
ಬೆಂಗಳೂರು, (ಸೆಪ್ಟೆಂಬರ್ 19): ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನರ ಜೀವನ ಅಸ್ತವ್ಯಸ್ತವಾಗಿದೆ. ನಗರದ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಟ್ರಾಫಿಕ್ (Traffic) ಸಮಸ್ಯೆ ಕೂಡ ಕಂಡುಬಂದಿದೆ. ರಾತ್ರಿಯಿಡೀ ಸುರಿದಿರುವ ಮಳೆಯಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಜಲಾವೃತವಾಗಿರುವುದರ ಜೊತೆಗೆ ಪ್ರಯಾಣಿಕರು ಫ್ಲೈಓವರ್ನಲ್ಲಿ ವಾಹನ ಚಲಾಯಿಸಲು ಕಷ್ಟಪಡುತ್ತಿರುವ ವಿಡಿಯೋವನ್ನು ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾನಲ್ಲಿ ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ತೀವ್ರ ಮಳೆಯಿಂದಾಗಿ ಬೆಂಗಳೂರಿನ ಹಲವು ಭಾಗಗಳು ಎಷ್ಟರ ಮಟ್ಟಿಗೆ ನೀರಿನಿಂದ ತುಂಬಿಹೋಗಿವೆ ಮತ್ತು ರಸ್ತೆಗಳ ದುಸ್ಥಿತಿ ಹೇಗಿದೆ ಎಂಬುದನ್ನು ನೋಡಲು ಈ ವೀಡಿಯೋ ವೀಕ್ಷಿಸಿ
Electronic City flyover waterlogged pic.twitter.com/vSbCgz0xMQ
— Vivek Ganesan (@Vivek_Ganesan) September 19, 2025
ಇಂದು ಬೆಳಿಗ್ಗೆ 5.30ರವರೆಗೆ ಬೆಂಗಳೂರಿನಲ್ಲಿ 65.55 ಮಿ.ಮೀ ಮಳೆಯಾಗಿದೆ. ದೊಡ್ಡಬಳ್ಳಾಪುರದಲ್ಲಿ 60 ಮೀ.ಮೀ, ಬೆಂಗಳೂರು ಗ್ರಾಮಾಂತರದ ಹೇಸರಘಟ್ಟದಲ್ಲಿ 43 ಮಿ.ಮೀ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಮಳೆಯಾಗುವ ಮೂನ್ಸೂಚನೆ ನೀಡಿದ್ದು, ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದೆ 30-40 kmh ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತದ ಹವಾಮಾನ ಇಲಾಖೆ (IMD) ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ ಬೆಂಗಳೂರಿನಲ್ಲಿ ಮತ್ತೆ ವರುಣನ ಆರ್ಭಟ; ಲಾಲ್ ಬಾಗ್ ರಸ್ತೆಗೆ ಉರುಳಿ ಬಿದ್ದ ಬೃಹದಾಕಾರದ ಮರ!
ಭಾರೀ ಮಳೆಯಿಂದಾಗಿ ತಾತ್ಕಾಲಿಕ ವಿದ್ಯುತ್ ಕಡಿತ, ನೀರು ನಿಲ್ಲುವಿಕೆ ಮತ್ತು ಮಳೆಯಿಂದ ಶಿಥಿಲಗೊಂಡ ಮರದ ಕೊಂಬೆಗಳು ಬೀಳುವ ಸಾಧ್ಯತೆಯಿದೆ. ಹಾಗೇ ಇಲೆಕ್ಟ್ರಾನಿಕ್ ಉಪಕರಣಗಳನ್ನು ಅನ್ಪ್ಲಗ್ ಮಾಡುವಂತೆ ಮತ್ತು ಪ್ರಯಾಣೀಸುವಾಗ ಸುರಕ್ಷಿತವಾಗಿರುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಕರ್ನಾಟಕದಲ್ಲಿ ಹಲವೆಡೆ ಗಮನಾರ್ಹ ಪ್ರಮಾಣದಲ್ಲಿ ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣ ಕೇಂದ್ರದ (KSNDMC) ಪ್ರಕಾರ ಚಿಕ್ಕಬಳ್ಳಾಪುರದ ಕಾನಗಮಾಕಲಪಲ್ಲಿಯಲ್ಲಿ 130 ಮಿ.ಮೀ, ತಿರುಮಾನಿಯಲ್ಲಿ 114 ಮಿ.ಮೀ, ಬೀಚಗನಹಳ್ಳಿಯಲ್ಲಿ 114 ಮಿ.ಮೀ , ಚೆಲೂರಿನಲ್ಲಿ 101 ಮಿ.ಮೀ, ಬೀದರ್ನ ಬಂದರ್ಕುಮಟದಲ್ಲಿ 112 ಮಿ.ಮೀ, ಗದಗದಲ್ಲಿ 51.9 ಮಿ.ಮೀ, ರಾಮನಗರದ ಚಂದುರಾಯನಹಳ್ಳಿಯಲ್ಲಿ 46 ಮಿ.ಮೀ,ಕೋಲಾರದ ತಮಕದಲ್ಲಿ 21.5 ಮಿ.ಮೀ, ಮಂಗಳೂರಿನಲ್ಲಿ 20.7 ಮಿ.ಮೀ ಮಳೆಯಾಗಿದೆ ಎಂದು ತಿಳಿಸಿದೆ.
Published On - 4:15 pm, Fri, 19 September 25