ಬೆಂಗಳೂರು: ಮ್ಯಾಟ್ರಿಮೋನಿಯಲ್ ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹ ಬೆಳೆಸಿ 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ವ್ಯಕ್ತಿಯನ್ನು ಬೆಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಾಜಸ್ಥಾನ ಮೂಲದ ನರೇಶ್ ಪೂಜಾರಿ ಗೋಸ್ವಾಮಿ (45) ಎಂದು ಪೊಲೀಸರು ಗುರುತಿಸಿದ್ದಾರೆ. ಈತ ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಮ್ಯಾಟ್ರಿಮೋನಿಯಲ್ ಸೈಟ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ ಮಹಿಳೆಯರು ಮತ್ತು ಅವರ ಪೋಷಕರಿಗೆ ಹಣ ನೀಡುವಂತೆ ಆಮಿಷವೊಡ್ಡಿದ್ದರು.
ಕೊಯಮತ್ತೂರಿನ ಸಂತ್ರಸ್ತೆಯೊಬ್ಬರ ದೂರು ದಾಖಲಿಸಿಕೊಂಡ ನಂತರ ರೈಲ್ವೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರ ಪ್ರಕಾರ, ಗೋಸ್ವಾಮಿ ವಿಧವೆಯರನ್ನು ಮತ್ತು ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು, ತಡರಾತ್ರಿ ಮಹಿಳೆಯರೊಂದಿಗೆ ಸಂದೇಶ ಕಳುಹಿಸಿ, ಮಾತನಾಡಿ, ವಿಶ್ವಾಸ ಗಳಿಸಿ ಹಣ ನೀಡುವಂತೆ ಆಮಿಷ ಒಡ್ಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹಾಟ್ ಆಗಿ ಕಾಣಲು ತನ್ನ ರಕ್ತವನ್ನು ತಾನೇ ಕುಡಿಯುತ್ತಾಳೆ ಈ ಯುವತಿ
45 ವರ್ಷ ವಯಸ್ಸಿನ ಆರೋಪಿ ಸುಂದರ ಯುವಕರ ಫೋಟೋಗಳನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ಪ್ರೊಫೈಲ್ ರಚಿಸಿ ಕಸ್ಟಮ್ ಅಧಿಕಾರಿ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಪೋಸ್ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಸುಮಾರು 259 ಮಹಿಳೆಯರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ರಾಜಸ್ಥಾನದಿಂದ 56, ಉತ್ತರ ಪ್ರದೇಶದ 32, ದೆಹಲಿಯಿಂದ 32, ಕರ್ನಾಟಕದಿಂದ 17, ಮಧ್ಯಪ್ರದೇಶದಿಂದ 16, ಮಹಾರಾಷ್ಟ್ರದಿಂದ 13, ಗುಜರಾತ್‌ನಿಂದ 11, ತಮಿಳುನಾಡಿನಿಂದ 6, ಬಿಹಾರ ಮತ್ತು ಜಾರ್ಖಂಡ್‌ನಿಂದ 6 ಮತ್ತು ಆಂಧ್ರಪ್ರದೇಶದಿಂದ ಇಬ್ಬರು ಮಹಿಳೆಯರು. ಈತ ಇಷ್ಟು ಮಹಿಳೆಯರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಎಂದು ಸುಳ್ಳು ಹೇಳಿದ್ದ. ಈತ ಮಹಿಳೆಯರೊಂದಿಗೆ ಮಾತನಾಡಲು ಬೇರೆ ಬೇರೆ ನಕಲಿ ಹೆಸರಿನ ಸಿಮ್ ಕಾರ್ಡ್‌ಗಳನ್ನು ಬಳಸಿದ್ದಾನೆ ಎಂದು ಬೆಂಗಳೂರಿನ ರೈಲ್ವೆ ಡಿಐಜಿಪಿ ಡಾ ಎಸ್‌ಡಿ ಶರಣಪ್ಪ ತಿಳಿಸಿದ್ದಾರೆ.
ಆರೋಪಿ ಕೊಯಮತ್ತೂರು ಸಂತ್ರಸ್ತೆಯ ಪೋಷಕರನ್ನು ಭೇಟಿಯಾಗಲು ಬೆಂಗಳೂರಿಗೆ ಆಹ್ವಾನಿಸಿದ್ದ. ತನ್ನ ಸಂಬಂಧಿಕರಿಗೆ ಟಿಕೆಟ್ ಕಾಯ್ದಿರಿಸುವುದಾಗಿ ಹೇಳಿ ರೈಲ್ವೇ ನಿಲ್ದಾಣದಲ್ಲಿ ಅವರಿಂದ 10 ಸಾವಿರ ರೂಪಾಯಿ ಪಡೆದು ರೈಲು ನಿಲ್ದಾಣದಿಂದ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:13 pm, Wed, 28 February 24