Video: ಕಾಯಕದಲ್ಲೇ ಖುಷಿ ಕಾಣುವ ವ್ಯಕ್ತಿಯ ಚಿತ್ರ ಬಿಡಿಸಿ ಮೊಗದಲ್ಲಿ ನಗು ಮೂಡಿಸಿದ ಯುವಕಲಾವಿದ
ಕಲಾವಿದರೇ ಹಾಗೆ, ಅಪರಿಚಿತ ವ್ಯಕ್ತಿಯ ಚಿತ್ರವನ್ನು ಬಿಡಿಸಿ ಅವರ ಮೊಗದಲ್ಲಿ ನಗು ಮೂಡಿಸುತ್ತಾರೆ. ಆದರೆ ಇಲ್ಲೊಬ್ಬ ಕಲಾವಿದ ಮನೆ ಮನೆಗೆ ಪೇಪರ್ ಹಾಕುತ್ತಿರುವ ವ್ಯಕ್ತಿಯ ಚಿತ್ರ ಬಿಡಿಸಿ, ಮೊಗದಲ್ಲಿ ನಗು ತರಿಸಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

ಅಪರಿಚಿತ ವ್ಯಕ್ತಿಗಳ ಮೊಗದಲ್ಲಿ ನಗು ಮೂಡಿಸುವ ವ್ಯಕ್ತಿಗಳನ್ನು ಕಂಡಾಗ ಖುಷಿಯಾಗುತ್ತದೆ. ಈ ವಿಚಾರದಲ್ಲಿ ಕಲಾವಿದರು (artists) ಒಂದು ಹೆಜ್ಜೆ ಮುಂದೆ ಇರುತ್ತಾರೆ. ಕೈಯಲ್ಲಿ ಪೇಪರ್, ಪೆನ್ನು ಹಿಡಿದು ದಾರಿಹೋಕರು ಅಥವಾ ಅಪರಿಚಿತ ವ್ಯಕ್ತಿಗಳ ಚಿತ್ರ ಬಿಡಿಸಿ ಅವರ ಮುಖದಲ್ಲಿ ನಗು ಮೂಡಿಸುತ್ತಾರೆ. ಆದರೆ ಯುವಕಲಾವಿದನೊಬ್ಬ ಪೇಪರ್ ರಾಜಣ್ಣನ (Paper Rajanna) ಚಿತ್ರ ಬಿಡಿಸಿ ಅವರನ್ನು ಖುಷಿ ಪಡಿಸಿದ್ದಾನೆ. ತನ್ನ ಸ್ಕೆಚ್ ನೋಡುತ್ತಿದ್ದಂತೆ ವೃದ್ಧ ವ್ಯಕ್ತಿ ಖುಷಿಪಟ್ಟಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ.
Tilak kulal ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಯುವಕಲಾವಿದ ತಿಲಕ್ ಕುಲಾಲ್, ದುಡಿಮೆಯಲ್ಲಿ ಖುಷಿ ಕಾಣುತ್ತಿರುವ ವ್ಯಕ್ತಿಯ ಚಿತ್ರವನ್ನು ಬಿಡಿಸಿದ್ದು, ಈ ಸ್ಕೆಚ್ ಆ ವ್ಯಕ್ತಿಯ ಕೈಗೆ ನೀಡುತ್ತಿದ್ದಂತೆ ಖುಷಿಯಿಂದಲೇ ನಗೆ ಬೀರುವುದನ್ನು ನೀವಿಲ್ಲಿ ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ: ಜೀವನಕ್ಕಾಗಿ ಲಾರಿ ಓಡಿಸುವ ಕಾಯಕ; ಬದುಕಿಗೆ ಸ್ಫೂರ್ತಿ ಗೋವಿಂದಣ್ಣನ ಮಾತು
ಈ ವಿಡಿಯೋ ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಮ್ಮ ಪಾಪದ ಪೇಪರ್ ರಾಜಣ್ಣ ಎಂದಿದ್ದಾರೆ. ಇನ್ನೊಬ್ಬರು, ಪೇಪರ್ ರಾಜಣ್ಣ ಮುಖದಲ್ಲಿ ನಗು ನೋಡಿ ಖುಷಿಯಾಯ್ತು. ಪರಿಶುದ್ಧ ಮನಸ್ಸಿನ ವ್ಯಕ್ತಿ ಎಂದು ಹೇಳಿದ್ದಾರೆ. ಇನ್ನು ಕೆಲವರು ಸೂಪರ್ ಎನ್ನುತ್ತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Wed, 3 December 25




