Viral : ಆ್ಯಪ್​​ನಲ್ಲಿ ಆಟೋ ಬುಕ್​​ ಮಾಡಿದ್ರೆ ಟಿಪ್ಸ್​​​ ನೀಡಲೇಬೇಕು, ಬೆಂಗಳೂರಿನ ಮಹಿಳೆ ಹೇಳಿದ್ದೇನು?

ಈಗ ಎಲ್ಲಾ ಕೆಲಸಗಳು ಡಿಜಿಟಲ್‌ಮಯವಾಗಿದೆ. ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಜನರು ಆಟೋ, ಟ್ಯಾಕ್ಸಿ ಬುಕ್ ಮಾಡಲು ಆ್ಯಪ್‌ಗಳನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಈ ರೀತಿ ಆ್ಯಪ್‌ಗಳಲ್ಲಿ ಆಟೋ ಬುಕ್ ಮಾಡುವಾಗ ಟಿಪ್‌ಗಳನ್ನು ನೀಡುವುದು ಅನಿವಾರ್ಯವಾಗಿದೆ. ಇದೀಗ ರೈಡ್ ಹೇಲಿಂಗ್ ಆ್ಯಪ್‌ಗಳಲ್ಲಿ ಟಿಪ್ಪಿಂಗ್ ವೈಶಿಷ್ಟ್ಯವನ್ನು ಟೀಕಿಸಿದ ಬೆಂಗಳೂರು ಮೂಲದ ಮಹಿಳೆಯೊಬ್ಬರ ಪೋಸ್ಟ್‌ವೊಂದು ವೈರಲ್ ಆಗಿದೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿಯಾಗಿದ್ದು ಬಳಕೆದಾರರು ಖಾರವಾಗಿಯೇ ಕಾಮೆಂಟ್‌ಗಳನ್ನು ಮಾಡಿದ್ದಾರೆ.

Viral : ಆ್ಯಪ್​​ನಲ್ಲಿ ಆಟೋ ಬುಕ್​​ ಮಾಡಿದ್ರೆ ಟಿಪ್ಸ್​​​ ನೀಡಲೇಬೇಕು, ಬೆಂಗಳೂರಿನ ಮಹಿಳೆ ಹೇಳಿದ್ದೇನು?
ಸಾಂದರ್ಭಿಕ ಚಿತ್ರ
Image Credit source: hadynyah/E+/Getty Images

Updated on: Jun 19, 2025 | 11:46 AM

ಬೆಂಗಳೂರಿನಂತಹ (bengaluru) ದೊಡ್ಡ ದೊಡ್ಡ ನಗರಗಳಲ್ಲಿ ಓಡಾಟಕ್ಕಾಗಿ ಆಟೋ, ಟ್ಯಾಕ್ಸಿಯಂತಹ ಖಾಸಗಿ ವಾಹನಗಳನ್ನು ಅವಲಂಬಿಸುವವರ ಸಂಖ್ಯೆಯೇ ಹೆಚ್ಚು. ಅನೇಕ ಪ್ರಯಾಣಿಕರು ಬುಕ್ಕಿಂಗ್‌ಗಾಗಿ ರೈಡ್ ಹೇಲಿಂಗ್ ಆಪ್ (ride hailing app) ಸೇರಿದಂತೆ ಮೊಬೈಲ್ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ. ಆ್ಯಪ್ ಮೂಲಕ ಆಟೋರಿಕ್ಷಾಗಳನ್ನು ಬುಕ್ ಮಾಡುವ ಪ್ರಯಾಣಿಕರಿಂದ ಆಟೋ ಚಾಲಕರು (auto driver) ಟಿಪ್ ಸೇರಿಸಿ ಹೆಚ್ಚುವರಿ ಹಣವನ್ನು ಚಾರ್ಜ್ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ. ಬೆಂಗಳೂರಿನ ಮಹಿಳೆಯೊಬ್ಬರು ಚಾಲಕರಿಗೆ ಟಿಪ್ ನೀಡುವ ಬಗ್ಗೆ ಟೀಕಿಸಿದ್ದು, ರೈಡ್ ಹೇಲಿಂಗ್ ಅಪ್ಲಿಕೇಶನ್‌ಗಳಲ್ಲಿನ ಟಿಪ್ಪಿಂಗ್ ವೈಶಿಷ್ಟ್ಯವು ಲಂಚದಂತೆ ತೋರುತ್ತಿದೆ ಎಂದು ಖಾರವಾಗಿಯೇ ಹೇಳಿದ್ದಾರೆ.

@dwijaxo ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದು ಶೇರ್ ಮಾಡಿರುವ ಬೆಂಗಳೂರಿನ ಮಹಿಳೆಯೊಬ್ಬರು, ಬೆಂಗಳೂರು ಆಟೋ ಬುಕಿಂಗ್ ಅಪ್ಲಿಕೇಶನ್‌ಗಳ ಬಗ್ಗೆ ಹೇಳಲು ನನಗೆ ಬಹಳ ವಿಷಾದವಾಗಿದೆ. ಆದರೆ ಈ ಟಿಪ್ಪಿಂಗ್ ವೈಶಿಷ್ಟ್ಯವು ನಿಮ್ಮ ಅಪ್ಲಿಕೇಶನ್‌ಗಳಲ್ಲಿ ಕೆಟ್ಟ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇದು ನಿಮ್ಮ ವಿನಂತಿಯನ್ನು ಸ್ವೀಕರಿಸಲು ಚಾಲಕರಿಗೆ ಲಂಚ ನೀಡಿದ್ದಂತೆ. ಟಿಪ್ಪಿಂಗ್ ಉತ್ತಮ ಅನುಭವವನ್ನು ನೀಡಬೇಕೋ ಹೊರತು, ಲಂಚ ಪಡೆಯಲು ಬಳಸಬಾರದು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ :World Longest Highway : ಇದು ವಿಶ್ವದ ಅತಿ ಉದ್ದದ ರಸ್ತೆಯಂತೆ, ಇದು ಎಲ್ಲಿರುವುದು ಗೊತ್ತಾ?

ಇದನ್ನೂ ಓದಿ
14 ದೇಶಗಳನ್ನು ಹಾದು ಹೋಗುವ ವಿಶ್ವದ ಉದ್ದದ ರಸ್ತೆಯಿದು
ಇಂತಹ ಮಗಳನ್ನು ಪಡೆದ ಆ ತಂದೆಯೇ ಪುಣ್ಯವಂತ
ಚಿಲ್ಲರೆ ಕಾಸಿನಲ್ಲಿ ಪತ್ನಿಗೆ ಮಂಗಳಸೂತ್ರ ಖರೀದಿಸಲು ಬಂದ ವೃದ್ಧ
ಅಪರಿಚಿತ ವ್ಯಕ್ತಿಗೆ ಊಟ ಹಾಕಿ ಸತ್ಕರಿಸಿದ ಬೆಂಗಳೂರಿನ ಕುಟುಂಬ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಈ ಪೋಸ್ಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಬಳಕೆದಾರರು ಈ ಮಹಿಳೆಯ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ. ಆಟೋ ಚಾಲಕರು ಟಿಪ್ ಇಲ್ಲದೇ ಆಟೋ ಬುಕಿಂಗ್ ಸ್ವೀಕರಿಸುವುದಿಲ್ಲ ಇದು ಕಟು ವಾಸ್ತವ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪ್ರಯಾಣಿಕರು ಆಟೋ ಬುಕ್ ಮಾಡುವಾಗ 10-20 ಪ್ರತಿಶತದಷ್ಟು ಟಿಪ್ ನೀಡಲೇಬೇಕು ಎಂದಿದ್ದಾರೆ. ಇನ್ನೊಬ್ಬರು, ದಿನಕಳೆದಂತೆ ಆಟೋ ಬುಕಿಂಗ್ ಮಾಡುವಾಗ ಟಿಪ್ ನೀಡುವುದು ಲಂಚದಂತೆ ಆಗುತ್ತಿದೆ. ನಮ್ಮ ಅಗತ್ಯಕ್ಕಾಗಿ ಈ ರೀತಿ ಹೆಚ್ಚುವರಿ ಹಣ ಕೊಡುವುದು ಅನಿರ್ವಾಯವಾಗಿದೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:54 am, Thu, 19 June 25