Video: ಸೈಕಲ್ ಏರಿದ ಮಹಿಳೆಗೆ ಕಚ್ಚಿದ ಮಿಡಿ ನಾಗರಹಾವು, ಮುಂದೇನಾಯ್ತು ನೋಡಿ
ವಿಷಕಾರಿ ಹಾವು ಕಚ್ಚಿ ಮೃತ ಪಟ್ಟ ಘಟನೆಗಳ ಬಗ್ಗೆ ನೀವು ಆಗಾಗ್ಗೆ ಕೇಳಿರುತ್ತೀರಿ. ಆದ್ರೆ ಕೆಲವರ ಅದೃಷ್ಟ ಚೆನ್ನಾಗಿದ್ದು ಅಪಾಯದಿಂದ ಪಾರಾದವರು ಇದ್ದಾರೆ. ಇಂತಹದ್ದೇ ಘಟನೆಯೊಂದು ನಡೆದಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ಸೈಕಲ್‌ನಲ್ಲಿ ಅವಿತು ಕುಳಿತಿದ್ದ ಮರಿ ನಾಗರಹಾವು ಮಹಿಳೆಯನ್ನು ಕಚ್ಚಿದೆ. ಮುಂದೇನಾಯ್ತು ಎಂದು ತಿಳಿದರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಕಂಪ್ಲೀಟ್ ಮಾಹಿತಿ ಇಲ್ಲಿದೆ

ಮುಂಬೈ, ಅಕ್ಟೋಬರ್ 18: ಇತ್ತೀಚೆಗೆ ನಾಗರಹಾವುಗಳು (Indian cobra) ಮನೆಯ ಮೂಲೆ, ಬೈಕ್, ಶೂಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಈ ಹಾವಿನ ರಕ್ಷಣೆ ಮಾಡಿರುವ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಇದೀಗ ರಸ್ತೆಯಲ್ಲಿ ನಿಲ್ಲಿಸಿದ್ದ ಸೈಕಲ್‌ನ ಚೈನ್ ನಲ್ಲಿ ಅವಿತು ಕುಳಿತಿದ್ದ ಮರಿ ನಾಗರಹಾವೊಂದು ಮಹಿಳೆಯನ್ನು ಕಚ್ಚಿದೆ. ಈ ಘಟನೆ ನಡೆದಿರುವುದು ಮುಂಬೈನ ಖಾರ್ಘರ್ ಪ್ರದೇಶದಲ್ಲಿ (Kharghar of Mumbai) ಎನ್ನಲಾಗಿದೆ. ಸೈಕಲ್ ನಲ್ಲಿ ಅವಿತುಕೊಂಡಿದ್ದ ಮಿಡಿ ನಾಗರಹಾವಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಸೈಕಲ್‌ನಲ್ಲಿ ಚೈನ್ ಸುತ್ತಲೂ ಮರಿ ಹಾವು ಸುತ್ತಿಕೊಂಡಿರುವುದನ್ನು ಕಾಣಬಹುದು. ಅಲ್ಲೇ ಇದ್ದವರು ತಮ್ಮ ಮೊಬೈಲ್ ಕ್ಯಾಮೆರಾ ದಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಇದನ್ನೂ ಓದಿ:Video: ಸರ್ರನೆ ಲಿಫ್ಟ್‌ಯೊಳಗೆ ನುಗ್ಗಿದ ನಾಗರಹಾವು; ಮುಂದೇನಾಯ್ತು ನೋಡಿ
ಸೈಕಲ್‌ನಲ್ಲಿ ಅಡಗಿದ್ದ ಮರಿ ನಾಗರಹಾವು ಮಹಿಳೆಯೊಬ್ಬರನ್ನು ಕಚ್ಚಿದ್ದು, ಈ ಬಗ್ಗೆ ತಿಳಿಯುತ್ತಿದ್ದಂತೆ ಮಹಿಳೆಯನ್ನು ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಅದೃಷ್ಟವಶಾತ್, ಆಕೆ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆಯಿಂದಾಗಿ ಚೇತರಿಸಿಕೊಳ್ಳುತ್ತಿದ್ದಾಳೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:53 am, Sat, 18 October 25








