Viral Video: ಪ್ರಕೃತಿ ವಿಸ್ಮಯ ಹೇಗಿದೆ ನೋಡಿ, ಬೀದರ್​​ನಲ್ಲಿ ಏಕ ಕಾಲಕ್ಕೆ 6 ಮರಿಗಳಿಗೆ ಜನ್ಮ ನೀಡಿದ ಮೇಕೆ!

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 15, 2024 | 11:40 AM

ಬೀದರ್: ಸಾಮಾನ್ಯವಾಗಿ ಮೇಕೆಗಳು ಎರಡು  ಅಥವಾ ಮೂರು ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಇತ್ತೀಚಿಗೆ  ಮೇಕೆಯೊಂದು  ಒಂದಲ್ಲ ಎರಡಲ್ಲ ಏಕ ಕಾಲಕ್ಕೆ ಬರೋಬ್ಬರಿ  ಆರು ಮರಿಗಳಿಗೆ ಜನ್ಮ ನೀಡುವ ಮೂಲಕ ಅಚ್ಚರಿಯನ್ನು ಮೂಡಿಸಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. 

Viral Video: ಪ್ರಕೃತಿ ವಿಸ್ಮಯ ಹೇಗಿದೆ ನೋಡಿ, ಬೀದರ್​​ನಲ್ಲಿ ಏಕ ಕಾಲಕ್ಕೆ 6 ಮರಿಗಳಿಗೆ ಜನ್ಮ ನೀಡಿದ ಮೇಕೆ!
ವೈರಲ್​​ ವಿಡಿಯೋ
Follow us on

ಪ್ರಕೃತಿಯ ವಿಸ್ಮಯ ಯಾರು ಬಲ್ಲರು ಹೇಳಿ. ಇಂತಹ ಹಲವಾರು  ವಿಸ್ಮಯ ಸಂಗತಿಗಳ ಸುದ್ದಿಗಳು ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಅಚ್ಚರಿಯ ವಿಸ್ಮಯ ಸಂಗತಿಗಳು ನಮ್ಮನ್ನು ಬಾಯಿ ಮೇಲೆ ಬೆರಳಿಡುವಂತೆ ಮಾಡುತ್ತವೆ. ಇತ್ತೀಚಿಗೆ  ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಅಂತಹೊಂದು ಅಚ್ಚರಿಯ  ಘಟನೆ ನಡೆದಿದ್ದು, ಮೇಕೆಯೊಂದು ಒಂದಲ್ಲ, ಎರಡಲ್ಲ  ಏಕ ಕಾಲಕ್ಕೆ ಬರೋಬ್ಬರಿ ಆರು ಮರಿಗಳಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ಮೇಕೆಗಳು 2 ಅಥವಾ 3 ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ ಈ ಮೇಕೆ  ಒಂದೇ  ಬಾರಿಗೆ ಆರು ಮರಿಗೆ ಜನ್ಮ ನೀಡುವ ಮೂಲಕ ಅಚ್ಚರಿಯನ್ನು ಮೂಡಿಸಿದೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ನಾಗಣ್ಣ ಎಂಬರವ ಮನೆಯಲ್ಲಿ  ಸಾಕಿದ್ದ ಮೇಕೆಯೊಂದು   ಎರಡು ತಿಂಗಳ ಹಿಂದೆ ಏಕ ಕಾಲಕ್ಕೆ  ಬರೋಬ್ಬರಿ  ಆರು ಮರಿಗಳಿಗೆ ಜನ್ಮ ನೀಡಿದ್ದು, ಈ ಕುರಿತ ವಿಡಿಯೋವೊಂದು ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು @bidarupdates ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ಒಂದೇ ಬಾರಿಗೆ ಆರು ಮರಿಗಳಿಗೆ ಜನ್ಮ ನೀಡಿದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದಾಪುರ ಗ್ರಾಮದ ನಾಗಣ್ಣ ಎಂಬವರು ಸಾಕಿದ ಆಡು” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಏಕ ಕಾಲಕ್ಕೆ ಆರು ಮರಿಗಳಿಗೆ ಜನ್ಮ ನೀಡಿದ ಮೇಕೆಯನ್ನು ಮತ್ತು ಅದರ ಮರಿಗಳನ್ನು ನೋಡಲು ಸ್ಥಳೀಯರು ನಾಗಣ್ಣ ಎಂಬವರ ಮನೆಯ ಬಳಿ ನೆರೆದಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: 7ನೇ ವಯಸ್ಸಿಗೆ ಶಸ್ತ್ರ ಚಿಕಿತ್ಸೆ ಮಾಡಿ, ವಿಶ್ವದ ಅತ್ಯಂತ ಕಿರಿಯ ಸರ್ಜನ್ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅಕ್ರಿತ್

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 5.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  ಒಂದುವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ.  ಹಾಗೂ ಹಲವಾರು ಕಾಮೆಂಟ್ಸ್ಗಳೂ ಹರಿದ ಬಂದಿವೆ. ಒಬ್ಬ ಬಳಕೆದಾರರು ʼಮೇಕೆ 4 ಮರಿ ಹಾಕೋದನ್ನು ನೋಡಿದ್ದೆ, ಇದೇನ್ ಅದ್ಭುತ ಗುರು ಈ ಮೇಕೆ 6 ಮರಿ ಹಾಕಿದೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಮ್ಮ ಮನೆಯ ಮೇಕೆ 5 ಮರಿಗಳನ್ನು ಹಾಕಿತ್ತುʼ ಎಂದು ಹೇಳಿದ್ದಾರೆ.  ಇನ್ನೂ ಅನೇಕರು ಈ ಅಚ್ಚರಿಯನ್ನು ಕಂಡು ಶಾಕ್ ಆಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ