AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನಾನು ಈ ಏರಿಯಾ ಡಾನ್‌; ಕಾರನ್ನು ಅಡ್ಡಗಟ್ಟಿ ಗೂಳಿಯ ದಾದಾಗಿರಿ

ಪ್ರಾಣಿಗಳು ಅಷ್ಟಾಗಿ ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ಕೆಲವೊಂದು ಬಾರಿ ಬೀದಿ ನಾಯಿಗಳು, ಬೀಡಾಡಿ ದನ, ಎತ್ತುಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಇಲ್ಲೊಂದು ಅಂತಹದ್ದೇ ಘಟನೆಯೊಂದು ನಡೆದಿದ್ದು, ಗೂಳಿಯೊಂದು ರಸ್ತೆಯಲ್ಲಿ ಹೋಗ್ತಿದ್ದ ಕಾರ್‌ ಮೇಲೆ ದಾಳಿ ನಡೆಸಲು ಮುಂದಾಗಿದೆ. ಹೌದು ಕಾರನ್ನು ಅಡ್ಡಗಟ್ಟಿ ಒಂಟಿ ಗೂಳಿ ಪೌರುಷ ತೋರಿದೆ. ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗುತ್ತಿದೆ.

Video: ನಾನು ಈ ಏರಿಯಾ ಡಾನ್‌; ಕಾರನ್ನು ಅಡ್ಡಗಟ್ಟಿ ಗೂಳಿಯ ದಾದಾಗಿರಿ
ಕಾರನ್ನು ತಡೆದು ನಿಲ್ಲಿಸಿದ ಗೂಳಿ
ಮಾಲಾಶ್ರೀ ಅಂಚನ್​
|

Updated on: Nov 15, 2025 | 4:39 PM

Share

ಹೆಚ್ಚಾಗಿ ಮನುಷ್ಯನೇ ಪ್ರಾಣಿಗಳಿಗೆ ತೊಂದರೆ ಕೊಡುತ್ತಿರುತ್ತಾರೆ. ಅಪರೂಪಕ್ಕೆ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ನಡೆಸುವ ಘಟನೆಗಳು ನಡೆಯುತ್ತಿರುತ್ತವೆ. ಹೌದು ಬೀದಿ ಬದಿಯಲ್ಲಿ ನಡೆದುಕೊಂಡು ಹೋಗುವವರ ಹಾಗೂ ಬೈಕ್‌ನಲ್ಲಿ ಹೋಗುವವ ಮೇಲೆ ಬೀದಿ ನಾಯಿಗಳು ದಾಳಿ ನಡೆಸುವ, ಆನೆ, ಬೀಡಾಡಿ ದನ, ಗೂಳಿಗಳು (bull) ಮನುಷ್ಯರನ್ನು ಅಟ್ಟಾಡಿಸಿಕೊಂಡು ಬರುವ ಘಟನೆಗಳು ಹಿಂದೆಯೂ ನಡೆದಿದೆ. ಪುಣೆಯ ಮುಲ್ಶಿಯಲ್ಲಿ ಇದೇ  ರೀತಿ ಘಟನೆಯೊಂದು ನಡೆದಿದ್ದು, ಬೀಡಾಡಿ ಗೂಳಿಯೊಂದು ನಾನು ಈ ಏರಿಯಾ ಡಾನ್‌ ಕಣೋ ಎನ್ನುತ್ತಾ ರಸ್ತೆಯಲ್ಲಿ ಹೋಗ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಪೌರುಷ ಮೆರೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕಾರನ್ನು ತಡೆದು ನಿಲ್ಲಿಸಿ ಗೂಳಿಯ ಪೌರುಷ:

ಪುಣೆಯ ಮುಲ್ಶಿಯ ಮಾನ್-ಘೋಟ್ವಾಡೆ ರಸ್ತೆಯಲ್ಲಿರುವ ಬಾಪುಜಿಬುವಾ ಘಾಟ್‌ನಲ್ಲಿ ಈ ಘಟನೆ ನಡೆದಿದ್ದು, ದಾರಿತಪ್ಪಿ ಗೂಳಿಯೊಂದು ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಹೋಗ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಅದರ ಮೇಲೆ ದಾಳಿ ಮಾಡಲು ಯತ್ನಿಸಿದೆ. ಗೂಳಿಯ ಅಟ್ಟಹಾಸಕ್ಕೆ ಕಾರು ಚಾಲಕ ಭಯಭೀತರಾಗಿದ್ದು, ಸರಿಯಾದ ಸಮಕ್ಕೆ ಬಂದಂತಹ ರಾಜಕೀಯ ನಾಯಕ ಬಾಬಾಜಿ ಶೆಲ್ಕೆ ಟ್ರ್ಯಾಕ್ಟರ್‌ ಏರಿ  ಗೂಳಿಯನ್ನು ಓಡಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.

ರಸ್ತೆ ಬದಿಯಲ್ಲಿ ನಿಂತಿದ್ದ ದೈತ್ಯ ಗೂಳಿ ಕಾರಿನ ಮೇಲೆ ದಾಳಿ ಮಾಡಿ ಅದು ಕಾರಿನ ಮುಂಭಾಗದ ಹೆಡ್‌ಲೈಟ್ ಅನ್ನು ಮುರಿಯಲು ಪ್ರಯತ್ನಿಸಿತು. ಈ ದಾಳಿಯಿಂದ ಹೇಗೆ ತಪ್ಪಿಸಿಕೊಂಡು ಹೋಗುವುದು ಎಂದು ದಿಕ್ಕು ತೋಚದೆ ಚಾರು ಚಾಲಕ ಕಾರೊಳಗೆಯೇ ಕುಳಿತಿದ್ದ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಬಂದು ರಾಜಕೀಯ  ಬಾಬಾಜಿ ಶೆಲ್ಕೆ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಹೌದು  ಪರಿಸ್ಥಿತಿ ಕೈ ಮೀರುತ್ತಿದ್ದಂತೆ, ಹತ್ತಿರದ ಟ್ರ್ಯಾಕ್ಟರ್ ಚಾಲಕನಿಗೆ ಗೂಳಿಯನ್ನು ದೂರ ಸರಿಸಲು ವಿನಂತಿಸಲಾಯಿತು, ಆದರೆ, ಭಯದಿಂದಾಗಿ ಟ್ರ್ಯಾಕ್ಟರ್ ಚಾಲಕ ಮುಂದೆ ಬರಲು ಸಿದ್ಧರಿರಲಿಲ್ಲ. ಕೊನೆಗೆ  ಬಾಬಾಜಿ ಶೆಲ್ಕೆ ಸ್ವತಃ ಟ್ರ್ಯಾಕ್ಟರ್‌ ಏರಿ ಅದರ ಸಹಾಯದಿಂದ ಗೂಳಿಯನ್ನು ಅಲ್ಲಿಂದ ಓಡಿಸಿದ್ದಾರೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಕಾಳು ನೀಡಿ ಹಸಿವು ನೀಗಿಸಿದ ಮಹಿಳೆಯೊಂದಿಗೆ ಜಗಳಕ್ಕಿಳಿದ ಪಕ್ಷಿ

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಗೂಳಿಯೊಂದು ನಡು ರಸ್ತೆಯಲ್ಲಿ ಕಾರನ್ನು ತಡೆದು ನಿಲ್ಲಿಸಿ ಪೌರುಷ ಮೆರೆಯುತ್ತಿರುವ ದೃಶ್ಯವನ್ನು ಕಾಣಬಹುದು. ಇನ್ನೇನು ಪರಿಸ್ಥಿತಿ ಕೈ ಮೀರುತ್ತಿದೆ ಎನ್ನುವಷ್ಟರಲ್ಲಿ ಸ್ಥಳಕ್ಕಾಗಮಿಸಿದ  ಬಾಬಾಜಿ ಶೆಲ್ಕೆ ಸ್ವತಃ ತಾವೇ ಟ್ರ್ಯಾಕ್ಟರ್‌ ಏರಿ ಮುಂದಿನಿಂದ ಟ್ರ್ಯಾಕ್ಟರ್‌ ಓಡಿಸುತ್ತಾ ಬಂದು ಗೂಳಿಯನ್ನು ಓಡಿಸಿದ್ದಾರೆ.

ಈ ಪ್ರದೇಶದಲ್ಲಿ ಬೀಡಾಡಿ ಪ್ರಾಣಿಗಳ ಸಮಸ್ಯೆ ತುಂಬಾ ಗಂಭೀರವಾಗುತ್ತಿದೆ ಮತ್ತು ಅರಣ್ಯ ಇಲಾಖೆಗೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಬಾಬಾಜಿ ಶೆಲ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ