Viral Video: ತಿಂಗಳಿಗೆ 80,000 ರೂ. ಗಳಿಸುವ ಬೆಂಗಳೂರಿನ ಉಬರ್ ಬೈಕ್ ಚಾಲಕ; ವಿಡಿಯೋ ವೈರಲ್​​

|

Updated on: Dec 10, 2024 | 11:03 AM

ಬೆಂಗಳೂರಿನ ಉಬರ್ ಬೈಕ್ ಚಾಲಕನೊಬ್ಬ ತಿಂಗಳಿಗೆ 80,000 ರೂಪಾಯಿಗಳನ್ನು ಗಳಿಸುತ್ತಿದ್ದೇನೆ ಎಂದು ಹೇಳಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದಿನಕ್ಕೆ 13 ಗಂಟೆ ಕೆಲಸ ಮಾಡುವ ಈ ಚಾಲಕ "ನನಗೆ ಯಾರಿಂದಲೂ ಒತ್ತಡವಿಲ್ಲ, ಇಲ್ಲಿ ನನಗೆ ನಾನೇ ಮಾಲೀಕ" ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

Viral Video: ತಿಂಗಳಿಗೆ 80,000 ರೂ. ಗಳಿಸುವ ಬೆಂಗಳೂರಿನ ಉಬರ್ ಬೈಕ್ ಚಾಲಕ; ವಿಡಿಯೋ ವೈರಲ್​​
Bengaluru Uber Bike Driver
Follow us on

ಬೆಂಗಳೂರು ಮೂಲದ ಉಬರ್ ಬೈಕ್ ಚಾಲಕನೊಬ್ಬ ತಾನು ತಿಂಗಳಿಗೆ 80,000 ರೂ. ಗಳಿಸುವುದಾಗಿ ಹೇಳಿಕೊಂಡಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ. ಈತನ ತಿಂಗಳ ಸಂಬಳ ಕೇಳಿ ನೆಟ್ಟಿಗರು ಶಾಕ್​ ಆಗಿದ್ದಾರೆ. ಕರ್ನಾಟಕ ಪೋರ್ಟ್‌ಫೋಲಿಯೊ (@karnatakaportf) ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ಹರಿದಾಡುತ್ತಿದೆ.

ವೈರಲ್​​ ಆಗಿರುವ ವಿಡಿಯೋದಲ್ಲಿ ಉಬರ್ ಬೈಕ್ ಚಾಲಕ ಹಿಂದಿಯಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು. ನಾನು ದಿನಕ್ಕೆ 13 ಗಂಟೆಗಳ ಕಾಲ ಕೆಲಸ ಮಾಡಿ, ತಿಂಗಳಿಗೆ ಸುಮಾರು 80,000 ರೂ. ಗಳಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾನೆ. ಇದಲ್ಲದೆ “ನನಗೆ ಯಾವುದೇ ಯಾರಿಂದಲೂ ಒತ್ತಡವಿಲ್ಲ, ನನಗೆ ಯಾರು ಹೇಳೋರು ಇಲ್ಲ, ಇಲ್ಲಿ ನನಗೆ ನಾನೇ ಮಾಲೀಕ” ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಫುಡ್‌ ಡೆಲಿವರಿ ಆ್ಯಪ್‌ನ ಬಿಲ್‌ಬೋರ್ಡ್‌ ಬೆನ್ನಿಗೆ ಕಟ್ಟಿ ಬೀದಿಯಲ್ಲಿ ಅಡ್ಡಾಡಿದ ಬೆಂಗಳೂರು ಯುವಕರು

ಡಿಸೆಂಬರ್​ 04ರಂದು ವಿಡಿಯೋ ಹಂಚಿಕೊಳ್ಳಲಾಗಿದ್ದು, ಕೇವಲ 5 ದಿನಗಳಲ್ಲಿ 6ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಉಬರ್ ಬೈಕ್ ಚಾಲಕನ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ