಂಗ್​ಗೆ ಎಲ್ಲೆಲ್ಲಿ ಅವಕಾಶ? ಇಲ್ಲಿದೆ ವಿವರ

ಆನ್‌ಲೈನ್‌ ಟಿಕೆಟ್‌ ಲಭ್ಯವಿದೆ:

ತೋಟಗಾರಿಕೆ ಇಲಾಖೆಯು ಫ್ಲವರ್‌ ಶೋ ಟಿಕೆಟ್‌ಗಳನ್ನು ವಯಸ್ಕರರಿಗೆ 80 ರೂ. (ವಾರದ ದಿನಗಳಲ್ಲಿ) ಮತ್ತು ವಾರಾಂತ್ಯದಲ್ಲಿ 100 ರೂ. ಎಂದು ನಿಗದಿಪಡಿಸಿದೆ. 12 ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ದಿನಗಳಲ್ಲಿ 30 ರೂ. ಎಂದು ಟಿಕೆಟ್‌ ದರವನ್ನು ನಿಗದಿಪಡಿಸಲಾಗಿದೆ. ಜೊತೆಗೆ 10 ನೇ ತರಗತಿಯೊಳಗಿನ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬಂದರೆ ಅವರಿಗೆ ಫ್ರೀ ಎಂಟ್ರಿ ಎಂದು ಹೇಳಿದೆ.

ಟಿಕೆಟ್‌ಗಾಗಿ ಕೌಂಟರ್‌ಗಳಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಡೆಗಟ್ಟಲು ತೋಟಕಾರಿಕೆ ಇಲಾಖೆಯು ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ಸೌಲಭ್ಯವನ್ನು ಕೂಡಾ ಆರಂಭಿಸಿದೆ.

https://hasiru.karnataka.gov.in/flowershow/login.aspx ಈ ಲಿಂಕ್‌ ಮೂಲಕ ಟಿಕೆಟ್‌ ಖರೀದಿಸಬಹುದು ಮತ್ತು ಪ್ರದರ್ಶನದ ಸ್ಥಳದಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ನೇರವಾಗಿ ಪ್ರವೇಶವನ್ನು ಪಡೆಯಬಹುದು.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ