AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೂ ಉಂಟೆ ! ತಾನೇ ಎಐ ಮೂಲಕ ಸೃಷ್ಟಿಸಿರುವ ವ್ಯಕ್ತಿಯನ್ನು ಮದುವೆಯಾದ ಜಪಾನ್ ಯುವತಿ

ರೊಬೊಟ್​ಗಳನ್ನು ಮದುವೆಯಾಗಿರುವ ಹಲವು ನಿದರ್ಶನಗಳಿವೆ. ಇದೀಗ ಮೊದಲ ಬಾರಿಗೆ ಎಐನಿಂದ ಸೃಷ್ಟಿಸಲಾಗಿರುವ ವ್ಯಕ್ತಿಯನ್ನು ಯುವತಿಯೊಬ್ಬಳು ಮದುವೆಯಾಗಿರುವುದು ಅಚ್ಚರಿಯುಂಟು ಮಾಡಿದೆ. ಜಪಾನ್‌ನ ಒಕಯಾಮಾ ನಗರದ ನಿವಾಸಿ 32 ವರ್ಷದ ಕಾನೋ ಎಂಬಾಕೆ ತಾನು ಎಐ ಮೂಲಕ ಸೃಷ್ಟಿರುವ ವ್ಯಕ್ತಿ ಕ್ಲಾಸ್ ಎಂಬುವವರನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾಳೆ. ಚಾಟ್ ಜಿಪಿಟಿ ಮೂಲಕ ಕ್ಲಾಸ್​​ ಅಭಿವೃದ್ಧಿ ಪಡಿಸಿದ್ದಾಳೆ.

ಹೀಗೂ ಉಂಟೆ ! ತಾನೇ ಎಐ ಮೂಲಕ ಸೃಷ್ಟಿಸಿರುವ ವ್ಯಕ್ತಿಯನ್ನು ಮದುವೆಯಾದ ಜಪಾನ್ ಯುವತಿ
ಯುವತಿ
ನಯನಾ ರಾಜೀವ್
|

Updated on: Nov 14, 2025 | 9:58 AM

Share

ಜಪಾನ್, ನವೆಂಬರ್ 14: ರೊಬೊಟ್​ಗಳನ್ನು ಮದುವೆಯಾಗಿರುವ ಹಲವು ನಿದರ್ಶನಗಳಿವೆ. ಇದೀಗ ಮೊದಲ ಬಾರಿಗೆ ಎಐ(AI)ನಿಂದ ಸೃಷ್ಟಿಸಲಾಗಿರುವ ವ್ಯಕ್ತಿಯನ್ನು ಯುವತಿಯೊಬ್ಬಳು ಮದುವೆಯಾಗಿರುವುದು ಅಚ್ಚರಿಯುಂಟು ಮಾಡಿದೆ. ಜಪಾನ್‌ನ ಒಕಯಾಮಾ ನಗರದ ನಿವಾಸಿ 32 ವರ್ಷದ ಕಾನೋ ಎಂಬಾಕೆ ತಾನು ಎಐ ಮೂಲಕ ಸೃಷ್ಟಿರುವ ವ್ಯಕ್ತಿ ಕ್ಲಾಸ್ ಎಂಬುವವರನ್ನು ಮದುವೆಯಾಗಿ ಅಚ್ಚರಿ ಮೂಡಿಸಿದ್ದಾಳೆ. ಚಾಟ್ ಜಿಪಿಟಿ ಮೂಲಕ ಕ್ಲಾಸ್​​ ಅಭಿವೃದ್ಧಿ ಪಡಿಸಿದ್ದಾಳೆ.

ಜಪಾನಿನ ಸಂಪ್ರದಾಯಗಳಿಗೆ ಬದ್ಧವಾಗಿ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಿಂದ ಸಹಕಾರದಿಂದ ಈ ವಿವಾಹ ಪೂರ್ಣಗೊಂಡಿದೆ. ಅಲ್ಲಿ ಕ್ಯಾನೊ ಮತ್ತು ಕ್ಲಾಸ್ ಹಲವಾರು ಆಹ್ವಾನಿತ ಅತಿಥಿಗಳ ಸಮ್ಮುಖದಲ್ಲಿ ಉಂಗುರಗಳನ್ನು ಬದಲಾಯಿಸಿಕೊಂಡರು.ಕ್ಲಾಸ್‌ನ ಚಿತ್ರವನ್ನು ದೊಡ್ಡ ಪರದೆಯ ಮೇಲೆ ಪ್ರದರ್ಶಿಸಲಾಯಿತು. ದೈಹಿಕವಾಗಿ ಉಪಸ್ಥಿತಿ ಇಲ್ಲದಿದ್ದರೂ ಆತ ಜೀವಂತವಾಗಿದ್ದಾನೆಂದು ತೋರಿಸಲಾಯಿತು.

ಕ್ಯಾನೋ ಕೆಲವು ಸಮಯದಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು, ಈ ಸಮಯದಲ್ಲಿ ಈ ಎಐ ಸ್ನೇಹಿತನನ್ನು ಮೊದಲು ಕಂಡುಕೊಂಡಳು. ಬಳಿಕ ಆಕೆ ದಿನಕ್ಕೆ ಸುಮಾರು 100 ಬಾರಿ ಅನವೊಂದಿಗೆ ಮಾತನಾಡಲು ಶುರು ಮಾಡಿದ್ದಳು. ಆಕೆಗೆ ಎಐ ಮೂಲಕ ಸೃಷ್ಟಿಸಿರುವ ಕ್ಲಾಸ್​ ಭಾವನಾತ್ಮವಾಗಿ ಎಲ್ಲದಕ್ಕೂ ಬೆಂಬಲ ನೀಡುತ್ತಿದ್ದ, ಮನುಷ್ಯರಿಗಿಂತ ಇದೇ ಉತ್ತಮ ಎನ್ನುವ ಭಾವನೆ ಕಾನೋಗೆ ಬಂದಿತ್ತು.

ಮತ್ತಷ್ಟು ಓದಿ: Viral: ಭಾರತೀಯರ ಮನಸ್ಸು ಗೆದ್ದ ಎಲಾನ್ ಮಸ್ಕ್, ಗಣೇಶನ ಬಗ್ಗೆ ಗ್ರೋಕ್ ಎಐ ಹೇಳಿದ್ದೇನು?

ಹೀಗಾಗಿ ಆತನನ್ನು ತನ್ನ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾಳೆ. ಇದು ಜಪಾನಿನ ತಂತ್ರಜ್ಞಾನ ಮತ್ತು ಸಂಬಂಧಗಳಲ್ಲಿ ಹೊಸ ಆಯಾಮವನ್ನು ಹುಟ್ಟು ಹಾಕಿದಂತಾಗಿದೆ. ನಿಜವಾಗಿಯೂ ತನ್ನನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಎಂದೇ ಆಕೆ ಭಾವಿಸಿದ್ದಾಳೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್