Bengaluru life Vs Village life: ಹಳ್ಳಿ ಜೀವನ ಸ್ವರ್ಗ; ಇದು ಹಳ್ಳಿಯ ಮುಗ್ಧ ಜನರ ಮನಸ್ಸಿನ ಮಾತು

ಓದು ಮುಗಿಯುತ್ತಿದ್ದಂತೆ ಕೆಲಸಕ್ಕೆಂದು ಬೆಂಗಳೂರಿನತ್ತ ಯುವಕ ಯುವತಿಯರು ಮುಖ ಮಾಡ್ತಾರೆ. ಸಿಟಿ ಲೈಫ್‌ನ್ನು ಎಂಜಾಯ್ ಮಾಡುವ ಇಂದಿನ ಯುವಪೀಳಿಗೆ ಹಳ್ಳಿ ಜನರ ಈ ಮಾತು ಕೇಳಿದ್ರೆ ಶಾಕ್ ಆಗ್ತೀರಾ. ಹೌದು, ಬೆಂಗಳೂರು ಜೀವನಕ್ಕಿಂತ ಹಳ್ಳಿ ಜೀವನವೇ ಸ್ವರ್ಗ ಎಂದು ಇಲ್ಲಿ ಖುಷಿಯಿಂದ ಬದುಕುತ್ತಿರುವ ಹಳ್ಳಿ ಜನರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿದೆ.

Bengaluru life Vs Village life: ಹಳ್ಳಿ ಜೀವನ ಸ್ವರ್ಗ; ಇದು ಹಳ್ಳಿಯ ಮುಗ್ಧ ಜನರ ಮನಸ್ಸಿನ ಮಾತು
ವೈರಲ್ ವಿಡಿಯೋ
Image Credit source: Instagram

Updated on: Dec 03, 2025 | 11:36 AM

ಹಳ್ಳಿ (Village) ಎಂದರೆ ಸ್ವರ್ಗ. ಮೈ ದಂಡಿಸಿ ದುಡಿಯುವ ಹಳ್ಳಿ ಜನರು. ಹೊಟ್ಟೆ ತುಂಬಾ ಊಟ, ಕಣ್ಣು ತುಂಬಾ ನಿದ್ದೆ. ಇದರಲ್ಲೇ ನೆಮ್ಮದಿ ಕಾಣುವ ಹಳ್ಳಿ ಜನರನ್ನು ಕಂಡಾಗ ಖುಷಿಯಾಗುತ್ತದೆ. ಆದರೆ ಇಂದಿನ ಯುವ ಜನರಿಗೆ ಸಿಟಿ ಅಂದ್ರೆ ಅದೇನೋ ಸೆಳೆತ. ಆದರೆ ಹಳ್ಳಿಯ ಮುಗ್ಧ ಜನರು ಬೆಂಗಳೂರಿಗಿಂತ ನಾವು ಇಲ್ಲೇ ಸಖತ್ ಎಂಜಾಯ್ ಮಾಡ್ತೇವೆ ಎನ್ನುವ ಮಾತು ನಿಮ್ಮ ಕಣ್ಣನ್ನು ತೆರೆಸುತ್ತದೆ. ಹಳ್ಳಿಯ ಜನರು ಈ ಬದುಕನ್ನು ಎಷ್ಟು ಎಂಜಾಯ್ ಮಾಡ್ತಾರೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಈ ಅಪರೂಪದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹಳ್ಳಿ ಜನರ ಈ ಮಾತನ್ನು ಒಪ್ಪಿಕೊಂಡಿದ್ದಾರೆ.

Southside kannadiga ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ  ವಿಡಿಯೋದಲ್ಲಿ ಯುವಕನೊಬ್ಬ ಮುಗ್ಧ ಹಳ್ಳಿ ಜನರೊಂದಿಗೆ ಮಾತಿಗಿಳಿಯುವುದನ್ನು ನೋಡಬಹುದು. ಬೆಂಗಳೂರು ಜೀವನದ ಬಗ್ಗೆ ಹೇಳಿ ಅಣ್ಣ ಎಂದಾಗ ಒಬ್ಬ ವ್ಯಕ್ತಿ ಬೆಂಗಳೂರು ಜೀವನ ಚೆನ್ನಾಗಿಲ್ಲ ಎನ್ನುತ್ತಾನೆ. ಆದಕ್ಕೆ ಈ ಯುವಕನು ಚೆನ್ನಾಗಿದೆಯಣ್ಣ ಬೆಂಗಳೂರು ಜೀವನ, ದೊಡ್ಡ ದೊಡ್ಡ ಬಿಲ್ಡಿಂಗ್ ಇದೆ, ಪಾರ್ಟಿ ಮಾಡ್ಬಹುದು ಎನ್ನುವುದನ್ನು ನೋಡಬಹುದು. ಇದಕ್ಕೆ ಪ್ರತಿಯಾಗಿ ಹಳ್ಳಿ ವ್ಯಕ್ತಿ ಅದನ್ನೆಲ್ಲಾ ತಕೊಂಡು ಏನು ಮಾಡೋದು, ನಾವು ಇಲ್ಲಿ ವಾರದಲ್ಲಿ ಎರಡು ದಿನ ಪಾರ್ಟಿ ಮಾಡ್ತೇವೆ. ಬೆಂಗಳೂರಲ್ಲಿ ನೆಮ್ಮದಿ ಅನ್ನೋದೇ ಇದೆ ಎಂದು ಕಟು ವಾಸ್ತವವನ್ನು ತೆರೆದಿಟ್ಟಿದ್ದಾನೆ. ನಮಗೆ ದುಡ್ಡು ಮುಖ್ಯ ಅಲ್ಲ, ಮನುಷ್ಯ ಮುಖ್ಯ ಎನ್ನುವ ಸಂಬಂಧಗಳ ಮಹತ್ವದ ಬಗ್ಗೆ ಮಾತನಾಡಿರುವುದನ್ನು ನೀವು ನೋಡಬಹದು.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಕೃಷಿ ಅಂದ್ರೆ ಖುಷಿ; ನೃತ್ಯ ಮಾಡುತ್ತಾ ಕೆಲಸವನ್ನು ಆನಂದಿಸಿದ ಮಹಿಳೆ

ಈ ವಿಡಿಯೋ ಹನ್ನೊಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಯಾರಿಗೆ ಬೇಕು ಗುರು ಈ ಬೆಂಗಳೂರು ಎಂದಿದ್ದಾರೆ. ಇನ್ನೊಬ್ಬರು, ಹಳ್ಳಿ ಬದುಕೇ ಸುಂದರ ಎಂದು ಹೇಳಿದರೆ ಮತ್ತೊಬ್ಬರು ನೆಮ್ಮದಿ ಇದ್ರೇನೆ ಜೀವನ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Wed, 3 December 25