ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮದುವೆ ಸಮಾರಂಭವನ್ನು ಸ್ಪೆಷಲ್ ಆಗಿ ಆಚರಿಸಲು ಏನೇನೋ ಟ್ರೆಂಡ್ ಫಾಲೋ ಮಾಡುತ್ತಿರುತ್ತಾರೆ. ಅದರಲ್ಲಿ ದಿಬ್ಬಣದಲ್ಲಿ ವಿಭಿನ್ನವಾಗಿ ಎಂಟ್ರಿ ಕೊಡುವುದು ಕೂಡಾ ಒಂದು. ಹಿಂದೆಲ್ಲಾ ಕುದುರೆಯೇರಿ ವರ ಮದುವೆ ಮಂಟಪಕ್ಕೆ ಬರುವತಹ ಸಂಪ್ರದಾಯವಿತ್ತು. ಆದ್ರೆ ಇಂದಿನ ದಿನಗಳಲ್ಲಿ ವಧು ವರರು ಎತ್ತಿನ ಗಾಡಿ, ಜೆಸಿಬಿ ಏರಿ ದಿಬ್ಬಣ ಬರುವಂತಹ ಟ್ರೆಂಡ್ ಸೃಷ್ಟಿಯಾಗಿವೆ. ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದೀಗ ಅದೇ ರೀತಿಯ ಪೋಸ್ಟ್ ಒಂದು ವೈರಲ್ ಆಗಿದ್ದು, ರಾಜಕುಮಾರನಂತೆ ಮದುವೆ ಮಂಟಪಕ್ಕೆ ಎಂಟ್ರಿ ಕೊಡಲು ನನ್ ಬಳಿ ಬಿಳಿ ಕುದುರೆ ಇಲ್ವೇ ಎಂದು ಮದುಮಗ ಕುದುರೆಯ ಬದಲಿಗೆ ಬಿಳಿ ಬಣ್ಣದ ಎಲೆಕ್ಟ್ರಿಕ್ ಸ್ಕೂಟರ್ ಏರಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ನಮ್ಮ ಬೆಂಗಳೂರಿನ ನಿವಾಸಿಯಾಗಿರುವಂತಹ ದರ್ಶನ್ ಪಟೇಲ್ ಎಂಬವರು ತಮ್ಮ ಮದುವೆಯ ದಿನ ಎಲೆಕ್ಟ್ರಿಕ್ ಸ್ಕೂಟರ್ ಏರಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಎಲೆಕ್ಟ್ರಿಕ್ ಸ್ಕೂಟರ್ ಇತ್ತೀಚಿಗೆ ಪರಿಚಯಿಸಲಾದ ಅಥೆರ್ ರಿಜ್ಟಾ ಎಂಬ ಹೆಸರಿನ ಸ್ಕೂಟರ್ ಆಗಿದೆ. ವರದಿಗಳ ಪ್ರಕಾರ ಅಥೆರ್ ಎನರ್ಜಿ ಕಂಪೆನಿಯಲ್ಲಿ ಇಂಡಸ್ಟ್ರಿಯಲ್ ಡಿಸೈನರ್ ಆಗಿರುವ ದರ್ಶನ್ ಪಟೇಲ್ ತಮ್ಮ ಮದುವೆಯ ದಿನ ತಮ್ಮದೇ ಕಂಪೆನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಏರಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ.
So this happened last weekend!
Darshan wanted to make his baraat entry on Rizta and we had to make it happen for his grand entrance.
And, why not? Rizta is all about family. pic.twitter.com/zudTju0chF
— Tarun Mehta (@tarunsmehta) May 14, 2024
ಈ ಕುರಿತ ವಿಡಿಯೋವನ್ನು ಅಥೆರ್ ಎನರ್ಜಿಯ ಸಹ ಸಂಸ್ಥಾಪಕ ಮತ್ತು ಸಿಇಒ ತರುಣ್ ಮೆಹ್ತಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ವರ ದರ್ಶನ್ ಪಟೇಲ್ ಅವರು ಬಿಳಿ ಬಣ್ಣದ ಕುದುರೆಯ ಬದಲಿಗೆ ತಮ್ಮದೇ ಕಂಪೆನಿಯ ಬಿಳಿ ಬಣ್ಣದ ಎಲೆಕ್ಟ್ರಿಕ್ ಸ್ಕೂಟರ್ ಏರಿ ದಿಬ್ಬಣ ಬಂದಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಬಸ್ಸಿನಲ್ಲೇ ಪ್ರೇಮಿಗಳ ರೊಮ್ಯಾನ್ಸ್; ಲವ್ ಬರ್ಡ್ಸ್ ಹುಚ್ಚಾಟಕ್ಕೆ ಛಿ ಛೀ ಎಂದ ನೆಟ್ಟಿಗರು
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 29 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ವರನ ದಿಬ್ಬಣವಂತೂ ತುಂಬಾನೇ ಸ್ಪೆಷಲ್ ಆಗಿದೆ ಎನ್ನುತ್ತಾ ಜನರು ವರನ ಎಂಟ್ರಿಗೆ ಫುಲ್ ಫಿದಾ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:39 am, Wed, 15 May 24