Viral: ಬಿಬಿಎಂಪಿ ನಿರ್ಲಕ್ಷ್ಯ; ವಯಸ್ಸು 80 ದಾಟಿದ್ರೂ ಉತ್ಸಾಹದಿಂದ ಸ್ವಚ್ಛತಾ ಸೇವೆಯನ್ನು ಮಾಡುವ ಮೂಲಕ ಇತರರಿಗೂ ಮಾದರಿಯಾದ ವ್ಯಕ್ತಿಯಿವರು

| Updated By: ಅಕ್ಷತಾ ವರ್ಕಾಡಿ

Updated on: Dec 29, 2024 | 3:02 PM

ನೆರಯವರ ಉಸಾಬರಿ ನಮಗ್ಯಾಕೆ ನಮ್ಮ ಮನೆ ವಿಷಯ ನೋಡ್ಕೊಂಡ್ರೆ ಅಷ್ಟೇ ಸಾಕು ಅನ್ನೋ ಜನರ ಮಧ್ಯದಲ್ಲಿ ಇಲ್ಲೊಬ್ರು ವ್ಯಕ್ತಿ ನನ್ನ ಮನೆ ಮಾತ್ರವಲ್ಲ ಇಡೀ ಬೀದಿಯನ್ನು ಸ್ವಚ್ಛವಾಗಿರಿಸಬೇಕೆಂದು ತಮ್ಮ ಇಳಿ ವಯಸ್ಸಲ್ಲೂ ಪ್ರತಿನಿತ್ಯ ಬೀದಿ ಹಾಗೂ ಚರಂಡಿಯನ್ನು ಸ್ವಚ್ಛಗೊಳಿಸುವಂತಹ ಕೆಲಸವನ್ನು ಮಾಡ್ತಿದ್ದಾರೆ. ಈ ಕುರಿತ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದ್ದು, ಇವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Viral: ಬಿಬಿಎಂಪಿ ನಿರ್ಲಕ್ಷ್ಯ; ವಯಸ್ಸು 80 ದಾಟಿದ್ರೂ ಉತ್ಸಾಹದಿಂದ ಸ್ವಚ್ಛತಾ ಸೇವೆಯನ್ನು ಮಾಡುವ ಮೂಲಕ ಇತರರಿಗೂ ಮಾದರಿಯಾದ ವ್ಯಕ್ತಿಯಿವರು
83 Year Old Man Cleans Street
Follow us on

ಈಗಂತೂ ನಮ್ಮ ಮನೆ ವಿಷ್ಯ ನೋಡ್ಕೊಂಡ್ರೆ ಸಾಕು ಊರ ಉಸಾಬರಿ ನಮಗ್ಯಾಕೆ ಅನ್ನುವವರೆ ಹೆಚ್ಚು. ಅಂತಹ ಜನಗಳ ಮಧ್ಯೆ ಇಲ್ಲೊಬ್ರು ವ್ಯಕ್ತಿ ವಯಸ್ಸಾಯ್ತು ನಾನ್ಯಾಕೆ ಇನ್ನೊಬ್ರ ಬಗ್ಗೆ ಕಾಳಜಿ ವಹಿಸಬೇಕು ಎಂಬುದನ್ನೂ ಯೋಚಿಸದೆ ತಮ್ಮ ಮನೆ ಸುತ್ತಲಿನ ಏರಿಯಾವನ್ನು ಪ್ರತಿನಿತ್ಯ ಸ್ವಚ್ಛಗೊಳಿಸುವಂತ ಕೆಲಸವನ್ನು ಮಾಡ್ತಿದ್ದಾರೆ. ಹೌದು ಆ ವ್ಯಕ್ತಿ ತಮ್ಮ 83 ರ ಹರೆಯದಲ್ಲೂ ಬಹಳ ಉತ್ಸಾಹದಿಂದ ಪ್ರತಿನಿತ್ಯ ಬೀದಿ ಹಾಗೂ ಚರಂಡಿಯನ್ನು ಸ್ವಚ್ಛಗೊಳಿಸುವಂತಹ ಕೆಲಸವನ್ನು ಮಾಡ್ತಿದ್ದಾರೆ. ಈ ಕುರಿತ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದ್ದು, ಇವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಎಚ್‌.ಎಸ್‌.ಆರ್‌ ಲೇಔಟ್‌ನಲ್ಲಿ ವಾಸವಿರುವ 83 ರ ಹರೆಯದ ಸೂರ್ಯ ನಾರಾಯಣ್‌ ಎಂಬವರು ಪ್ರತಿದಿನ ಸುಮಾರು 1 ರಿಂದ 2 ಎರಡು ಗಂಟೆಗಳ ಕಾಲ ತಮ್ಮ ಮನೆಯ ಸುತ್ತಮುತ್ತಲಿನ ಬೀದಿಯನ್ನು ಸ್ವಚ್ಛಗೊಳಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಬಿಬಿಎಂಪಿ ಇಲ್ಲಿನ ಪರಿಸರದ ಸ್ವಚ್ಛತೆಯ ಬಗ್ಗೆ ಯಾವುದೇ ಕ್ರಮವನ್ನು ಕೈಗೊಳ್ಳದಿರುವ ಕಾರಣ ವರ್ಷಗಳಿಂದ ಸ್ವತಃ ಸೂರ್ಯ ನಾರಾಯಣ್‌ ಅವರೇ ತಮ್ಮ ಮನೆಯ ಸುತ್ತಲಿನ ಬೀದಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಹೌದು ಇವರು ಪ್ರತಿದಿನ ಬೀದಿಯಲ್ಲಿರುವ ಕಸ ಕಡ್ಡಿಗಳನ್ನು ಗುಡಿಸುವುದರಿಂದ ಹಿಡಿದು, ಚರಂಡಿಗಳಲ್ಲಿ ಬಿದ್ದಂತಹ ಕಸಗಳನ್ನು ಸಹ ಗುಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ.

Bengalurupost1 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸೂರ್ಯ ನಾರಾಯಣ್‌ ಅವರು ತಮ್ಮ ಮನೆ ಸುತ್ತಲಿನ ಬೀದಿಯನ್ನು ಸ್ವಚ್ಛಗೊಳಿಸುತ್ತಿರುವಂತ ಹೃದಯಸ್ಪರ್ಶಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ನೀವು ಬ್ಯಾಗ್‌ ಧರಿಸುವ ರೀತಿಯಿಂದ ನಿಮ್ಮ ವ್ಯಕ್ತಿತ್ವ ಹೇಗೆ ಎಂಬುದನ್ನು ತಿಳಿದುಕೊಳ್ಳಿ

ಡಿಸೆಂಬರ್‌ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 94 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಮಹಾನ್‌ ವ್ಯಕ್ತಿಗೆ ನನ್ನ ನಮನಗಳುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ಇವರ ಕಾರ್ಯ ಸ್ಪೂರ್ತಿದಾಯಕವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಿಬಿಎಂಪಿ ಅಧಿಕಾರಿಗಳು ಆದಷ್ಟು ಬೇಗ ಎಚ್ಚೆತ್ತುಕೊಳ್ಳಿʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:02 pm, Sun, 29 December 24