Viral: ಫಿಲ್ಟರ್ ಕಾಫಿಯಿಂದ ಮದುವೆ ಪ್ರಸ್ತಾಪದವರೆಗೆ; ಇದು ಬೆಂಗಳೂರಿನ ಜಿಟಿಜಿಟಿ ಮಳೆಯಲ್ಲಿ ಚಿಗುರಿದ ಪ್ರೀತಿ

ಪ್ರೀತಿ ಯಾವಾಗ ಹೇಗೆ ಚಿಗುರೊಡೆಯುತ್ತೆ ಎಂದು ಹೇಳಲಾಗದು. ಬೆಂಗಳೂರಿನ ಯುವಕನೊಬ್ಬನದ್ದು ಪ್ರೇಮ ಶುರುವಾದದ್ದು ತುಂತುರು ಮಳೆಯಲ್ಲಿಯಂತೆ. ಹೌದು, ಮಲ್ಲೇಶ್ವರಂನ ಮಾರುಕಟ್ಟೆಯಲ್ಲಿ ಯುವಕನೊಬ್ಬ ತನ್ನ ಗೆಳತಿಯ ಜೊತೆಗೆ ನಡೆದುಕೊಂಡು ಪ್ರೇಮ ಚಿಗುರಿದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾನೆ. ಈ ಕುರಿತಾದ ಕುತೂಹಲಕಾರಿ ಸ್ಟೋರಿ ಇಲ್ಲಿದೆ.

Viral: ಫಿಲ್ಟರ್ ಕಾಫಿಯಿಂದ ಮದುವೆ ಪ್ರಸ್ತಾಪದವರೆಗೆ; ಇದು ಬೆಂಗಳೂರಿನ ಜಿಟಿಜಿಟಿ ಮಳೆಯಲ್ಲಿ ಚಿಗುರಿದ ಪ್ರೀತಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Oct 22, 2025 | 6:32 PM

ಪ್ರೀತಿಗೆ (Love) ಕಣ್ಣಿಲ್ಲ, ಯಾವಾಗ, ಯಾರ ಮೇಲಾದ್ರೂ ಲವ್ ಆಗ್ಬಹುದು. ತುಂತುರು ಮಳೆಯ ನಡುವೆ ಪ್ರೀತಿ ಚಿಗುರುವ ದೃಶ್ಯಗಳನ್ನು ಸಿನಿಮಾದಲ್ಲಿ ಹೆಚ್ಚಾಗಿ ನೋಡಿ ಇರ್ತೀರಾ. ಯುವ ಜೋಡಿಯ ಮಧ್ಯೆ ನಡೆದ ಹಾಸ್ಯಭರಿತ ಮಾತುಕತೆ ಹಾಗೂ ಪ್ರೇಮಕಥೆಗೆ ಈ ಬೆಂಗಳೂರಿನ ಮಲ್ಲೇಶ್ವರಂನ (Malleshwaram of Bengaluru) ಮಾರುಕಟ್ಟೆ ಸಾಕ್ಷಿಯಾಗಿದೆ. ಆ ಸಂಜೆಯ ವಾತಾವರಣ ಹಾಗೂ ಜಿಟಿಜಿಟಿ ಮಳೆಯ ನಡುವೆ ಚಿಗುರಿದ ಪ್ರೇಮಕಥೆಯನ್ನು ಯುವಕನು ರೆಡ್ಡಿಟ್ ಖಾತೆಯಲ್ಲಿ ರಿವೀಲ್ ಮಾಡಿದ್ದಾನೆ. ಈ ಕುರಿತಾದ ವಿಶೇಷ ಲವ್ ಸ್ಟೋರಿ ಇಲ್ಲಿದೆ ನೋಡಿ.

ಜಿಟಿಜಿಟಿ ಮಳೆಯಲ್ಲಿ ಶುರುವಾದ ಲವ್ ಸ್ಟೋರಿ

ರೆಡ್ಡಿಟ್ ಖಾತೆಯಲ್ಲಿ ವಿಶೇಷ ದಿನದ ಬಗ್ಗೆ ಹಂಚಿಕೊಳ್ಳುತ್ತಾ, ಮಲ್ಲೇಶ್ವರಂನ ಹಿತವಾದ ಜಿಟಿ ಜಿಟಿ ಮಳೆಯಲ್ಲಿ, ನಾನು ಹಾಗೂ ಗೆಳತಿ ಒಂದೇ ಛತ್ರಿಯಡಿ ನಡೆಯುತ್ತಿದ್ದೆವು. ಈ ಮುದ್ದಾದ ಜೋಡಿಯ ಅಕ್ಕಪಕ್ಕದ ಬದಿಯಲ್ಲಿ ಹೂವು ಮಾರುವವರು  ಹಾಗೂ ಪುಸ್ತಕ ಮಾರಾಟ ಮಾಡುವವರು ಇದ್ದರು. ಒದ್ದೆ ಮಣ್ಣಿನ ಪರಿಮಳ ಹೊತ್ತ ಆ ಸಂಜೆಯನ್ನು ಮತ್ತಷ್ಟು ಸುಂದರ ರಸಮಯವಾಗಿಸಿತ್ತು. ರಸ್ತೆ ಬದಿಯ ಹೂವಿನ ವ್ಯಾಪಾರಿಗಳ ಕೂಗು ಹಾಗೂ ಮಾರುಕಟ್ಟೆಯ ನಿಧಾನಗತಿಯಿಂದ ಸಾಗುತ್ತಿದ್ದ ಸಂಜೆಯೂ ಹೊಸ ಅನುಭವ ಸೃಷ್ಟಿಸಿತ್ತು. ಬಟ್ಟೆ ವ್ಯಾಪಾರಿಗಳ ಜೋರಾದ ಧ್ವನಿ ಆ ದಿನಕ್ಕೆ ಮತ್ತಷ್ಟು ಮೆರುಗು ನೀಡಿತ್ತು. ಡೇಟಿಂಗ್ ಮಾಡಲು ಪ್ರಾರಂಭಿಸಿ ಕೆಲವೇ ಕೆಲವು ವಾರಗಳಾಗಿದ್ದರೂ, ಆ ದಿನ ಮಾತ್ರ ವಿಶೇಷವಾಗಿತ್ತು ಎಂದು ಹೇಳಿದ್ದಾನೆ.

ವಿಶೇಷ ಪ್ರಸ್ತಾಪ ಮಾಡಿದ ಯುವಕ

ಒಂದೇ ಕೊಡೆಯಡಿ ಇಬ್ಬರು ನಡೆದು ಹೋಗುವಾಗ ಸಂಜೆ, ಮಳೆಗೆ ಬಿಸಿ ಬಿಸಿ ಕಾಫಿ ಕುಡಿಯಬೇಕು ಎಂದೆನಿಸಿತು. ಆಗ ಅಲ್ಲೇ ಸಮೀಪದಲ್ಲಿದ್ದ ಪುಟ್ಟ ಕೆಫೆಯೊಂದನ್ನು ನೋಡಿ ಯುವಕ, ತನ್ನ ಗೆಳತಿಗೆ ʻನಾನು ನಿನ್ನಲ್ಲಿ ಒಂದು ಮುಖ್ಯವಾದ ವಿಷಯವನ್ನು ಕೇಳಬೇಕು ಎಂದೆನು. ನನ್ನ ಮಾತು ಕೇಳುತ್ತಿದ್ದಂತೆ ಗೆಳತಿ ಮಾತ್ರ ತನ್ನ ಎರಡು ಕಣ್ಣನ್ನು ಅರಳಿಸಿದಳು. ಆಕೆ ಇದು ಮದುವೆಯ ಪ್ರಸ್ತಾಪವೇ ಇರಬೇಕು ಎಂದು ಕಸಿವಿಸಿಗೊಂಡಳು. ಕೊನೆಗೆ ನಾನು ಏನು ಹೇಳಬೇಕೆಂದು ತಿಳಿಯದೆ ಕೊಂಚ ಸುಧಾರಿಸಿಕೊಂಡು ತನ್ನ ಪ್ರಸ್ತಾಪವನ್ನು ಗೆಳತಿಯ ಮುಂದೆ ಇಟ್ಟೆನು ಎಂದು ವಿವರಿಸಿದ್ದಾನೆ.

ಇದನ್ನೂ ಓದಿ
ನನಗೆ ದೆಹಲಿಗಿಂತ ಬೆಂಗಳೂರು ಇಷ್ಟ, ಈ ಕಾರಣಕ್ಕೆ
ಬೆಂಗಳೂರಲ್ಲಿ ಜಾಗಿಂಗ್ ಮಾಡ್ತಿದ್ದ ವೇಳೆ ವಿದೇಶಿಗನನ್ನು ಕಚ್ಚಿದ ಬೀದಿ ನಾಯಿ
ಬೆಂಗಳೂರಿನ ಜೆಪ್ಟೋ ಡೆಲಿವರಿ ಬಾಯ್ ವಾರದ ಸಂಪಾದನೆ 21 ಸಾವಿರ ರೂ ಅಂತೆ
ಪತ್ನಿಯನ್ನು ಟೆಸ್ಟ್‌ಗೆ ಕರ್ಕೊಂಡು ಹೋಗಿ ಟ್ರಾಫಿಕ್‌ನಲ್ಲಿ ಸಿಲುಕಿದ ವ್ಯಕ್ತಿ

ಇದು ಮದುವೆ ಪ್ರಸ್ತಾಪ ಅಲ್ಲ. ಒಂದು ಸ್ಟ್ರಾಂಗ್ ಫಿಲ್ಟರ್ ಕಾಫಿಯನ್ನು ಕುಡಿಯೋಣ. ಮಳೆಗೆ ತುಂಬಾ ಚೆನ್ನಾಗಿರುತ್ತದೆ ಎಂದು ನಾನು ಹೇಳಿದೆ. ಆಗ ನಮ್ಮಿಬ್ಬರಿಗೂ ನಗು ತಡೆಯಲಾಗಲಿಲ್ಲ. ಆ ಮುಜುಗರದ ಕ್ಷಣವು ನಗುವಿನ ಅಲೆಗಳಲ್ಲೇ ಬೆರೆತು ಬಿಸಿ ಬಿಸಿ ಕಾಫಿಯೊಂದಿಗೆ ಸಂಜೆ ಮತ್ತಷ್ಟು ಸ್ಮರಣೀಯವನ್ನಾಗಿಸಿತು. ಕಾಫಿ ಶಾಪ್‌ಗೆ ತೆರಳಿ ಒಂದು ಕಾಫಿ ಆರ್ಡರ್‌ ಮಾಡಿದೆವು. ಆ ನಂತರ ಕಾಫಿ ಒಂದು ಸಿಪ್‌ ಹೀರುತ್ತಾ ನಗುತ್ತಲೇ ಇದ್ದೆವು. ನಾವು ಕೊನೆಯ ಸಿಪ್‌ವರೆಗೂ ತಮಾಷೆ ಮಾಡುತ್ತ ಕೊನೆ ಸಿಪ್‌ ಮುಗಿಯುವರೆಗೂ ಮಾತನಾಡಿದ್ವಿ. ಈ ಸಾಮಾನ್ಯ ಕಾಫಿ ಡೇಟ್ ಮುಂದೊಂದು ದಿನ ಇದಕ್ಕಿಂತ ಹೆಚ್ಚಿನದಾಗಬಹುದು . ಆದರೆ ಸದ್ಯಕ್ಕೆ, ಆ ಮಳೆ, ನಗು, ಫಿಲ್ಟರ್ ಕಾಫಿಯ ಶ್ರೀಮಂತ ಪರಿಮಳ ಹಾಗೂ ಆಕೆಯ ಪ್ರಕಾಶಮಾನವಾದ ನಗು ಸಂಜೆಯನ್ನು ಮತ್ತಷ್ಟು ಸುಂದರವಾಗಿಸಿತು ಎಂದು ಪ್ರೇಮಕಥೆಯನ್ನು ತೆರೆದಿಟ್ಟಿದ್ದಾನೆ.

ಇದನ್ನೂ ಓದಿ:ನನಗೆ ದೆಹಲಿಗಿಂತ ಬೆಂಗಳೂರು ಇಷ್ಟ, ಈ ಕಾರಣಕ್ಕೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಈ ಸ್ಟೋರಿ ಓದಿದಾಗ ಸಿನಿಮಾದ ದೃಶ್ಯವೇ ಕಣ್ಣ ಮುಂದೆ ಬಂದಿತು ಎಂದಿದ್ದಾರೆ. ಮತ್ತೊಬ್ಬರು, ಈ ಸಂಜೆಯ ವಿಶೇಷ ದಿನದಲ್ಲಿ ಒಂದೊಳ್ಳೆ ಸಿನಿಮಾ ತೆಗೆಯಬಹುದು ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, ನಿಮಗೇನು ಕಾಫಿ ಕುಡಿಯೋಕೆ ಗೆಳತಿಯಾದ್ರು ಇದ್ದಾರೆ, ನಾವು ಸಿಂಗಲ್ಸ್ ಎಂದು ಬೇಸರ ಹೊರಹಾಕಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ