AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕಾಳು ನೀಡಿ ಹಸಿವು ನೀಗಿಸಿದ ಮಹಿಳೆಯೊಂದಿಗೆ ಜಗಳಕ್ಕಿಳಿದ ಪಕ್ಷಿ

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ ಪಕ್ಷಿ ಸಾಮ್ರಾಜ್ಯಕ್ಕೆ ಸಂಬಂಧ ಪಟ್ಟ ವಿಡಿಯೋ ವೈರಲ್ ಆಗುತ್ತಿರುತ್ತವೆ. ಮನೆಯಲ್ಲಿ ಸಾಕಿದ ಪಕ್ಷಿಗಳನ್ನು ಹೊರತು ಪಡಿಸಿ ಸ್ವಚ್ಛಂದವಾಗಿ ಹಾರಾಡುವ ಪುಟ್ಟ ಹಕ್ಕಿಗಳು ಮನುಷ್ಯರ ಮಾತಿಗೆ ಪ್ರತಿಕ್ರಿಯಿಸುವುದನ್ನು ನೀವು ನೋಡಿದ್ದೀರಾ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಮಹಿಳೆಯೊಬ್ಬಳ ಮಾತಿಗೆ ಮುದ್ದಾಗಿ ಪ್ರತಿಕ್ರಿಯೆ ನೀಡುವ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Video: ಕಾಳು ನೀಡಿ ಹಸಿವು ನೀಗಿಸಿದ ಮಹಿಳೆಯೊಂದಿಗೆ ಜಗಳಕ್ಕಿಳಿದ ಪಕ್ಷಿ
ವೈರಲ್‌ ವಿಡಿಯೋImage Credit source: Twitter
ಸಾಯಿನಂದಾ
|

Updated on:Nov 14, 2025 | 12:43 PM

Share

ಮನುಷ್ಯರಿಗಿಂತ (Human) ಪ್ರಾಣಿ ಪಕ್ಷಿಗಳೇ ಲೇಸು. ಒಂದು ತುತ್ತು ಅನ್ನ ಹಾಕಿದರೆ ಸಾಕು, ಜೀವಂತ ಪರ್ಯಂತ ನೆನಪಿನಲ್ಲಿಟ್ಟುಕೊಳ್ಳುತ್ತವೆ. ತಮ್ಮನ್ನು ಕಾಳಜಿ ವಹಿಸುವ ಜೀವವನ್ನು ಹಚ್ಚಿಕೊಂಡು ಬಿಡುತ್ತವೆ. ಇದೀಗ ಮಾನವ ಹಾಗೂ ಪಕ್ಷಿಯ (Bird) ಸ್ನೇಹಪರ ಸಂಬಂಧವನ್ನು ತೋರಿಸುವ ದೃಶ್ಯವೊಂದು ವೈರಲ್ ಆಗಿದೆ. ಮಹಿಳೆಯೊಬ್ಬಳು ಮನೆಯ ಹತ್ತಿರ ಹಾರಿ ಬಂದು ಕುಳಿತಿರುವ ಪಕ್ಷಿಗಳೊಂದಿಗೆ ಸಂಭಾಷಣೆ ನಡೆಸಿದ್ದಾಳೆ. ಪಕ್ಷಿಯೊಂದು ಆಕೆಯ ಮಾತಿಗೆ ಪ್ರತಿಕ್ರಿಯಿಸುತ್ತಾ ಜಗಳಕ್ಕೆ ಇಳಿದ್ದಂತಿದೆ ಈ ದೃಶ್ಯ. ಈ ಹೃದಯ ಸ್ಪರ್ಶಿ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಿಳೆಯೊಂದಿಗೆ ಜಗಳವಾಡಿದ ಪಕ್ಷಿ

@shaheena451 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋಗೆ ಹಕ್ಕಿ ಭಯಪಡುವ ಬದಲು ತನ್ನ ಅಧಿಕಾರವನ್ನು ಪ್ರತಿಪಾದಿಸುವಷ್ಟು ನಂಬಿಕೆಯನ್ನು ಸಹೋದರಿ ಹೇಗೆ ಗಳಿಸಿದಳು?, ತುಂಬಾ ಸುಂದರವಾಗಿದೆ. ಅವಳು ಪ್ರಕೃತಿಯನ್ನೇ ಗೆದ್ದಿದ್ದಾಳೆ ಎಂದು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಮನೆಯ ಬಾಲ್ಕನಿಯಲ್ಲಿ ಹಕ್ಕಿಗಳು ಬಂದು ಕುಳಿತಿರುವುದನ್ನು ನೋಡಬಹುದು. ಅದರಲ್ಲಿ ಒಂದು ಪಕ್ಷಿ ಮಹಿಳೆಯೊಂದಿಗೆ ಮುದ್ದಾಗಿ ಸಂಭಾಷಣೆ ನಡೆಸುವುದನ್ನು ಕಾಣಬಹುದು. ಪಕ್ಷಿಯು ಮಹಿಳೆಯ ಮೇಲೆ ಪ್ರೀತಿಯನ್ನು ತೋರುತ್ತಾ ಆಕೆಯ ಮುಂದೆಯೇ ಕುಳಿತು ಏನೋ ಹೇಳುವುದನ್ನು ಕಾಣಬಹುದು. ಆದರೆ ಈ ಮಹಿಳೆ ಮಾತ್ರ ಧ್ವನಿ ಏರಿಸಿ ಮಾತನಾಡುತ್ತಾಳೆ. ತನ್ನ ಕೈಯಿಂದ ಅದನ್ನು ತಳ್ಳುತ್ತಾಳೆ. ಇದರಿಂದ ಹಕ್ಕಿಯೂ ಕೂಡ ಕೋಪವನ್ನು ವ್ಯಕ್ತಪಡಿಸುವಂತೆ ಈ ದೃಶ್ಯವಿದೆ. ತನ್ನದೇ ಭಾಷೆಯಲ್ಲಿ ಬೈಯಲು ಶುರುವಿಟ್ಟ ಪಕ್ಷಿಯ ಕೋಪವನ್ನು ಅರಿತುಕೊಂಡ ಮಹಿಳೆಯೂ ಬಾಯಿಮುಚ್ಚುವಂತೆ ಗದರುವುದನ್ನು ನೋಡಬಹುದು.

ಇದನ್ನೂ ಓದಿ:ಪಂಜರದಲ್ಲಿ ಬಂಧಿಸಿದ್ದ ಪಕ್ಷಿಗಳನ್ನು ಸ್ವತಂತ್ರವಾಗಿ ಹಾರಲು ಬಿಟ್ಟು ಖುಷಿ ಪಟ್ಟ ವ್ಯಕ್ತಿ

ನವೆಂಬರ್ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಇದುವರೆಗೆ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಜಕ್ಕೂ ಅದ್ಭುತವಾಗಿದೆ, ಪ್ರತಿಯೊಂದು ಪದವು ಅರ್ಥಪೂರ್ಣ ಹಾಗೂ ಶಾಂತವಾಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಹೃದಯ ಸ್ಪರ್ಶಿ ದೃಶ್ಯ ಎಂದರೆ, ಮತ್ತೊಬ್ಬರು ಈ ಪ್ರಾಣಿ ಪಕ್ಷಿಗಳೊಂದಿಗೆ ನೀವು ಬೆರೆತರೆ ಅವು ನಿಮ್ಮೊಂದಿಗೆ ಬೆರೆತು ಹೋಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Fri, 14 November 25