Viral: ಮೂರು ದಿನ ಅಲ್ಲಿ, ಮೂರು ದಿನ ಇಲ್ಲಿ, ಒಂದು ದಿನ ರಜೆ; ಗಂಡನನ್ನೇ ಹಂಚಿಕೊಂಡ ಇಬ್ಬರು ಪತ್ನಿಯರು
ಗಲಾಟೆ, ಜಗಳಗಳು ನಡೆದು ಮನೆ, ಆಸ್ತಿಗಳನ್ನು ಭಾಗ ಮಾಡುವುದನ್ನು ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಪತ್ನಿಯರಿಬ್ಬರು ತಮ್ಮ ಗಂಡನನ್ನೇ ಹಂಚಿಕೊಂಡಿಕೊಂಡಿದ್ದಾರೆ. ಹೌದು ಮೂರು ದಿನ ಅಲ್ಲಿ, ಮೂರು ದಿನ ಇಲ್ಲಿ ಎಂದು ವಾರದಲ್ಲಿ ಮೂರು ಮೂರು ದಿನಗಳಂತೆ ಪತಿರಾಯನನ್ನು ಹಂಚಿಕೊಂಡಿದ್ದಾರೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ.

ಜಾಗ, ಆಸ್ತಿ, ಪಾಸ್ತಿ, ತಂದೆ-ತಾಯಿಗೆ ಸೇರಿದ ಬಂಗಾರ ಹಣಗಳನ್ನು ಅಣ್ಣ-ತಮ್ಮಂದಿರು, ಕುಟುಂಬಸ್ಥರು ಹಂಚಿಕೊಳ್ಳುವುದನ್ನು ಅಥವಾ ಗಲಾಟೆ ಮನಸ್ತಾಪಗಳು ನಡೆದು ಕುಟುಂಬಸ್ಥರು ಮನೆ, ಆಸ್ತಿ ಪಾಸ್ತಿಗಳನ್ನು ಭಾಗ ಮಾಡುವುದನ್ನು ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಗಂಡನನ್ನೇ ಹೆಂಡ್ತಿಯರಿಬ್ಬರು ಹಂಚಿಕೊಂಡಿದ್ದಾರೆ. ಹೌದು ಮೂರು ದಿನ ಅಲ್ಲಿ, ಮೂರು ದಿನ ಇಲ್ಲಿ ಎಂದು ವಾರದಲ್ಲಿ ಮೂರು ಮೂರು ದಿನಗಳಂತೆ ಪತಿರಾಯನನ್ನು ಪತ್ನಿಯರಿಬ್ಬರು ಹಂಚಿಕೊಂಡಿದ್ದಾರೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ.
ಬಿಹಾರದ ಪೂರ್ಣಿಯಾ ಎಂಬಲ್ಲಿ ಈ ವಿಚಿತ್ರ ಪ್ರಕರಣ ನಡೆದಿದ್ದು, ಮೂರು ದಿನ ಅಲ್ಲಿ, ಮೂರು ದಿನ ಇಲ್ಲಿ ಎಂದು ವಾರದಲ್ಲಿ ಮೂರು ಮೂರು ದಿನಗಳಂತೆ ಪತಿರಾಯನನ್ನು ಪತ್ನಿಯರಿಬ್ಬರು ಹಂಚಿಕೊಂಡಿದ್ದಾರೆ. ಮೊದಲ ಹೆಂಡತಿಗೆ ತಿಳಿಸದೆ ಪತಿರಾಯ ಇನ್ನೊಬ್ಬಳನ್ನು ಮದುವೆಯಾಗಿದ್ದು, ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ, ಪೊಲೀಸ್ ಮತ್ತು ಕುಟುಂಬ ಸಲಹಾಕೇಂದ್ರ ಗಂಡ ಮೂರು ದಿನ ಮೊದಲ ಹೆಂಡತಿಯ ಜೊತೆ ವಾರದಲ್ಲಿ ಮೂರು ದಿನ ಎರಡನೇ ಹೆಂಡತಿಯ ಜೊತೆ ಇರಬೇಕು, ಇನ್ನೂ ಉಳಿದ ಒಂದು ದಿನ ಆತ ಆ ಇಬ್ಬರು ಪತ್ನಿಯರಲ್ಲಿ ತನಗಿಷ್ಟವಾದವರ ಜೊತೆ ಇರಬಹುದು ಎಂದು ಗಂಡನನ್ನೇ ಇಬ್ಬರು ಹೆಂಡತಿಯರ ನಡುವೆ ಹಂಚಿಕೆ ಮಾಡಿದ್ದಾರೆ.
ಪೊಲೀಸರ ಮೊರೆ ಹೋದ ಮೊದಲ ಪತ್ನಿ:
ಸುಮಾರು ಏಳು ವರ್ಷಗಳ ಹಿಂದೆ, ಆ ವ್ಯಕ್ತಿ ತನ್ನ ಮೊದಲ ಹೆಂಡತಿಗೆ ತಿಳಿಸದೆ ಎರಡನೇ ವಿವಾಹವಾದನು. ಈ ಘಟನೆಯ ಬಗ್ಗೆ ಮೊದಲ ಪತ್ನಿಗೆ ತಿಳಿದಾಗ, ಆಕೆ ಆಘಾತಕ್ಕೊಳಗಾದಳು ಮತ್ತು ಪೊಲೀಸರಿಗೆ ದೂರು ನೀಡಿದಳು. ಜೊತೆಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದಲ್ಲದೆ, ಮೊದಲ ಪತ್ನಿ ಮತ್ತು ಮಕ್ಕಳನ್ನು ಜವಬ್ದಾರಿಯುತವಾಗಿ ನೋಡಿಕೊಳ್ಳಲಿಲ್ಲ ಎಂಬ ಆರೋಪವೂ ಪತಿ ಮೇಲಿತ್ತು. ಈ ಬಗ್ಗೆ ಮೊದಲ ಪತ್ನಿ ಪೂರ್ಣಿಯಾ ಎಸ್‌ಪಿ ಕಾರ್ತಿಕೇಯ ಶರ್ಮಾ ಅವರಿಗೆ ದೂರು ನೀಡಿದ್ದು, ಎಸ್ಪಿ ಈ ವಿಚಿತ್ರ ಪ್ರಕರಣವನ್ನು ಕುಟುಂಬ ಸಮಾಲೋಚನಾ ಕೇಂದ್ರಕ್ಕೆ ಹಸ್ತಾಂತರಿಸಿದರು.
ಕುಟುಂಬ ಸಮಾಲೋಚನಾ ಕೇಂದ್ರದಲ್ಲಿ ವಿಚಾರಣೆ ಮತ್ತು ಪರಿಹಾರ:
ಕೌಟುಂಬಿಕ ಸಲಹಾ ಕೇಂದ್ರದಲ್ಲಿ, ಮೊದಲ ಪತ್ನಿ ತನ್ನ ಪತಿ ವಿಚ್ಛೇದನ ಪಡೆಯದೆ ಎರಡನೇ ಮದುವೆಯಾದರಲ್ಲದೆ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದಳು. ಈ ಸಂದರ್ಭದಲ್ಲಿ ಪತಿ ತನ್ನ ತಪ್ಪನ್ನು ಒಪ್ಪಿಕೊಂಡು ಮೊದಲ ಪತ್ನಿಯ ಬಳಿ ಹೋಗಲು ಬಯಸಿದಾಗ ಆತನ ಎರಡನೇ ಹೆಂಡತಿ ತಡೆದಿದ್ದು, ಇಬ್ಬರು ಹೆಂಡತಿಯರ ನಡುವಿನ ಜಗಳದಿಂದಾಗಿ ಈ ಪ್ರಕರಣ ಹೆಚ್ಚು ಜಟಿಲವಾಯಿತು.
ಇದನ್ನೂ ಓದಿ: ಒಂದು ರೂಪಾಯಿ ನಾಣ್ಯದಿಂದಲೇ ಕಾರನ್ನು ಅಲಂಕರಿಸಿದ ರಾಜಸ್ತಾನಿ ವ್ಯಕ್ತಿ, ವಿಡಿಯೋ ವೈರಲ್
ಇದಾದ ನಂತರ ಕುಟುಂಬ ಸಲಹಾ ಕೇಂದ್ರದ ಸದಸ್ಯರು ಒಂದು ವಿಶಿಷ್ಟ ಪರಿಹಾರವನ್ನು ಕಂಡುಕೊಂಡರು. ಅದೇನೆಂದರೆ ಗಂಡನನ್ನು ಇಬ್ಬರು ಹೆಂಡತಿಯರ ನಡುವೆ ಹಂಚಲಾಯಿತು. ಅಂದರೆ ವಾರದಲ್ಲಿ ಗಂಡ ಮೊದಲ ಹೆಂಡತಿಯ ಜೊತೆ ಮೂರು ದಿನ ಇದ್ರೆ ಇನ್ನು ಮೂರು ದಿನ ಎರಡನೇ ಹೆಂಡತಿಯ ಜೊತೆ ಇರಬೇಕು. ಮತ್ತು ಉಳಿದ ಒಂದು ದಿನ ಆತ ತನ್ನ ಇಚ್ಛೆಯಂತೆ ಎಲ್ಲಿ ಬೇಕಾದರೂ ಕಳೆಯಬಹುದು.
ಇದಲ್ಲದೆ, ಮಕ್ಕಳ ಶಿಕ್ಷಣ ಮತ್ತು ಆಹಾರಕ್ಕಾಗಿ ಪತಿಯು ತನ್ನ ಮೊದಲ ಪತ್ನಿಗೆ ಪ್ರತಿ ತಿಂಗಳು 4,000 ರೂ.ಗಳನ್ನು ನೀಡಬೇಕೆಂದು ಆದೇಶಿಸಲಾಯಿತು. ಈ ನಿರ್ಧಾರಕ್ಕೆ ಇಬ್ಬರೂ ಹೆಂಡತಿಯರು ಒಪ್ಪಿಕೊಂಡರು. ಹೀಗೆ ಕುಟುಂಬ ಸಮಾಲೋಚನಾ ಕೇಂದ್ರ ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನಂತರ ಈ ವಿಶಿಷ್ಟ ನಿರ್ಧಾರವನ್ನು ತೆಗೆದುಕೊಂಡಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Sun, 16 February 25




