Viral : ಐಐಟಿ, ಎನ್ಐಟಿ ಪದವಿ ಅಗತ್ಯವಿಲ್ಲ, 4 ವರ್ಷ ಅನುಭವವಿದ್ದರೆ 1 ಕೋಟಿ ರೂ ಸಂಬಳ, ಬೆಂಗಳೂರಿನಲ್ಲಿದೆ ಉದ್ಯೋಗವಕಾಶ

ಕೈತುಂಬಾ ಸಂಬಳ ಸಿಗುವ ಉದ್ಯೋಗ ಸಿಕ್ಕರೆ ಸಾಕು ಎಂದುಕೊಳ್ಳುತ್ತೇವೆ. ಆದರೆ ಇದೀಗ ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಭಾರತೀಯ ಮೂಲದ ಸಂಸ್ಥಾಪಕರೊಬ್ಬರು ವಿಶೇಷ ಆಫರ್ ನೀಡಿದ್ದಾರೆ. ಯಾವುದೇ ಪದವಿ ಹಾಗೂ ರೆಸ್ಯೂಮ್ ಅಗತ್ಯವಿಲ್ಲ, ಆದರೆ ಸಂಬಳ ಮಾತ್ರ ಒಂದು ಕೋಟಿ ರೂಪಾಯಿಯಂತೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದ್ರೆ ಯಾವ ಉದ್ಯೋಗ? ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳೇನು? ಎನ್ನುವ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Viral : ಐಐಟಿ, ಎನ್ಐಟಿ ಪದವಿ ಅಗತ್ಯವಿಲ್ಲ, 4 ವರ್ಷ ಅನುಭವವಿದ್ದರೆ 1 ಕೋಟಿ ರೂ ಸಂಬಳ, ಬೆಂಗಳೂರಿನಲ್ಲಿದೆ ಉದ್ಯೋಗವಕಾಶ
ವೈರಲ್ ಪೋಸ್ಟ್
Image Credit source: Maskot/DigitalVision/Getty Images/ Twitter

Updated on: Jul 08, 2025 | 2:47 PM

ಓದು ಮುಗಿಯುತ್ತಿದ್ದಂತೆ ಕೈ ತುಂಬಾ ಸಂಬಳ (Job) ಸಿಗುವ ಜಾಬ್ ಸಿಕ್ಕರೆ ಸಾಕು ಎಂದು ಬಯಸುವುದು ಸಹಜ. ಹೆಚ್ಚಿನವರು ಐಟಿ ಬಿಟಿ ಸಂಸ್ಥೆಗಳು (IT Company), ಖಾಸಗಿ ಕಂಪೆನಿಗಳು (Private company) ಹಾಗೂ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಸಿಗಬೇಕೆಂದು ಬಯಸುತ್ತಾರೆ. ಬೆಂಗಳೂರಿನಲ್ಲಿ ಖಾಲಿಯಿರುವ ಟೆಕ್ ಲೀಡ್ ಹುದ್ದೆಗೆ ಸ್ಮಾಲೆಸ್ಟ್ ಎಐನ ಸಂಸ್ಥಾಪಕ ಸುದರ್ಶನ್ ಕಾಮತ್ (Sudarshan Kamath) ಅವರು ಅಭ್ಯರ್ಥಿಯನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆಯಲ್ಲಿ ವಿಶೇಷ ಆಫರ್ ನೀಡಿದ್ದು, ಸಿವಿ ಅಗತ್ಯವಿಲ್ಲ ಎನ್ನುವುದನ್ನು ಉಲ್ಲೇಖಿಸಿದ್ದಾರೆ. ಉದ್ಯೋಗಿಗಳಿಗೆ ಏನೆಲ್ಲಾ ಅರ್ಹತೆ ಇರಬೇಕು ಹಾಗೂ ಸಂಬಳವೆಷ್ಟು ಎನ್ನುವುದನ್ನು ಈ ಪೋಸ್ಟ್‌ನಲ್ಲಿದೆ.

ಸ್ಮಾಲೆಸ್ಟ್ ಎಐನ ಸಂಸ್ಥಾಪಕ ಸುದರ್ಶನ ಕಾಮತ್ ಅವರು @kamath sutra ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರು ಕಂಪನಿಗೆ ಫುಲ್ ಟೈಮ್ ಸ್ಟಾಕ್ ಲೀಡ್ ನೇಮಿಸಿಕೊಳ್ಳಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಈ ಹುದ್ದೆಯೂ ಖಾಲಿಯಿದೆ. ಅಭ್ಯರ್ಥಿಗೆ ಒಂದು ಕೋಟಿ ರೂ ಸಂಬಳ ನೀಡುವುದಾಗಿ ತಿಳಿಸಿದ್ದು, ಯಾವುದೇ ಪದವಿ ಹಾಗೂ ಸಿವಿ ಅಗತ್ಯವಿಲ್ಲ ಎಂದು ಇಲ್ಲಿ ಉಲ್ಲೇಖಿಸಿದ್ದಾರೆ. 60 ಲಕ್ಷ – ವಾರ್ಷಿಕ ವೇತನ, 40 ಲಕ್ಷ ಹೆಚ್ಚುವರಿ ಕಂಪನಿ ಪ್ರಯೋಜನಗಳು ಸಿಗಲಿದೆ. ತಕ್ಷಣವೇ ನೇಮಕಾತಿ ಪ್ರಕ್ರಿಯೆ ಇರಲಿದ್ದು, ಇದು ಸಂಪೂರ್ಣ ಕಚೇರಿ ಆಧಾರಿತ ಕೆಲಸವಾಗಿದೆ, ವಾರದಲ್ಲಿ ಐದು ದಿನಗಳು ಮಾತ್ರ ಅಭ್ಯರ್ಥಿಗಳು ಕೆಲಸ ಮಾಡಬೇಕು.

ಇದನ್ನೂ ಓದಿ
ಮಾಲೀಕ ಹಾಡು ಹಾಡುತ್ತಿದ್ದಂತೆ ಆನೆಗಳು ಕೊಟ್ಟ ರಿಯಾಕ್ಷನ್ ಹೇಗಿತ್ತು ನೋಡಿ
ಪತಿಯ ಕೆಟ್ಟ ಅಭ್ಯಾಸಗಳನ್ನು ವಿಚ್ಛೇದನ ಪತ್ರದಲ್ಲಿ ಉಲ್ಲೇಖಿಸಿದ ಪತ್ನಿ
ಭಾರತದಲ್ಲಿ ಇಷ್ಟೊಂದು ಕಸನಾ? ಎಂದಿಗೂ ನೋಡಿಲ್ಲ ಎಂದ ಫ್ರೆಂಚ್ ಮಹಿಳೆ
ದಯವಿಟ್ಟು ಯುರೋಪ್‌ಗೆ ಯಾರು ಬರ್ಬೇಡಿ : ಭಾರತೀಯ ಪ್ರವಾಸಿಗ ಹೀಗೆಂದಿದ್ದೇಕೆ?

ಅಭ್ಯರ್ಥಿಗಳು ಕನಿಷ್ಠ 4-5 ವರ್ಷ ಅನುಭವದೊಂದಿಗೆ, ನೆಕ್ಸ್ಟ್ ಜೆಎಸ್, ಪೈಥಾನ್ ಮತ್ತು ರಿಯಾಕ್ಟ್ ಜೆಎಸ್‌ನೊಂದಿಗೆ ಕೋಡಿಂಗ್‌ ಕುರಿತು ತಿಳಿದಿರಬೇಕು. “ಪಿಎಸ್ – 0 ರಿಂದ 100 ರವರೆಗಿನ ಸಿಸ್ಟಮ್ ಸ್ಕೇಲಿಂಗ್ ಸಿಸ್ಟಮ್‌ಗಳೊಂದಿಗೆ ಕೆಲಸ ಮಾಡಿದ ಅನುಭವವು ಒಂದು ಟನ್ ಬೋನಸ್ ಅಂಕಗಳನ್ನು ನೀಡುತ್ತದೆ. ಕ್ರ್ಯಾಕ್ಡ್ ಫುಲ್ ಸ್ಟ್ಯಾಕ್ ಲೀಡ್’ ಶೀರ್ಷಿಕೆಯೊಂದಿಗೆ 100 ಪದಗಳನ್ನು ಒಳಗೊಂಡ ಅಭ್ಯರ್ಥಿಯ ಕಿರು ಪರಿಚಯವನ್ನು info@smallest.ai ಗೆ ಕಳುಹಿಸಿ ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ಇದನ್ನೂ ಓದಿ : Viral : ಇಲ್ಲಿ ನಾಯಿ, ಬೆಕ್ಕು ತಂದು ಬಿಡುವವರು, ನಿಮ್ಮ ಹೆಂಡತಿಯನ್ನು ಬಿಟ್ಟು ಹೋಗಿ : ಮನೆಯ ಕಾಂಪೌಂಡ್ ಮೇಲೆ ಎಚ್ಚರಿಕೆಯ ಫಲಕ

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ಜುಲೈ 7 ರಂದು ಶೇರ್ ಮಾಡಲಾದ ಈ ಪೋಸ್ಟ್ ಹಲವರು ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, 4-5 ವರ್ಷಗಳ ಅನುಭವಕ್ಕಾಗಿ 60 ಲಕ್ಷ ಆದಾಯವು ಇಂದಿನ ಮಾರುಕಟ್ಟೆಯಲ್ಲಿ ಪ್ರಮಾಣಿತವಾಗಿದೆ. ಉನ್ನತ ಶ್ರೇಣಿಯ ಡೆವಲಪರ್ ಗಳನ್ನು ಆಕರ್ಷಿಸಲು ಸಾಕಾಗುವುದಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಬ್ರಹ್ಮಚಾರಿಗೆ ತಿಂಗಳಿಗೆ 3.4 ಲಕ್ಷ ಸಂಬಳ, ವಿವಾಹಿತರಿಗೆ ಇದು ಒಳ್ಳೆಯ ಆಯ್ಕೆ ಎಂದಿದ್ದಾರೆ. ಮತ್ತೊಬ್ಬರು, ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆಯ ಅವಕಾಶ, ಅರ್ಹ ವ್ಯಕ್ತಿಗಳು ಸದುಪಯೋಗಪಡಿಸಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Tue, 8 July 25