Video: ಇದು ಗ್ರ್ಯಾಂಡ್ ಥೆಫ್ಟ್ ಆಟೋರಿಕ್ಷಾ; ಬೆಂಗಳೂರಿನ ಗುಂಡಿಗಳನ್ನು AI ರೇಸಿಂಗ್ ಆಟವನ್ನಾಗಿ ಪರಿವರ್ತಿಸಿದ ಟೆಕ್ಕಿ

ಇಂದು ಎಐ ತಂತ್ರಜ್ಞಾನ ಬಳಕೆಯೂ ಹೆಚ್ಚಾಗಿದೆ. ಬೆಂಗಳೂರಿನ ಟೆಕ್ಕಿಯೊಬ್ಬರು ತಮ್ಮ ಅಸಾಮಾನ್ಯ ಪರಿಕಲ್ಪನೆಯೊಂದಿಗೆ ಇಂಟರ್ನೆಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಇವರು ಬೆಂಗಳೂರಿನ ಗುಂಡಿಗಳನ್ನು ಎಐ ರೇಸಿಂಗ್ ಆಟವನ್ನಾಗಿ ಪರಿವರ್ತಿಸಿದ್ದಾರೆ. ಈ ಕುರಿತಾದ ಪೋಸ್ಟನ್ನು ಕೆನಡಾ ಮೂಲದ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Video: ಇದು ಗ್ರ್ಯಾಂಡ್ ಥೆಫ್ಟ್ ಆಟೋರಿಕ್ಷಾ; ಬೆಂಗಳೂರಿನ ಗುಂಡಿಗಳನ್ನು AI ರೇಸಿಂಗ್ ಆಟವನ್ನಾಗಿ ಪರಿವರ್ತಿಸಿದ ಟೆಕ್ಕಿ
ಬೆಂಗಳೂರಿನ ಗುಂಡಿಗಳನ್ನು AI ರೇಸಿಂಗ್ ಆಟವನ್ನಾಗಿ ಪರಿವರ್ತಿಸಿದ ಟೆಕ್ಕಿ
Image Credit source: Twitter

Updated on: Sep 10, 2025 | 4:43 PM

ಇತ್ತೀಚೆಗಿನ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನೋದು ಟ್ರೆಂಡ್ ಆಗಿದೆ. ವಿಜ್ಞಾನ, ತಂತ್ರಜ್ಞಾನ, ವ್ಯಾಪಾರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಎಐ ಬಳಕೆ ಹೆಚ್ಚಾಗಿದೆ. ಬೆಂಗಳೂರಿನ ಟೆಕ್ಕಿಯೊಬ್ಬರು ಭಾರತೀಯ ರಸ್ತೆಗಳ ಅವ್ಯವಸ್ಥೆಯಿಂದ ಪ್ರೇರಿತವಾಗಿ ಎಐ ರಚಿತ ಆಟೋರಿಕ್ಷಾ ರೇಸಿಂಗ್ ಆಟದ ಪರಿಕಲ್ಪನೆಯನ್ನು ತಂದಿದ್ದಾರೆ. ಈ ಆಟವನ್ನು ಗ್ರ್ಯಾಂಡ್ ಥೆಫ್ಟ್ ಆಟೋರಿಕ್ಷಾ (Grand Theft Autorickshaw) ಎಂದು ಕರೆಯಲಾಗುತ್ತಿದ್ದು, ಈ ಕಲ್ಪನೆಯ ಹಿಂದಿನ ವ್ಯಕ್ತಿಯೇ ಹರಿನ್ ನಿತೀಶ್ವರ್ (Harin Nitisvaar). ಇವರು ಬೆಂಗಳೂರಿನ ಗುಂಡಿಗಳನ್ನು ಎಐ ರೇಸಿಂಗ್ ಆಟವನ್ನಾಗಿ ಪರಿವರ್ತಿಸಿದ್ದು ಈ ರೇಸಿಂಗ್ ಆಟದ ತುಣುಕುಗಳನ್ನು ಶೇರ್ ಮಾಡಿಕೊಂಡಿದ್ದು, ಇದು ವಿದೇಶಿ ವ್ಯಕ್ತಿ ಫ್ರೈಸೆನ್ ಅವರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

@HNithishvaar ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋಗೆ ಈ AI ಪರಿಕರಗಳು ವ್ಯಸನಕಾರಿ, ಈ ಆಟೋ ರೇಸಿಂಗ್ ಪರಿಕಲ್ಪನೆಯನ್ನು ಇದೀಗ ರಚಿಸಲಾಗಿದೆ. ಇದು ನಿಜವಾದ ಆಟವಾಗಿದ್ದರೆ, ನೀವು ಇದನ್ನು ಆಡುತ್ತೀರಾ? ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.  ಗ್ರ್ಯಾಂಡ್ ಥೆಫ್ಟ್ ಆಟೋರಿಕ್ಷಾ” ಎಂದು ಕರೆಯಲ್ಪಡುವ ಈ ಆಟವು ನಯವಾದ ರೇಸಿಂಗ್ ಟ್ರ್ಯಾಕ್‌ಗಳನ್ನು ಹಾಗೂ ಹಂಪ್‌ಗಳಿಂದ  ಕೂಡಿದ ನಗರ ರಸ್ತೆಗಳಿಂದ ತಪ್ಪಿಸಿಕೊಂಡು ಜೊತೆಗೆ ಇಲ್ಲಿ ಆಟಗಾರರು ಗುಂಡಿಗಳನ್ನು ತಪ್ಪಿಸುತ್ತಾ,  ಎದುರಿನಿಂದ ಬರುವ ಅನಿರೀಕ್ಷಿತ ಕಾರುಗಳು ಮತ್ತು ಬ್ಯಾರಿಕೇಡ್‌ಗಳನ್ನು ದಾಟಿ ವೇಗವಾಗಿ ಚಲಿಸುವುದನ್ನು ನೋಡಬಹುದು.

ಇದನ್ನೂ ಓದಿ
ಗೇಮಿಂಗ್ ಚೇರ್ ಅಳವಡಿಸಿಕೊಂಡ ಬೆಂಗಳೂರಿನ ಆಟೋ ಡ್ರೈವರ್
ಜೀವಂತ ಕಂದಮ್ಮನಿಗೆ ಜನ್ಮ ನೀಡುವ ರೋಬೋಟ್, ಇನ್ನು ಮಹಿಳೆಯರ ಅಗತ್ಯವಿಲ್ಲ
ರಸ್ತೆಯಲ್ಲಿ ನೀರು ತುಂಬಿದ್ರು ಪ್ರಯಾಣಿಕನನ್ನು ಪಿಕಪ್ ಮಾಡಿದ ಆಟೋ ಚಾಲಕ
IIM -B ಸಂಸ್ಥೆಯ ಜಾಕೆಟ್​​ ಹಾಕಿಕೊಂಡು ಆಟೋ ಓಡಿಸಿದ ಚಾಲಕ

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಕೆನಡಾ ಮೂಲದ ವ್ಯಕ್ತಿ ಕ್ಯಾಲೆಬ್ ಫ್ರೈಸೆನ್, ಯೂಟ್ಯೂಬ್ ಶೋ ರನ್‌ಟೈಮ್‌ಬಿಆರ್‌ಟಿ ಕಾರ್ಯಕ್ರಮದಲ್ಲಿ ಈ ಪರಿಕಲ್ಪನೆಯನ್ನು ಹೈ ಲೈಟ್ ಮಾಡಿದ ಬಳಿಕ ಈ ವಿಡಿಯೋ ಮತ್ತಷ್ಟು ಎಲ್ಲರ ಗಮನ ಸೆಳೆದಿದೆ. ತಮ್ಮ ಅನುಭವವನ್ನು ಹಂಚಿಕೊಂಡಿದ್ದು, @HNitisvaar ಅವರ ಗ್ರ್ಯಾಂಡ್ ಥೆಫ್ಟ್ ಆಟೋರಿಕ್ಷಾ ಪ್ರಾಂಪ್ಟ್ ಅನ್ನು ಮೊದಲ ವ್ಯಕ್ತಿಯ ದೃಷ್ಟಿಕೋನದಿಂದ ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.

ರನ್‌ಟೈಮ್‌ಬಿಆರ್‌ಟಿ ಕಾರ್ಯಕ್ರಮದ ತುಣುಕು ಇಲ್ಲಿದೆ

ಇದನ್ನೂ ಓದಿ:Viral: ಗೇಮಿಂಗ್ ಚೇರ್ ಅಳವಡಿಸಿಕೊಂಡ ಬೆಂಗಳೂರಿನ ಆಟೋ ಡ್ರೈವರ್

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡಿ, ಇಂತಹ ಎಐ ರಚಿತ ಆಟೋರಿಕ್ಷಾ ಆಟದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರ ತಮ್ಮ ದೈನಂದಿನ ಪ್ರಯಾಣದ ಸಮಯ ಹಾಗೂ ಹತಾಶೆಗಳನ್ನು ಕೊಲ್ಲಲು ಈ ಆಟ ಆಡಲು ಇಷ್ಟ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಇದು ನೋಡುವುದಕ್ಕೆ ತುಂಬಾನೇ ಚೆನ್ನಾಗಿದೆ. ಖಂಡಿತ ಇದನ್ನು ಆಡಲು ಇಷ್ಟ ಪಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಇದು ತುಂಬಾ ಇಷ್ಟ ಆಯ್ತು, ಬೀದಿ ನಾಯಿಯೊಂದು ನನ್ನನ್ನು ಬೆನ್ನಟ್ಟಿದರೆ ಇದು ಹುಚ್ಚು ಹಿಡಿಸುತ್ತದೆ ಎಂದು ತಮಾಷೆಯಾಗಿಯೇ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Wed, 10 September 25