ಕ್ಷಕರುಗಳ ನಡುವೆ ಜಗಳಗಳು, ಮನಸ್ಥಾಪಗಳು ಏರ್ಪಡುವುದು ತೀರಾ ವಿರಳ. ಅವರು ಏನೇ ಇದ್ದರೂ ತಮ್ಮ ಪ್ರಬುದ್ಧ ಮಾತುಕತೆಯಲ್ಲಿಯೇ ಮನಸ್ತಾಪಗಳನ್ನು ಬರೆಹರಿಸಿಕೊಳ್ಳುತ್ತಾರೆ. ಆದ್ರೆ ಇಲ್ಲಿಬ್ಬರು ಶಿಕ್ಷಕರು ತಾವು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವ ಗುರುಗಳೆಂಬುವುದನ್ನೂ ಮರೆತು ಕೈ ಕೈ ಮಿಲಾಯಿಸಿಕೊಂಡು ಕಿತ್ತಾಡಿಕೊಂಡಿದ್ದಾರೆ. ರಜೆಯ ವಿಚಾರವಾಗಿ ಲೇಡಿ ಟೀಚರ್ ಮತ್ತು ಮೇಷ್ಟ್ರ ನಡುವೆ ಜಗಳ ಏರ್ಪಟ್ಟಿದ್ದು, ಈ ಭಾರೀ ಗಲಾಟೆಯ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬಿಹಾರದ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಶಿಕ್ಷಕರ ಮಧ್ಯೆ ವಾಗ್ವಾದ ಏರ್ಪಟ್ಟಿದ್ದು, ಈ ವಾಗ್ವಾದ ತೀವ್ರ ರೂಪ ಪಡೆದು ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಇಲ್ಲಿನ ಗೋಪಾಲ್‌ಗಂಜ್‌ನ ಬರೌಲಿಯಲ್ಲಿರುವ ಸರ್ಕಾರಿ ಶಾಲೆಯ ಶಿಕ್ಷಕರಿಬ್ಬರು ರಜೆಯ ವಿಚಾರವಾಗಿ ರಂಪಾಟ ಮಾಡಿಕೊಂಡಿದ್ದಾರೆ ಎಂಬುದು ವರದಿಯಾಗಿದೆ. ಲೇಡಿ ಟೀಚರ್‌ಗೆ ರಜೆಯ ಅವಶ್ಯಕತೆ ಎಷ್ಟಿತ್ತೆಂದರೆ ತಾನು ಶಿಕ್ಷಕಿಯೆಂಬುದನ್ನು ಮರೆತು ಕುರ್ಚಿ ಮೇಲೆ ಕುಳಿತಿದ್ದ ಮೇಷ್ಟ್ರ ಕತ್ತಿನ ಪಟ್ಟಿ ಹಿಡಿದು ರಂಪಾಟ ಮಾಡಿದ್ದಾರೆ.
Kalesh b/w a Male teacher and a Female teacher inside School over some Leave issues, Gopalganj Bihar
pic.twitter.com/UfYHq1rnva— Ghar Ke Kalesh (@gharkekalesh) October 6, 2024
ಈ ಕುರಿತ ವಿಡಿಯೋವನ್ಜು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಲೇಡಿ ಟೀಚರ್ ಮತ್ತು ಮೇಷ್ಟ್ರ ನಡುವೆ ರಜೆಯ ವಿಚಾರವಾಗಿ ಭಾರೀ ಗಲಾಟೆ ನಡೆಯುವ ದೃಶ್ಯವನ್ನು ಕಾಣಬಹುದು. ತನ್ನ ತಾಳ್ಮೆಯನ್ನು ಕಳೆದುಕೊಂಡ ಲೇಡಿ ಟೀಚರ್ ಮೇಷ್ಟ್ರ ಕೊರಳ ಪಟ್ಟಿಯನ್ನು ಹಿಡಿದು ರಂಪಾಟ ಮಾಡಿದ್ದಾರೆ. ಸಹ ಶಿಕ್ಷಕರು ಮಧ್ಯೆ ಬಂದು ಇವರಿಬ್ಬರ ಜಗಳವನ್ನು ನಿಲ್ಲಿಸಿದ್ದಾರೆ.
ಇದನ್ನೂ ಓದಿ: ಒಂದಲ್ಲ ಎರಡಲ್ಲ ಬರೋಬ್ಬರಿ 20 ಗಿನ್ನೆಸ್ ದಾಖಲೆ ಮಾಡಿದ ಕುಟುಂಬ
ಅಕ್ಟೋಬರ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಶಿಕ್ಷಕರೇ ಹೀಗೆ ಜಗಳವಾಡಿದರೆ ಖಂಡಿತವಾಗಿಯೂ ಇದು ವಿದ್ಯಾರ್ಥಿಗಳ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುತ್ತದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಶಿಕ್ಷಕರಿಗೆ ಶಿಕ್ಷಣದ ಅವಶ್ಯಕತೆ ತುಂಬಾನೇ ಇದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆ ಮಹಿಳೆಗೆ ಇನ್ನು ಖಾಯಂ ರಜೆ ದೊರರಯುವುದಂತೂ ಗ್ಯಾರಂಟಿʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ