AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ಒಂದು ರೂಪಾಯಿ ನಾಣ್ಯದಿಂದಲೇ ಕಾರನ್ನು ಅಲಂಕರಿಸಿದ ರಾಜಸ್ತಾನಿ ವ್ಯಕ್ತಿ, ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಡಿಯೋಗಳು ಕೆಲವೊಮ್ಮೆ ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಕೆಲವರು ಫೇಮಸ್ ಆಗಲು ಅದ್ಭುತ ಎನಿಸುವ ಕೆಲಸಕ್ಕೆ ಕೈ ಹಾಕುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಕಾರನ್ನು ಒಂದು ರೂಪಾಯಿ ನಾಣ್ಯದಿಂದ ಅಲಂಕರಿಸಿದ್ದಾನೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಿಪಡಿಸಿದ್ದಾರೆ.

Viral : ಒಂದು ರೂಪಾಯಿ ನಾಣ್ಯದಿಂದಲೇ ಕಾರನ್ನು ಅಲಂಕರಿಸಿದ ರಾಜಸ್ತಾನಿ ವ್ಯಕ್ತಿ, ವಿಡಿಯೋ ವೈರಲ್
Rajasthan Man Decorates His Car With One Rupee Coins
ಸಾಯಿನಂದಾ
| Edited By: |

Updated on: Feb 16, 2025 | 10:28 AM

Share

ಕಾರು ಕೊಂಡುಕೊಳ್ಳುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಹೀಗಾಗಿ ದುಡಿದ ಹಣದಲ್ಲಿ ಅಲ್ಪ ಸ್ವಲ್ಪ ಹಣ ಕೂಡಿಟ್ಟು, ಕಾರು ಖರೀದಿ ಮಾಡುವುದನ್ನು ನೋಡಿರಬಹುದು. ಇನ್ನು ಕೆಲವರು ಇಎಂಐಯಲ್ಲಿ ಕಾರು ಖರೀದಿ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಸೆಕೆಂಡ್ ಕೆಲವು ಮಾರ್ಪಡು ಮಾಡುವುದನ್ನು ನೋಡಿರಬಹುದು. ಆದರೆ ನಾಣ್ಯದಿಂದಲೇ ಕಾರನ್ನು ಅಲಂಕಾರ ಮಾಡುವುದನ್ನು ನೋಡಿದ್ದೀರಾ. ಹೌದು, ಇಲ್ಲೊಬ್ಬ ವ್ಯಕ್ತಿ ಕಾರಿನ ತುಂಬಾ ಒಂದು ರೂಪಾಯಿ ನಾಣ್ಯ ಅಂಟಿಸಿ ಗಮನ ಸೆಳೆದಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈತನ ಕ್ರಿಯೆಟಿವಿಯನ್ನು ಮೆಚ್ಚಿಕೊಂಡಿದ್ದಾರೆ.

ಈ ಕಾರಿನ ವೀಡಿಯೊವನ್ನು @experiment_king ಪುಟದಿಂದ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಒಂದು ಕಾರನ್ನು ಕಟೌಟ್ ಪ್ರದೇಶದಲ್ಲಿ ನಿಲ್ಲಿಸಲಾಗಿದೆ. ಒಂದು ರೂಪಾಯಿ ನಾಣ್ಯಗಳಿಂದ ಕಾರನ್ನು ಅಲಂಕರಿಸಿರುವುದನ್ನು ಇಲ್ಲಿ ನೋಡಬಹುದು. ಹೊರಗಿನಿಂದ ನೋಡಿದರೆ ಕಾರಿಗೆ ಸಿಲ್ವರ್ ಕಲರ್ ಬಳಿದಂತೆ ಕಾಣುತ್ತದೆ. ಆದರೆ ನಾಣ್ಯಗಳಿಂದ ಅಲಂಕರಿಲಾಗಿದ್ದು, ಬಿಸಿಲಿಗೆ ಫಳ ಫಳನೇ ಹೊಳೆಯುತ್ತಿದೆ.

ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇಗೆ ಬಾಡಿಗೆ ಬಾಯ್ ಫ್ರೆಂಡ್: ಬೆಂಗಳೂರಿನಲ್ಲಿ ಸಂಚನ ಮೂಡಿಸಿದ QR ಕೋಡ್​​

ಇನ್ನು ಉಳಿದಂತೆ ಕಾರಿನ ಕನ್ನಡಿಗಳು, ಟೈಯರ್ ಹಾಗೂ ದೀಪಗಳನ್ನು ಹೊರತು ಪಡಿಸಿ, ಇಡೀ ವಾಹನವು ಒಂದು ರೂಪಾಯಿ ನಾಣ್ಯದಿಂದಲೇ ಸಿಂಗಾರಗೊಂಡಿದೆ. ಈ ವಿಡಿಯೋ ಇಲ್ಲಿಯವರೆಗೆ ಐದು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಕಂಡಿದ್ದು, ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆ ಮಹಾಪೂರವೇ ಹರಿದು ಬಂದಿದೆ. ಒಬ್ಬ ಬಳಕೆದಾರರು ‘ಹಣ ಮುಖ್ಯವಲ್ಲ, ಬದಲಾವಣೆ ಮುಖ್ಯ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಮಕ್ಕಳನ್ನು ದಯವಿಟ್ಟು ಈ ವಾಹನದಿಂದ ದೂರವಿರಿ’ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಈ ಕಾರು ಅಷ್ಟೊಂದು ಬೆಲೆ ಬಾಳುವುದಿಲ್ಲ’ ಎಂದಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ