
ಉದ್ಯೋಗ ಅರಸಿಕೊಂಡು ಬಂದ ಅದೆಷ್ಟೋ ಜನರಿಗೆ ಈ ಬೆಂಗಳೂರು (Bengaluru) ಬದುಕು ನೀಡಿದೆ. ಅಭಿವೃದ್ಧಿಯತ್ತ ಸಾಗುತ್ತಿರುವ ಬೆಂಗಳೂರಿನಲ್ಲಿ ಈ ರಸ್ತೆಗುಂಡಿಗಳ ಸಮಸ್ಯೆಗೆ (Road problem) ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ರಸ್ತೆ ತುಂಬೆಲ್ಲಾ ಗುಂಡಿಗಳದ್ದೇ ರಾಶಿ. ಮಳೆಗಾಲ ಶುರುವಾಗುತ್ತಿದ್ದಂತೆ ವಾಹನ ಸವಾರರು ಈ ರಸ್ತೆಗಳಲ್ಲಿ ತಮ್ಮ ಪ್ರಾಣಪಣಕ್ಕಿಟ್ಟು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ರಸ್ತೆಯ ತುಂಬಾ ನೀರು ತುಂಬಿಕೊಂಡಿದ್ದು, ಸವಾರರು ವಾಹನ ಓಡಿಸಲು ಕಷ್ಟಪಡುತ್ತಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ಬಳಕೆದಾರ ಇದೇನಾ ಅಭಿವೃದ್ಧಿ ಎಂದು ಜನಪ್ರತಿನಿಧಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.
YTKDindia ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಬೆಂಗಳೂರಿನ ರಸ್ತೆಯೂ ನದಿಯಂತಾಗಿರುವುದನ್ನು ಕಾಣಬಹುದು. ಈ ವಿಡಿಯೋಗೆ ಇದು ರಸ್ತೆಯಲ್ಲ, ಇದು ನಾಗರಿಕರಿಗೆ ರಾಜ್ಯ ಪ್ರಾಯೋಜಿತ ಚಿತ್ರಹಿಂಸೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ನಮ್ಮ ಬೆಂಗಳೂರಿಗೆ ಸುಸ್ವಾಗತ, ಇಲ್ಲಿ ರಸ್ತೆಗುಂಡಿಗಳು ಶಾಶ್ವತ. ನಿವಾಸಿಗಳು ಹಾಗೂ ಜನರು ನರಕವನ್ನು ಅನುಭವಿಸುತ್ತಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ರಸ್ತೆಯ ತುಂಬಾ ಗುಂಡಿಗಳಿದ್ದು ನೀರು ತುಂಬಿ ರಸ್ತೆಯೂ ನದಿಯಂತಾಗಿದೆ. ವಾಹನ ಸವಾರರು ಪ್ರಾಣ ಕೈಯಲ್ಲಿಡಿದು ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಪ್ರಯಾಣಿಕರೊಬ್ಬರು ಬೆಂಗಳೂರಿನ ರಸ್ತೆಯ ದುಸ್ಥಿತಿಯನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿರುವುದನ್ನು ಕಾಣಬಹುದು.
This is not a road. This is State-Sponsored torture for citizens.
Welcome to Namma Bengaluru, the so-called Silicon Valley of India, where potholes are permanent residents & people get hell. 🤡🤦♂️pic.twitter.com/8BJqslHoyZ
— #YeThikKarkeDikhao (@YTKDIndia) September 21, 2025
ಸೆಪ್ಟೆಂಬರ್ 21 ರಂದು ಶೇರ್ ಮಾಡಲಾದ ಈ ವಿಡಿಯೋ ಎಂಬತ್ತೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ, ಗೃಹ ಲಕ್ಷ್ಮಿ ಇತ್ಯಾದಿಗಳ ಜೊತೆಗೆ ಬೆಂಗಳೂರಿನಲ್ಲಿ ಕಡಿಮೆ ಮತದಾನವಾಗಿದೆ. ಇಷ್ಟೊಂದು ಉಚಿತ ಯೋಜನೆಗಳನ್ನು ನೀಡುವ ಸರ್ಕಾರವನ್ನು ನೀವು ಆರಿಸಿದರೆ, ಮೂಲಸೌಕರ್ಯ ಅಭಿವೃದ್ಧಿಗೆ ಹಣ ಎಲ್ಲಿಂದ ಬರುತ್ತದೆ. ಕಾಂಗ್ರೆಸ್ ಅಥವಾ ಬಿಜೆಪಿ ಪರವಾಗಿಲ್ಲ. ಉಚಿತ ಕೊಡುಗೆಗಳು ಮುಖ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ:ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ನದಿಯಂತಾದ ಬೆಂಗಳೂರಿನ ಫ್ಲೈಓವರ್, ವಿಡಿಯೋ ವೈರಲ್
ಇನ್ನೊಬ್ಬರು, ಅತಿ ಹೆಚ್ಚು ರಸ್ತೆ ತೆರಿಗೆ ವಿಧಿಸುವ ರಾಜ್ಯ ಯಾವುದು ಎಂಬುದನ್ನು ನೆನಪಿನಲ್ಲಿಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಬೆಂಗಳೂರಿನಲ್ಲಿ ಪ್ರತಿಯೊಂದು ಸವಾರಿಯೂ ಒಂದು ಸಾಹಸ ಕ್ರೀಡೆಯಾಗಿದೆ ಆದರೆ ಸುರಕ್ಷತಾ ಸಾಧನಗಳಿಲ್ಲ… ಇದು ಭಾರತದ ಕ್ರೇಟರ್ ವ್ಯಾಲಿಯಂತಿದೆ ಎಂದು ಕಾಮೆಂಟ್ ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ