
ಬೆಂಗಳೂರು, ಸೆಪ್ಟೆಂಬರ್ 12: ಕೆಲವರಿಗೆ ಕನ್ನಡವೆಂದರೆ ಅದೇನೋ ಹುಚ್ಚು ಅಭಿಮಾನ. ಹೀಗಾಗಿ ಹೊರರಾಜ್ಯದಿಂದ ಬೆಂಗಳೂರಿಗೆ (Bengaluru) ಉದ್ಯೋಗ ಅರಸಿ ಬಂದವರು ಕೂಡ ಇಲ್ಲಿನ ಜನರೊಂದಿಗಗೆ ಬೆರೆತು ಕನ್ನಡ ಕಲಿಯುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಕೆಲವರು ಅತ್ಯದ್ಭುತವಾಗಿ ಕನ್ನಡ ಮಾತನಾಡುವುದನ್ನು ನೋಡಿದಾಗ ನಿಜಕ್ಕೂ ಖುಷಿಯಾಗುತ್ತದೆ. ಕನ್ನಡದ ಮೇಲಿನ ಅಭಿಮಾನ, ಭಾಷೆಯ ಮೇಲಿನ ಪ್ರೀತಿ ನೋಡಿದಾಗ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಆದರೆ ಇದೀಗ ಪಶ್ಚಿಮ ಬಂಗಾಳದ ವಿದ್ಯಾರ್ಥಿಯೊಬ್ಬರು (West Bengal student) ಬೆಂಗಳೂರು ನಗರದಲ್ಲಿ ಮಳಿಗೆ ಸೇರಿದಂತೆ ಅಂಗಡಿಗಳಲ್ಲಿ ಕನ್ನಡ ನಾಮಫಲಕಕ್ಕೆ ಒತ್ತು ನೀಡುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೂ ಕನ್ನಡ ಭಾಷೆ ಕಲಿಯುವ ಹಂಬಲವಿದೆ ಎಂದು ಹೇಳಿದ್ದಾರೆ. ಕನ್ನಡ ಭಾಷೆ ಕಲಿಯಬೇಕೆನಿಸಿದ್ದು ಯಾಕೆ ಎಂದು ಹೇಳಿಕೊಂಡು ರೆಡ್ಡಿಟ್ ನಲ್ಲಿ ಈ ಬಗ್ಗೆ ರೆಡ್ಡಿಟ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
r/Bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಪಶ್ಚಿಮ ಬಂಗಾಳದ ವಿದ್ಯಾರ್ಥಿಯೊಬ್ಬರು ತನಗೆ ಕನ್ನಡ ಕಲಿಯಬೇಕು ಎಂದು ಹೇಳಿದ್ದಾರೆ. ಈ ಪೋಸ್ಟ್ ನಲ್ಲಿ ನಾನು ಪಶ್ಚಿಮ ಬಂಗಾಳದವನು. ಇತ್ತೀಚೆಗೆ ರಾಜರಾಜೇಶ್ವರಿ ನಗರದ ಬಳಿಯ ಪಿಜಿಗೆ ಕಾಲೇಜಿಗೆ ಹೋಗಲು ಸಲುವಾಗಿ ಸ್ಥಳಾಂತರಗೊಂಡಿದ್ದೇನೆ, ಇದೀಗ ಇಲ್ಲಿಗೆ ಬಂದು ಕೇವಲ 3 ದಿನಗಳು ಮಾತ್ರ ಕಳೆದಿವೆ. ಆದರೆ ನಾನು ಆ ‘ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ’ ಟ್ಯಾಗ್ ಅನ್ನು ನೋಡಿ ಈಗಾಗಲೇ ಆಕರ್ಷಿತನಾಗಿದ್ದೇನೆ. ಕನ್ನಡ ಜನರು ಅದ್ಭುತ ವ್ಯಕ್ತಿಗಳು ಎಂದಿದ್ದಾರೆ.
ಪ್ರತಿಯೊಂದು ಪ್ರಮುಖ ಅಂಗಡಿಗಳಾದ ಸ್ಟಾರ್‌ಬಕ್ಸ್, ಪೀಟರ್ ಇಂಗ್ಲೆಂಡ್, WROGN, KFC, ಹೀಗೆ ಯಾವುದೇ ಇರಲಿ. ನೀವು ಬ್ರ್ಯಾಂಡ್‌ನ ಹೆಸರನ್ನು ಇಂಗ್ಲಿಷ್ ಗಿಂತ ಮೊದಲು ಕನ್ನಡದಲ್ಲಿ ಪ್ರದರ್ಶಿಸುತ್ತಿದ್ದ ರೀತಿ ನೋಡಿ ಪ್ರಭಾವಿತನಾಗಿದ್ದೆ. ಈ ಕಾರಣದಿಂದಲೇ ನಾನು ಈಗ ಕನ್ನಡ ಕಲಿಯುವ ಹಂಬಲ ಹೊಂದಿದ್ದೇನೆ. ಮೊದಲನೇ ಸಲ ಇದು ತುಂಬಾ ಪ್ರಭಾವಶಾಲಿ ಅಂತ ನನಗೆ ಅನಿಸಿತು. ಬೆಂಗಳೂರಿನ ಇತರ ಗುಣಗಳ ಬಗ್ಗೆ ನಾನು ಯೋಚಿಸುವ ಅಗತ್ಯವಿಲ್ಲ. ಒಳ್ಳೆಯ ಕೆಲಸ, ಬೆಂಗಳೂರಿನ ಜನರು ಒಳ್ಳೆಯವರು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಒಂದು ತಿಂಗಳ ವಾಟರ್ ಬಿಲ್ ಇಷ್ಟೊಂದಾ? ರೊಚ್ಚಿಗೆದ್ದ ಬಾಡಿಗೆದಾರ, ಪೋಸ್ಟ್ ವೈರಲ್
ಈ ಪೋಸ್ಟ್ ಈಗಾಗಲೇ ಹಲವಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ಯಾವುದೇ ಭಾಷೆಯನ್ನು ಕಲಿಯಲು ಕಾಲೇಜು ಅತ್ಯುತ್ತಮ ಸಮಯ. ಅದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಈ ಪ್ರೀತಿಗೆ ತುಂಬಾ ಧನ್ಯವಾದಗಳು. ದಿನಗಳು ಕಳೆದಂತೆ ಈ ಭಾವನೆ ಬದಲಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮ ಊರಿಗೆ ನಿಮಗೆ ಸ್ವಾಗತ. ಕನ್ನಡ ಕಲಿಯಲು ಸುಲಭವಾದ ಭಾಷೆ. ನೀವು ಅದನ್ನು ಕಲಿಯಲು ಬಯಸಿದ್ದಕ್ಕೆ ನನಗೆ ಸಂತೋಷವಾಗಿದೆ. ನಿಮ್ಮ ಮೇಲಿನ ಈ ಗೌರವವನ್ನು ಉಳಿಸಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ