AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video; ರಾಂಗ್ ಸೈಡ್​​​ನಲ್ಲಿ ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಜಗಳಕ್ಕೆ ಇಳಿದ ಮಹಿಳೆ

ಬೆಂಗಳೂರಿನ ಬೈಯಪ್ಪನಹಳ್ಳಿ ಬಳಿ ಮಹಿಳೆಯೊಬ್ಬರು ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿ ಆಟೋಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ನಂತರ ಆಟೋ ಚಾಲಕನೊಂದಿಗೆ ಜಗಳಕ್ಕಿಳಿದು ನಿಂದಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಂಚಾರಿ ಪೊಲೀಸರ ಮಧ್ಯಸ್ಥಿಕೆ ಹೊರತಾಗಿಯೂ ಮಹಿಳೆ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಈ ಘಟನೆ ಭಾರೀ ಸಂಚಾರ ದಟ್ಟಣೆಗೆ ಕಾರಣವಾಗಿದ್ದು, ನೆಟ್ಟಿಗರು ರಾಂಗ್ ಸೈಡ್ ಚಾಲನೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

Video; ರಾಂಗ್ ಸೈಡ್​​​ನಲ್ಲಿ ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ಜಗಳಕ್ಕೆ ಇಳಿದ ಮಹಿಳೆ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Nov 15, 2025 | 11:26 AM

Share

ಬೆಂಗಳೂರು, ನ.15: ಬೆಂಗಳೂರಿನಲ್ಲಿ ವಾಹನಗಳು ರಸ್ತೆ ಇಳಿದ್ರೆ ಸಾಕು, ಒಂದಲ್ಲ ಒಂದು ಸಮಸ್ಯೆ ಉದ್ಭವಿಸುತ್ತದೆ. ಒಂದು ಟ್ರಾಫಿಕ್ (Bengaluru traffic)​​ ಸಮಸ್ಯೆ, ಮತ್ತೊಂದು ಅಪಘಾತ, ಇದು ಬೆಂಗಳೂರಿನಲ್ಲಿ ಸರ್ವೆ ಸಾಮಾನ್ಯವಾಗಿದೆ. ಇದೀಗ ಬೈಯಪ್ಪನಹಳ್ಳಿ ಫ್ಲೈಓವರ್ ಬಳಿಯ ರಸ್ತೆಬದಿಯಲ್ಲಿ ಒಂದು ಅಪಘಾತ ನಡೆದಿದೆ. ಅಪಘಾತದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ರಾಂಗ್ ಸೈಡ್​​​ನಲ್ಲಿ ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದು ಆಟೋ ಚಾಲಕನ ಜತೆಗೆ ಜಗಳಕ್ಕೆ ಇಳಿದಿದ್ದಾರೆ. ಇದೀಗ ಈ ವಿಚಾರವಾಗಿ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್​​​ ಮಾಡಿದ್ದು, ಬೆಂಗಳೂರಿನಲ್ಲಿ ಜನ, ವಾಹನ ದಟ್ಟಣೆ ಹೆಚ್ಚಿರುವ ಕಾರಣ ರಾಂಗ್ ಸೈಡ್ ಚಾಲನೆ, ರಸ್ತೆ ಶಿಸ್ತಿನ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಎಕ್ಸ್​​ನಲ್ಲಿ ಹಂಚಿಕೊಂಡಿರುವ ವಿಡಿಯೋದ ಪ್ರಕಾರ, ಮಹಿಳೆ ಸಂಚಾರ ನಿಯಮವನ್ನು ಉಲ್ಲಂಘಿಸಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ (ರಾಂಗ್ ಸೈಡ್) ಬಂದು ಆಟೋವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ದೃಶ್ಯದಲ್ಲಿ ತಪ್ಪು ಮಾಡಿದ ಮಹಿಳೆ ಆಟೋ ಚಾಲಕನಿಗೆ ರಸ್ತೆ ಮಧ್ಯೆ ನಿಂದಿಸಿದ್ದಾರೆ. ಈ ವೇಳೆ ಸಂಚಾರಿ ಪೊಲೀಸರು ಮಧ್ಯೆ ಪ್ರವೇಶಿಸಿ, ಮಹಿಳೆಯನ್ನು ಸುಮ್ಮನಿರುವಂತೆ, ಹಾಗೂ ಅವರ ತಪ್ಪಿನ ಬಗ್ಗೆ ಹೇಳಿದ್ರು, ಅದನ್ನು ಕೇಳಿಸಿಕೊಳ್ಳದೇ, ಆಟೋ ಚಾಲಕನಿಗೆ ಬಾಯಿಗೆ ಬಂದಂತೆ ಬೈಯುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಆಟೋ ಚಾಲಕ ಕೂಡ ವಾದಿಸಿದ್ದು, “ನಾನು ಸರಿಯಾದ ಸೈಡ್​​​ನಲ್ಲಿ ಬಂದಿದ್ದೇನೆ. ನೀವು ರಾಂಗ್ ಸೈಡ್​​​ನಿಂದ ಬಂದ ಡಿಕ್ಕಿ ಹೊಡೆದದ್ದು” ಎಂದು ಹೇಳಿದ್ರು, ಮಹಿಳೆ ಮಾತ್ರ ತನ್ನ ತಪ್ಪುನ್ನು ಸರಿ ಎಂದೇ ವಾದಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇನ್ನು ಈ ಗಲಾಟೆಯಿಂದ ಈ ರಸ್ತೆಯಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೆ ಸಂಚಾರ ದಟ್ಟಣೆ ಉಂಟಾಗಿದೆ. ಈ ಕಿರಿದಾದ ರಸ್ತೆಯಲ್ಲಿ ಸಾಲು ಸಾಲು ವಾಹನಗಳು ಜಾಮ್​​ ಆಗಿದ್ದು, ಇವರ ಜಗಳದಿಂದ ಇತರ ವಾಹನ ಸವಾರರು ಪರದಾಡುವಂತಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದ್ದಂತೆ ಪೊಲೀಸರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಸತಿ ದರ ಹೆಚ್ಚಳ, 2ಬಿಹೆಚ್‌ಕೆ ಮನೆಗೆ 1 ಕೋಟಿ ರೂ; ವಾಸ್ತವ ಸ್ಥಿತಿ ಬಿಚ್ಚಿಟ್ಟ ವ್ಯಕ್ತಿ

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:

ಮಹಿಳೆಯ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಈ ರೀತಿಯ ಘಟನೆಗಳು ನಡೆದಾಗ ಒಮ್ಮೆ ಕಠಿಣ ಶಿಕ್ಷೆಯನ್ನು ನೀಡಿ, ಮುಂದೆ ಯಾರು ಕೂಡ ಇಂತಹ ತಪ್ಪು ಮಾಡುವುದಿಲ್ಲ ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬರು, ರಾಂಗ್ ಸೈಡ್​​ನಲ್ಲಿ ಬಂದ ಮಹಿಳೆಗೆ ಯಾಕೆ ದಂಡ ವಿಧಿಸಿಲ್ಲ, ತಪ್ಪು ಮಾಡದ ಆಟೋ ಚಾಲಕನಿಗೆ ನಿಂದಿಸುವ ಅಧಿಕಾರ ಆ ಮಹಿಳೆಗೆ ಯಾರು ನೀಡಿದ್ದು ಎಂದು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 13: ವೈಲ್ಡ್ ಕಾರ್ಡ್ ಮೂಲಕ ಕಾಮನರ್ ಕುಮಾರಿ ಎಂಟ್ರಿ
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ತುಮಕೂರು: ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿದ್ಧಗಂಗಾ ಶ್ರೀಗಳು
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ನೇಪಾಳದ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!
ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ: ಮುರಿದುಬಿದ್ದ ನಂದಿ ಧ್ವಜ ಕಂಬ!