
ಬೆಂಗಳೂರು, ನ.15: ಬೆಂಗಳೂರಿನಲ್ಲಿ ವಾಹನಗಳು ರಸ್ತೆ ಇಳಿದ್ರೆ ಸಾಕು, ಒಂದಲ್ಲ ಒಂದು ಸಮಸ್ಯೆ ಉದ್ಭವಿಸುತ್ತದೆ. ಒಂದು ಟ್ರಾಫಿಕ್ (Bengaluru traffic) ಸಮಸ್ಯೆ, ಮತ್ತೊಂದು ಅಪಘಾತ, ಇದು ಬೆಂಗಳೂರಿನಲ್ಲಿ ಸರ್ವೆ ಸಾಮಾನ್ಯವಾಗಿದೆ. ಇದೀಗ ಬೈಯಪ್ಪನಹಳ್ಳಿ ಫ್ಲೈಓವರ್ ಬಳಿಯ ರಸ್ತೆಬದಿಯಲ್ಲಿ ಒಂದು ಅಪಘಾತ ನಡೆದಿದೆ. ಅಪಘಾತದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ರಾಂಗ್ ಸೈಡ್‌ನಲ್ಲಿ ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದು ಆಟೋ ಚಾಲಕನ ಜತೆಗೆ ಜಗಳಕ್ಕೆ ಇಳಿದಿದ್ದಾರೆ. ಇದೀಗ ಈ ವಿಚಾರವಾಗಿ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದು, ಬೆಂಗಳೂರಿನಲ್ಲಿ ಜನ, ವಾಹನ ದಟ್ಟಣೆ ಹೆಚ್ಚಿರುವ ಕಾರಣ ರಾಂಗ್ ಸೈಡ್ ಚಾಲನೆ, ರಸ್ತೆ ಶಿಸ್ತಿನ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಎಕ್ಸ್ನಲ್ಲಿ ಹಂಚಿಕೊಂಡಿರುವ ವಿಡಿಯೋದ ಪ್ರಕಾರ, ಮಹಿಳೆ ಸಂಚಾರ ನಿಯಮವನ್ನು ಉಲ್ಲಂಘಿಸಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ (ರಾಂಗ್ ಸೈಡ್) ಬಂದು ಆಟೋವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ದೃಶ್ಯದಲ್ಲಿ ತಪ್ಪು ಮಾಡಿದ ಮಹಿಳೆ ಆಟೋ ಚಾಲಕನಿಗೆ ರಸ್ತೆ ಮಧ್ಯೆ ನಿಂದಿಸಿದ್ದಾರೆ. ಈ ವೇಳೆ ಸಂಚಾರಿ ಪೊಲೀಸರು ಮಧ್ಯೆ ಪ್ರವೇಶಿಸಿ, ಮಹಿಳೆಯನ್ನು ಸುಮ್ಮನಿರುವಂತೆ, ಹಾಗೂ ಅವರ ತಪ್ಪಿನ ಬಗ್ಗೆ ಹೇಳಿದ್ರು, ಅದನ್ನು ಕೇಳಿಸಿಕೊಳ್ಳದೇ, ಆಟೋ ಚಾಲಕನಿಗೆ ಬಾಯಿಗೆ ಬಂದಂತೆ ಬೈಯುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಆಟೋ ಚಾಲಕ ಕೂಡ ವಾದಿಸಿದ್ದು, “ನಾನು ಸರಿಯಾದ ಸೈಡ್‌ನಲ್ಲಿ ಬಂದಿದ್ದೇನೆ. ನೀವು ರಾಂಗ್ ಸೈಡ್ನಿಂದ ಬಂದ ಡಿಕ್ಕಿ ಹೊಡೆದದ್ದು” ಎಂದು ಹೇಳಿದ್ರು, ಮಹಿಳೆ ಮಾತ್ರ ತನ್ನ ತಪ್ಪುನ್ನು ಸರಿ ಎಂದೇ ವಾದಿಸಿದ್ದಾರೆ.
Traffic chaos at Bayappanahalli Flyover: Woman drives wrong-way, crashes into auto, then screams, abuses & refuses blame. Cop tries de-escalation, auto driver stands firm—1km jam for ego. Roads need yield signs for pride too.
Both Kannadigas, so Olatas stay silent.… pic.twitter.com/ofCe5d0eg8
— ಸನಾತನ (@sanatan_kannada) November 14, 2025
ಇನ್ನು ಈ ಗಲಾಟೆಯಿಂದ ಈ ರಸ್ತೆಯಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೆ ಸಂಚಾರ ದಟ್ಟಣೆ ಉಂಟಾಗಿದೆ. ಈ ಕಿರಿದಾದ ರಸ್ತೆಯಲ್ಲಿ ಸಾಲು ಸಾಲು ವಾಹನಗಳು ಜಾಮ್ ಆಗಿದ್ದು, ಇವರ ಜಗಳದಿಂದ ಇತರ ವಾಹನ ಸವಾರರು ಪರದಾಡುವಂತಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವಸತಿ ದರ ಹೆಚ್ಚಳ, 2ಬಿಹೆಚ್‌ಕೆ ಮನೆಗೆ 1 ಕೋಟಿ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ
ಮಹಿಳೆಯ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಈ ರೀತಿಯ ಘಟನೆಗಳು ನಡೆದಾಗ ಒಮ್ಮೆ ಕಠಿಣ ಶಿಕ್ಷೆಯನ್ನು ನೀಡಿ, ಮುಂದೆ ಯಾರು ಕೂಡ ಇಂತಹ ತಪ್ಪು ಮಾಡುವುದಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು, ರಾಂಗ್ ಸೈಡ್‌ನಲ್ಲಿ ಬಂದ ಮಹಿಳೆಗೆ ಯಾಕೆ ದಂಡ ವಿಧಿಸಿಲ್ಲ, ತಪ್ಪು ಮಾಡದ ಆಟೋ ಚಾಲಕನಿಗೆ ನಿಂದಿಸುವ ಅಧಿಕಾರ ಆ ಮಹಿಳೆಗೆ ಯಾರು ನೀಡಿದ್ದು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ