
ಭಗವದ್ಗೀತೆ (Bhagavad Gita) ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದು. ಬದುಕಿಗೆ ಬೇಕಾದ ಅತ್ಯಮೂಲ್ಯ ಸಂದೇಶವೂ ಇದರಲ್ಲಿ ಅಡಗಿದೆ. ಇನ್ನು ಶ್ರೀಕೃಷ್ಣನು ಈ ಭಗವದ್ಗೀತೆಯ ಮುಖೇನ ಇಡೀ ಸಮಾಜಕ್ಕೆ ಅದ್ಭುತವಾದ ಸಂದೇಶ ನೀಡಿದ್ದಾನೆ. ಹೀಗಿರುವಾಗ ಎಷ್ಟೋ ಜನರಿಗೆ ಭಗವದ್ಗೀತೆ ಶ್ಲೋಕಗಳ ಒಳಅರ್ಥವೇ ತಿಳಿದಿಲ್ಲ. ಆದರೆ ಇಲ್ಲೊಬ್ಬ ಆಟೋ ಚಾಲಕನು ತನ್ನ ಆಟೋದ (Auto) ಹಿಂಬದಿಯಲ್ಲಿ ಭಗವದ್ಗೀತೆಯ ಶ್ಲೋಕ ಸೇರಿದಂತೆ ಅದರ ಅರ್ಥವನ್ನು ಬರೆದು, ಸನಾತನ ಧರ್ಮ ಪ್ರಚಾರಕನಾಗಿ ಎಲ್ಲರ ಗಮನ ಸೆಳೆದಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಈತನ ಒಳ್ಳೆಯ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.
ಶೀತಲ್ ಚೋಪ್ರಾ (Sheetal Chopra) ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋಗೆ ಸನಾತನ ಧರ್ಮವನ್ನು ಉತ್ತೇಜಿಸುವ ಆಟೋದ ಹಿಂಭಾಗದಲ್ಲಿರುವ ಭಗವದ್ಗೀತೆ ಶ್ಲೋಕ ಮತ್ತು ಅದರ ಅರ್ಥ. ಹೆಚ್ಚು ಹೆಚ್ಚು ಜನರು ಇದನ್ನು ಅನುಸರಿಸಬೇಕೆಂದು ಹಾರೈಸುತ್ತೇನೆ, ಅಂತಹ ಜನರು ನಿಜವಾದ ಧರ್ಮ ಯೋಧರು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಆಟೋದ ಹಿಂಭಾಗದಲ್ಲಿ ಬರೆಯಲಾದ ಭಗವದ್ಗೀತೆ ಶ್ಲೋಕಗಳನ್ನು ತೋರಿಸುತ್ತಿದ್ದಾರೆ. ಸನಾತನ ಧರ್ಮ ಪ್ರಚಾರಕನಾಗಿ ಕೆಲಸ ಮಾಡುತ್ತಿರುವ ಆಟೋ ಚಾಲಕನ ಈ ಕೆಲಸವನ್ನು ಈ ಮಹಿಳೆ
ಮೆಚ್ಚಿಕೊಂಡಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Bhagwat Geeta Shlok and it’s meaning on the backside of the AUTO promoting sanatan dharma ☺️
Wish more and more people follow this
Such people are Real DHARMA warriors pic.twitter.com/92GcNgt4O7
— Sheetal Chopra 🇮🇳 (@SheetalPronamo) October 1, 2025
ಇದನ್ನೂ ಓದಿ:Viral: ‘ಗೋ ಬ್ಯಾಕ್ ಹಿಂದಿ ವಾಲಾ ಆಟೋಸ್’; ಬೆಂಗಳೂರು ಆಟೋರಿಕ್ಷಾದ ಹಿಂದೆ ಬರೆದ ಬರಹ ವೈರಲ್
ಅಕ್ಟೋಬರ್ 1 ರಂದು ಶೇರ್ ಮಾಡಲಾದ ಈ ವಿಡಿಯೋ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಹರೇ ಕೃಷ್ಣ ಎಂದಿದ್ದಾರೆ. ಮತ್ತೊಬ್ಬರು ಅದ್ಭುತ, ಇಂತಹ ಕೆಲಸಗಳು ಹೆಚ್ಚೆಚ್ಚು ಆಗಲಿ ಎಂದು ಹೇಳಿದ್ದಾರೆ.. ಸುಂದರ ಹರೇ ಕೃಷ್ಣ ಜೈ ಸನಾತನ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:16 pm, Wed, 1 October 25