AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಡಿ ದೆಹಲಿಯ 5 ಸ್ಟಾರ್‌ ಹೋಟೆಲ್‌ನಲ್ಲೂ ಕರ್ನಾಟಕದ ಬ್ರ್ಯಾಂಡ್‌ಗಳದ್ದೇ ಹವಾ; ಹೆಮ್ಮೆಯಿಂದ ಪೋಸ್ಟ್‌ ಶೇರ್‌ ಮಾಡಿದ ಕನ್ನಡಿಗ

ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್‌ ಉತ್ಪನ್ನಗಳು ರಾಷ್ಟ್ರ ರಾಜಧಾನಿ ನವದೆಹಲಿಯವರೆಗೂ ತಲುಪಿರುವ ವಿಚಾರ ನಿಮ್ಗೆಲ್ಲರಿಗೂ ಗೊತ್ತೇ ಇದೆ ಅಲ್ವಾ. ಇಲ್ಲಿನ 5 ಸ್ಟಾರ್‌ ಹೋಟೆಲ್‌ಗಳಲ್ಲಿಯೂ ನಂದಿನಿ ಹಾಲನ್ನೇ ಉಪಯೋಗಿಸುತ್ತಿದ್ದು, ಈ ಹೆಮ್ಮೆಯ ವಿಚಾವನ್ನು ಕನ್ನಡಿಗರೊಬ್ಬರು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗುತಿದೆ.

ನೋಡಿ ದೆಹಲಿಯ 5 ಸ್ಟಾರ್‌ ಹೋಟೆಲ್‌ನಲ್ಲೂ ಕರ್ನಾಟಕದ ಬ್ರ್ಯಾಂಡ್‌ಗಳದ್ದೇ ಹವಾ; ಹೆಮ್ಮೆಯಿಂದ ಪೋಸ್ಟ್‌ ಶೇರ್‌ ಮಾಡಿದ ಕನ್ನಡಿಗ
ವೈರಲ್ ಪೋಸ್ಟ್
ಮಾಲಾಶ್ರೀ ಅಂಚನ್​
| Edited By: |

Updated on:Jan 17, 2025 | 1:28 PM

Share

ಕರ್ನಾಟಕದ ಹಾಗೂ ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್‌ ಕೆಎಂಎಫ್‌ನ ನಂದಿನಿ ಉತ್ಪನ್ನಗಳು ದೇಶವ್ಯಾಪಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ನಂದಿನಿ ಬ್ರ್ಯಾಂಡ್‌ ಉತ್ಪನ್ನಗಳು ರಾಷ್ಟ್ರ ರಾಜಧಾನಿ ನವದೆಹಲಿಯವರೆಗೂ ತಲುಪಿರುವ ವಿಚಾರ ನಿಮ್ಗೆಲ್ಲರಿಗೂ ಗೊತ್ತೇ ಇದೆ ಅಲ್ವಾ. ಇದೀಗ ಎಲ್ಲೆಡೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯವಿದೆ. ಇನ್ನೊಂದು ವಿಚಾರ ಏನ್‌ ಗೊತ್ತಾ, ದೆಹಲಿಯಲ್ಲಿರುವ 5 ಸ್ಟಾರ್‌ ಹೋಟೆಲ್‌ನಲ್ಲಿಯೂ ನಂದಿನಿ ಹಾಲನ್ನೇ ಉಪಯೋಗಿಸುತ್ತಿದ್ದು, ಈ ಹೆಮ್ಮೆಯ ವಿಚಾವನ್ನು ಕನ್ನಡಿಗರೊಬ್ಬರು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗುತಿದೆ.

ದೆಹಲಿಯಲ್ಲಿರುವ 5 ಸ್ಟಾರ್‌ ಹೋಟೆಲ್‌ ಒಂದರಲ್ಲಿ ನಂದಿನಿ ಹಾಲನ್ನೇ ಉಪಯೋಗಿಸುತ್ತಿದ್ದಾರಂತೆ. ಅಷ್ಟೇ ಅಲ್ಲದೆ ಇಲ್ಲಿ ನಮ್ಮ ರಾಜ್ಯದ ಇನ್ನೊಂದು ಹೆಮ್ಮೆಯ ಬ್ರ್ಯಾಂಡ್‌ ಆದ ಕೆಫೆ ಕಾಫಿ ಡೇಯ ಕಾಫಿ ವೆಂಡಿಂಗ್‌ ಮಷೀನ್‌ ಕೂಡಾ ಇದೆ ಎಂದು ಕನ್ನಡದ ವ್ಯಕ್ತಿಯೊಬ್ಬರು ಹೆಮ್ಮೆಯಿಂದ ಪೋಸ್ಟ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

Bagalkote_huguga ಹೆಸರಿನ ಎಕ್ಸ್‌ ಖಾತೆಯಲ್ಲಿ ದೆಹಲಿಯ 5 ಸ್ಟಾರ್‌ ಹೋಟೆಲ್‌ನ ಕಿಚನ್‌ ರೂಮ್‌ನಲ್ಲಿದ್ದ ನಂದಿನಿ ಗುಡ್‌ ಲೈಫ್‌ ಹಾಲಿನ ಪ್ಯಾಕೆಟ್‌ನ ಫೋಟೊ ಶೇರ್‌ ಮಾಡಿ, “ದೆಹಲಿಯ 5 ಸ್ಟಾರ್‌ ಹೋಟೆಲ್‌ನಲ್ಲಿ ನಂದಿನಿ ಹಾಲನ್ನು ಬಳಸುತ್ತಿರುವುದನ್ನು ನೋಡಿದೆ. ಪಕ್ಕದಲ್ಲಿ ಸಿಸಿಡಿ ಕಾಫಿ ಯಂತ್ರವನ್ನೂ ನೋಡಿದೆ. ಕನ್ನಡದ ಬ್ರ್ಯಾಂಡ್‌ಗಳು ಬಲಿಷ್ಠವಾಗುತ್ತಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂತಹ ಕಹಿ ಅನುಭವ ಹಿಂದೆಂದೂ ಆಗಿರಲಿಲ್ಲ; ಅಪರಿಚಿತ ವ್ಯಕ್ತಿಯ ನಡೆಗೆ ಬೆಚ್ಚಿ ಬಿದ್ದ ಯುವತಿ

ಜನವರಿ 15 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 26 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼದೆಹಲಿಯಲ್ಲಿ ನಾನು ಕೆಲಸ ಮಾಡುವಂತ ಆಫೀಸ್‌ನಲ್ಲೂ ಸಿಸಿಡಿ ಕಾಫಿ ಯಂತ್ರವಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕರ್ನಾಟಕದ ಉದ್ಯಮಗಳು, ಉದ್ಯಮಿಗಳು ಹೀಗೆ ಇನ್ನಷ್ಟು ಬೆಳಿಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಂದಿನಿ ಉತ್ಪನ್ನಗಳ ಗುಣಮಟ್ಟವೇ ಅಂತಹದ್ದು, ಅದಕ್ಕೆ ಯಾವುದೇ ಪ್ರಚಾರದ ಅಗತ್ಯವಿಲ್ಲʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:25 pm, Fri, 17 January 25