Viral: ಒಂದಲ್ಲ ಎರಡಲ್ಲ ಬರೋಬ್ಬರಿ 20 ಗಿನ್ನೆಸ್ ದಾಖಲೆ ಮಾಡಿದ ಕುಟುಂಬ
ಪ್ರತಿಭೆ, ಸಾಹಸ, ವಿಚಿತ್ರ ಅವತಾರಗಳ ಮೂಲಕ ಗಿನ್ನೆಸ್ ದಾಖಲೆ ಸೃಷ್ಟಿಸಿದ ಹಲವರಿದ್ದಾರೆ. ಅದೇ ರೀತಿ ಇಲ್ಲೊಂದು ಕುಟುಂಬ ತಮ್ಮ ಒರಿಗಾಮಿ ಕಲೆಯಿಂದಲೇ ಒಂದಲ್ಲ ಎರಡಲ್ಲ ಬರೋಬ್ಬರಿ 20 ಗಿನ್ನಿಸ್ ವಿಶ್ವ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ತಮ್ಮ ಅನನ್ಯ ಪ್ರತಿಭೆಯ ಮೂಲಕವೇ ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿ ಗಮನ ಸೆಳೆದವರು ಹಲವರಿದ್ದಾರೆ. ಅಂತೆಯೇ ಇಲ್ಲೊಂದು ಹೈದರಬಾದ್‌ನ ಕುಟುಂಬ ತಮ್ಮ ಒರಿಗಾಮಿ ಕಲೆ, ಕೌಶಲ್ಯದಿಂದಲೇ ಒಂದಲ್ಲ ಎರಡಲ್ಲ ಬರೋಬ್ಬರಿ 20 ಗಿನ್ನಿಸ್ ದಾಖಲೆಯನ್ನು ಸೃಷ್ಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
GITAM ಡೀಮ್ಡ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿನಿ ಹಾಗೂ ವೃತ್ತಿಯಲ್ಲಿ ಇಂಜಿನಿಯರ್ ಆಗಿರುವಂತಹ ಶಿವಾಲಿ ಜೋಶಿ ಶ್ರೀವಾಸ್ತವ ಮತ್ತು ಅವರ ಪೋಷಕರಾದ ಅನಿಲ್ ಶ್ರೀವಾಸ್ತವ ಮತ್ತು ಕವಿತಾ ಜೋಹ್ರಿ ಶ್ರೀವಾಸ್ತವ ತಮ್ಮ ಒರಿಗಾಮಿ ಕಲೆ ಕೌಶಲ್ಯದಿಂದ ಬರೋಬ್ಬರಿ 20 ಗಿನ್ನಿಸ್ ವಿಶ್ವ ದಾಖಲೆಗಳನ್ನು ಮಾಡಿದ್ದಾರೆ. ಮೂಲತಃ ಒರಿಗಾಮಿ ಕಲೆ ಜಪಾನ್ ಜಪಾನ್ ದೇಶದ್ದು. ಪೇಪರ್‌ನಲ್ಲಿ ವಿವಿಧ ಆಕೃತಿ ಹಾಗೂ ಕಲಾಕೃತಿಗಳನ್ನು ರಚಿಸುವ ಕಲೆಯೇ ಒರಿಗಾಮಿ. ಇದೀಗ ಈ ಒರಿಗಾಮಿ ಕಲಾ ಕೌಶಲ್ಯದಿಂದಲೇ ಹೈದರಬಾದ್‌ನ ಈ ಕುಟುಂಬ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಿದೆ.
ಶಿವಾಲಿ ಮತ್ತು ಅವರ ಪೋಷಕರು 3,400 ಒರಿಗಾಮಿ ನವಿಲು, 4,400 ಒರಿಗಾಮಿ ಶರ್ಟ್‌ಗಳು, 3,200 ಒರಿಗಾಮಿ ಹಂದಿಗಳನ್ನು ರಚಿಸುವ ಮೂಲಕ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಿದ್ದಾರೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಅಧಿಕಾರಿಗಳು ಈ ಕುಟುಂಬ ಸಲ್ಲಿಸಿದ ವಿಡಿಯೋ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ಇವರ ಹೆಸರನ್ನು ಗಿನ್ನೆಸ್ ದಾಖಲೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಮೂಲಕ ಶಿವಾಲಿ ಕುಟುಂಬ 18, 19 ಮತ್ತು 20 ನೇ ವಿಶ್ವ ದಾಖಲೆಯನ್ನು ಮಾಡುವ ಮೂಲಕ ಒಂದೇ ಬಾರಿಗೆ 3 ಗಿನ್ನೆಸ್ ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಬೀದಿ ಬದಿ ಸ್ಟೈಲಿಶ್ ಆಗಿ ಚಹಾ ಮಾರುವ ಈ ಯುವತಿಯನ್ನೊಮ್ಮೆ ನೋಡಿ
ಒರಿಗಾಮಿ ಕಲಾವಿದೆ ಶಿವಾಲಿ ಜೊಹ್ರಿ ಶ್ರೀವಾಸ್ತವ ತಿಮಿಂಗಿಲಗಳು, ಪೆಂಗ್ವಿನ್‌ಗಳು, ಸಿಟ್ರಿಕ್ ಹಣ್ಣುಗಳು, ಮೇಪಲ್ ಎಲೆಗಳು, ನಾಯಿಗಳು, ಡೈನೋಸರ್ ಸೇರಿದಂತೆ ಇತ್ಯಾದಿ ಬಗೆಬಗೆಯ ಕಾಗದದ ಪ್ರತಿಮೆ ಮತ್ತು ಕಲಾಕೃತಿಗಳನ್ನು ತಯಾರಿಸುವ ಮೂಲಕ 17 ಗಿನ್ನಿಸ್ ದಾಖಲೆಯನ್ನು ಮಾಡಿದ್ದರು. ಇದೀಗ ಇವರು 3,400 ಒರಿಗಾಮಿ ನವಿಲು, 4,400 ಒರಿಗಾಮಿ ಶರ್ಟ್‌ಗಳು, 3,200 ಒರಿಗಾಮಿ ಹಂದಿಗಳನ್ನು ರಚಿಸುವ ಮೂಲಕ ಒಂದೇ ಬಾರಿಗೆ 3 ವಿಶ್ವ ದಾಖಲೆಯನ್ನು ಮಾಡುವ ಮೂಲಕ 20 ಗಿನ್ನೆಸ್ ದಾಖಲೆಯನ್ನು ಪಡೆದುಕೊಂಡ ಕುಟುಂಬ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ