
ಬೆಂಗಳೂರು, ಅಕ್ಟೋಬರ್ 18: ಟ್ರಾಫಿಕ್ ಟ್ರಾಫಿಕ್ ಟ್ರಾಫಿಕ್ ಹೀಗೆನ್ನುತ್ತಿದ್ದಂತೆ ಕಣ್ಣ ಮುಂದೆ ಬರುವುದೇ ಬೆಂಗಳೂರು (Bengaluru). ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆ ಹೊಸದೇನಲ್ಲ ಬಿಡಿ. ನಗರದ ಒಂದಲ್ಲಾ ಒಂದು ಕಡೆ ಪ್ರತಿನಿತ್ಯ ಟ್ರಾಫಿಕ್ ಜಾಮ್ (Traffic Jam) ಆಗುತ್ತಲೇ ಇರುತ್ತದೆ. ಇನ್ನೂ ವಾಹನ ಸವಾರರು, ಕೆಲಸಕ್ಕೆ ಹೋಗೋರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಹೆಣಗಾಡುತ್ತಿರುತ್ತಾರೆ. ಈ ಟ್ರಾಫಿಕ್ ನಡುವೆ ಬೆಂಗಳೂರಿನ ವ್ಯಕ್ತಿಯೊಬ್ಬರು ಏಳು ಕಿಮೀ ಕ್ರಮಿಸಲು ಒಂದೂವರೆ ಗಂಟೆ ತೆಗೆದುಕೊಂಡಿದ್ದಾರೆ. ಹೌದು, ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನು ತಪಾಸಣೆಗೆ ಕರೆದುಕೊಂಡು ಹೋಗುವ ಟ್ರಾಫಿಕ್ ನಡುವೆ ಸಿಲುಕಿಕೊಂಡಿದ್ದಾರೆ. ತಮ್ಮ ಭಯಾನಕ ಅನುಭವವನ್ನು ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಬಳಕೆದಾರರು ತಮ್ಮ ತಮ್ಮ ಅನುಭವವನ್ನುಹಂಚಿಕೊಂಡಿದ್ದಾರೆ.
@nshl ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದು ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎಷ್ಟೆಲ್ಲಾ ಒತ್ತಡವನ್ನು ಉಂಟು ಮಾಡುತ್ತದೆ ಎಂದು ವಿವರಿಸಿದ್ದಾರೆ. 7.ಕಿಮೀಗೆ ಒಂದೂವರೆ ಗಂಟೆಗಳ ಪ್ರಯಾಣ, ಪಕ್ಕದಲ್ಲಿ 8 ತಿಂಗಳ ಗರ್ಭಿಣಿ ಪತ್ನಿ . ಬೆಂಗಳೂರು ಇನ್ನು ಮುಂದೆ ವಾಸಿಸಲು ಯೋಗ್ಯವೇ?” ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
1.5 hours, 7 km, and an 8 month pregnant wife. Is Bangalore liveable anymore?
byu/nshl inbangalore ಇದನ್ನೂ ಓದಿ
ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನು ಸಂಜೆ ವರ್ತೂರು ಬಳಿಯ HAL ರಸ್ತೆಯಲ್ಲಿ ನಿಯಮಿತ ತಪಾಸಣೆಗೆ ಹೇಗೆ ಕರೆದೊಯ್ಯುತ್ತಿದ್ದನೆಂದು ತಿಳಿಸಿದ್ದಾರೆ. ಈ ವೇಳೆ ಏಳು ಕಿಮೀ ಕ್ರಮಿಸಲು ಒಂದೂವರೆ ಗಂಟೆಗಳ ಕಾಲ ತೆಗೆದುಕೊಂಡೆ. ನಾನು ಯೋಚಿಸುತ್ತಲೇ ಇದ್ದೆ, ಇದು ನಿಜವಾದ ತುರ್ತು ಪರಿಸ್ಥಿತಿಯಾಗಿದ್ದರೆ? ಅವಳಿಗೆ ಈಗ ಹೆರಿಗೆ ನೋವು ಕಾಣಿಸಿಕೊಂಡರೆ ಏನು ಮಾಡೋದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಚಲಿಸಲು ಸಾಧ್ಯವಾಗದೆ ಕಾರಿನಲ್ಲಿ ಬಹಳ ಹೊತ್ತು ಸಿಲುಕಿಕೊಂಡಿದ್ದು ಅಸಹಾಯಕತೆಯೂ ಉಸಿರುಗಟ್ಟಿಸುತ್ತಿತ್ತು. ನೀವು ಕಾರಿನ ಒಳಗೆ ಸಿಲುಕಿಕೊಂಡು, ಗಡಿಯಾರದ ಟಿಕ್ ಟಿಕ್ ಟಿಕ್ ಅನ್ನು ನೋಡುತ್ತಾ ಕುಳಿತಿದ್ದೀರಿ. ಈ ರೀತಿಯಾದ್ರೆ ಈ ನಗರವು ನಾಶವಾಗಲಿದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ ಎಂದು ಕಹಿ ಸತ್ಯ ಹೇಳಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರರು ಇದು ತುರ್ತು ಪರಿಸ್ಥಿತಿಯಾಗಿದ್ದರೆ ನೀವು ತಾತ್ಕಾಲಿಕವಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಗೊಳ್ಳಬೇಕು ಎಂದಿದ್ದಾರೆ. ಮತ್ತೊಬ್ಬರು, ನನ್ನ ಅಮ್ಮ ಮತ್ತು ತಂಗಿ ಅಪಘಾತಕ್ಕೀಡಾಗಿದ್ದರು. ನಾನು ಅವರನ್ನು ಆಸ್ಪತ್ರೆಗೆ ಭೇಟಿ ಮಾಡಲು ಧಾವಿಸಬೇಕಾಯಿತು. ಬೆಳ್ಳಂದೂರು ಬಳಿಯ ಆ ಯು-ಟರ್ನ್‌ನಲ್ಲಿ ನಾನು ಸಿಲುಕಿಕೊಂಡೆ. ನನ್ನ ಜೀವನದ ಅತ್ಯಂತ ದೀರ್ಘವಾದ 45 ನಿಮಿಷಗಳಾಗಿತ್ತು ಎಂದು ಕಹಿ ಅನುಭವದ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ:ಚರ್ಚೆಗೆ ಕಾರಣವಾಯಿತು ರಾಜನ್ ಆನಂದನ್ ಟ್ವೀಟ್, ಬೆಂಗಳೂರು ಟ್ರಾಫಿಕ್ ನೈಜತೆ ಬಯಲು!
ಇನ್ನೊಬ್ಬ ಬಳಕೆದಾರ ನಿನ್ನೆ ನನಗೂ ಹೀಗೆಯೇ ಆಯಿತು. ನಾನು ಸಂಜೆ 6:00 ಗಂಟೆಗೆ ಕಚೇರಿಯಿಂದ ಕ್ಯಾಬ್‌ನಲ್ಲಿ ಹೊರಟೆ. ಸುಮಾರು 6:30 ರ ಸುಮಾರಿಗೆ, ನನ್ನ ಹೆಂಡತಿ ನನಗೆ ಕರೆ ಮಾಡಿ ತನಗೆ ಹುಷಾರಿಲ್ಲ ಎಂದು ಹೇಳಿದಳು. ಆದರೆ ನಾನು ಟ್ರಾಫಿಕ್ ನಲ್ಲಿ ಅಸಹಾಯಕನಾಗಿದ್ದು, ಏನೂ ಮಾಡಲು ಸಾಧ್ಯವಾಗದೆ ಕುಳಿತಿದಿದ್ದೆ. ಪ್ರತಿ ನಿಮಿಷವೂ ಒಂದು ವರ್ಷದಂತೆ ಭಾಸವಾಯಿತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:16 pm, Sat, 18 October 25